ಕುರುಬ ಸಮಾಜದ ಹೋರಾಟದ ಬಗ್ಗೆ ಶ್ರೀರಾಮುಲು ಹೇಳಿದ್ದೇನು? ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆಯುತ್ತಾರಾ ರಾಮುಲು?

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಯಾವತ್ತೂ ಈಡೇರುವುದಿಲ್ಲ. ಸರ್ಕಾರ ಪತನವಾಗುತ್ತದೆ ಎಂಬ ಡಿಕೆಶಿ ಭವಿಷ್ಯವೂ ನಿಜವಾಗುವುದಿಲ್ಲ ಎಂದು ಹೇಳಿದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ತಾನು ತಳಮಟ್ಟದಿಂದ ಬಂದ ರಾಜಕಾರಣಿಯಾಗಿದ್ದು ಯಾರೂ ತುಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

  • Share this:
ಬಾಗಲಕೋಟೆ(ಜ. 03): ಜನಸಂಖ್ಯಾಧಾರಿತವಾಗಿ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ‌. ಕೇಂದ್ರ ಸರ್ಕಾರ ಕೊಟ್ಟರೂ ರಾಜ್ಯ ಸರ್ಕಾರ ಕೊಟ್ಟಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಈಗ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಕುರುಬರು ಎಸ್​ಟಿ ಸೇರ್ಪಡೆಗಾಗಿ ಹೋರಾಟ ಮಾಡ್ತಿದ್ದಾರೆ. ಅಂತಿಮ ತೀರ್ಮಾನ ಏನು ತೆಗೆದುಕೊಳ್ತಾರೆ ನೋಡೋಣ. ವಾಲ್ಮೀಕಿ ಸಮಾಜಕ್ಕೆ ಜನಸಂಖ್ಯಾಧಾರಿತ ಮೀಸಲಾತಿ ಕೊಡಬೇಕೆನ್ನುವುದು ನನ್ನ ಒತ್ತಾಯ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಕುರುಬ ಸಮಾಜ ಎಸ್​ಟಿ ಸೇರ್ಪಡೆ ಸಂಬಂಧ ಹೋರಾಟದ ಬಗ್ಗೆ ಶ್ರೀರಾಮುಲು ಪ್ರತಿಕ್ರಿಯಿಸಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ (ಜಾತಿ ಗಣತಿ) ವರದಿ ಎಲ್ಲಿ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಆಯೋಗದ ವರದಿ ಕೊಡೋ ಸಂದರ್ಭದಲ್ಲಿ ಅಧ್ಯಕ್ಷರ ಅವಧಿ ಮುಗಿದಿತ್ತು. ಆಯೋಗದ ಸದಸ್ಯರು ವರದಿ ಕೊಡುವ ಕೆಲಸ ಮಾಡಿದ್ದಾರೆ. ಅವರು ಆಯೋಗದ ವರದಿ ಎಲ್ಲಿ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಪುನಃ ಪರಿಶೀಲನೆ ಮಾಡ್ತೀವಿ. ವರದಿ ನಮ್ಮ ಕೈ ಸೇರಿದ ನಂತ್ರ ಸಮೀಕ್ಷೆ ಪ್ರಕಾರ ತಕ್ಷಣವೇ ಘೋಷಣೆ ಮಾಡ್ತೀವಿ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

ಎಸ್ ಟಿ ಮೀಸಲಾತಿ ಶೇ. 7.5 ಹೆಚ್ಚಿಸುವ ವಿಚಾರವಾಗಿ ಮಾತನಾಡಿದ ಶ್ರೀರಾಮುಲು, ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚನೆಯಾಗಿದೆ. ಮೊನ್ನೆ ಸಭೆ ಮಾಡಿ ಚರ್ಚಿಸಿದ್ದೇವೆ. ನೂರು ಜಾತಿ ಎಸ್ ಸಿ, 50 ಜಾತಿ ಎಸ್​ಟಿಯಲ್ಲಿವೆ. ಇವೆರಡು ಸೇರಿ ಮೀಸಲಾತಿ 15ರಿಂದ 17 ಆಗಬೇಕು. ನಾಗಮೋಹನ್ ದಾಸ್ ವರದಿಯಲ್ಲಿ ಎಸ್​ಟಿಗೆ ಶೇಕಡಾ 3ರಿಂದ 7.5 ಹೆಚ್ಚಿಸಬೇಕೆಂದು ಹೇಳಿದ್ದಾರೆ. ವರದಿಯ ಸಾಧಕ ಬಾಧಕ ಬಗ್ಗೆ ಚರ್ಚೆ ಆಗುತ್ತಿದೆ. ಇನ್ನೆರಡು ಉಪಸಮಿತಿ ಸಭೆ ಸೇರಿ ತೀರ್ಮಾನಿಸ್ತೇವೆ. ನಮ್ಮ ಸರ್ಕಾರ ಮಾತು ಕೊಟ್ಟಂತೆ ಎಸ್ ಟಿ ಗೆ 7.5ಮೀಸಲಾತಿ ಕೊಡಿಸ್ತೇವೆ. ಎಸ್ ಟಿ ಮೀಸಲಾತಿ ಹೆಚ್ಚಿಸುವ ವಿಚಾರದಲ್ಲಿ  ಕಾಲಮಿತಿ  ಇಲ್ಲ. ಆದಷ್ಟು ಶೀಘ್ರವೇ ಮೀಸಲಾತಿ ಹೆಚ್ಚಳವಾಗುತ್ತೆ. ಜನಸಂಖ್ಯಾಧಾರಿತ ಮೀಸಲಾತಿ, ಎಸ್ ಟಿ ಮೀಸಲಾತಿ ಹೆಚ್ಚಿಸುವ ಮಾತು ಕೊಟ್ಟಂತೆ ನಡೆದುಕೊಳ್ತೇವೆ. ಪ್ರಸನ್ನಾನಂದಪುರಿ ಸ್ವಾಮೀಜಿಯವರ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಧರಣಿ ವಾಪಸ್ ತೆಗೆದುಕೊಂಡಿದ್ದಾರೆ. ಹಲವು ಸರ್ಕಾರಗಳು ಬಂದಿವೆ, ಹೋಗಿವೆ, ಮೀಸಲಾತಿ ಬಗ್ಗೆ ಮಾತನಾಡಿವೆ, ಆದರೆ ಏನು ಮಾಡಿಲ್ಲ. ನಾನು ಬಂದ ಮೇಲೆ ಎಸ್ ಟಿ ಮೀಸಲಾತಿ ಹೆಚ್ಚಳ ಪ್ರಸ್ತಾವನೆ ಕ್ಯಾಬಿನೆಟ್​ಗೆ ತೆಗೆದುಕೊಂಡಿವಿ. ಸಂಪುಟ ಉಪಸಮಿತಿ ರಚನೆಯಾಗಿದೆ ಎಂದರು.

ಇದನ್ನೂ ಓದಿ: ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯಿಂದ ಯಡವಟ್ಟು; ಪೋಸ್ಟ್ ಡಿಲೀಟ್ ಮಾಡಿದರೂ ವೈರಲ್ ಆಯ್ತು ಚಿತ್ರ

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಬರೀ ಕನಸು ಎಂದ ರಾಮುಲು:

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕನಸು ಮನಸಲ್ಲೂ ಮತ್ತೆ ಮುಖ್ಯಮಂತ್ರಿ ಆಗೋಲ್ಲ. ಕಾಂಗ್ರೆಸ್​ನೊಳಗೆ ಸಿಎಂ ಯಾರಾಗಬೇಕೆಂದು ಪೈಪೋಟಿ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಾಟಿ೯ ಒಡಕಾಗಿದೆ. ನಮ್ಮ ಸಕಾ೯ರದ ಮುಖ್ಯಮಂತ್ರಿ ಯಡಿಯೂರಪ್ಪನವರಿದ್ದಾರೆ. ಉಳಿದ ಅವಧಿಗೂ ಬಿಎಸ್​ವೈ ಸಿಎಂ ಆಗಿರುತ್ತಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಸಾಕು, ನಾವು ಸಿಎಂ ಆಗಬೇಕೆಂದು ಕಾಂಗ್ರೆಸ್ಸಿಗರು ಹೊರಟಿದ್ದಾರೆ. ಇದು ಸಾಧ್ಯವಾಗದ ಕೆಲಸ ಎಂದು ಕೈಪಾಳಯಕ್ಕೆ ಸವಾಲು ಹಾಕಿದರು.

ಡಿಕೆಶಿಗೆ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಸವಾಲ್ ಹಾಕಿದ ಸಚಿವ ಶ್ರೀರಾಮುಲು:

ಡಿಕೆಶಿ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕನಾಗಿರೋ ಸಿದ್ದರಾಮಯ್ಯಗೆ ಪಕ್ಷದಲ್ಲಿ ಸ್ಥಾನಮಾನ ಇಲ್ಲದಂತಾಗಿದೆ. ಎಲ್ಲೋ ಒಂದು ಕಡೆ ಡಿಕೆಶಿಯನ್ನ ಡೌನ್ ಫಾಲ್ ಆಗುವಂತೆ ಮಾಡಿ ಆ ಸ್ಥಾನ ಸಿಗಬಹುದೆನ್ನೋ ಆಸೆಯಲ್ಲಿದ್ದಾರೆ. ಮ್ಯೂಸಿಕಲ್ ಚೇರ್​ನಂತೆ ತಿರುಗುತ್ತಿದ್ದಾರೆಂದು ಸಮಾಜ ಕಲ್ಯಣ ಸಚಿವ ಬಿ. ಶ್ರೀರಾಮುಲು ಮಾರ್ಮಿಕವಾಗಿ ಹೇಳಿದರು.

ಬಾದಾಮಿಯಿಂದ ಮತ್ತೆ ಸಿದ್ದರಾಮಯ್ಯ ವಿರುದ್ಧ ಸ್ಫರ್ಧಿಸುವ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಬಹಳಷ್ಟು ಜನರ ಬೇಡಿಕೆ ಇದೆ. ಎಲೆಕ್ಷನ್ ಬಂದಾಗ ಸ್ಫಧೆ೯ ಬಗ್ಗೆ ನಮ್ಮ ಹೈಕಮಾಂಡ್ ಹಾಗೂ ನಮ್ಮ ನಾಯಕರು ನಿಧಾ೯ರ ಮಾಡ್ತಾರೆ. ನಮ್ಮ ಕಾಯ೯ಕತ೯ರು, ನಾಯಕರು ಬಾದಾಮಿಯಿಂದಲೇ ಸ್ಫಧೆ೯ ಮಾಡಿ ಎಂದರೆ ಮತ್ತೆ ಸ್ಫಧೆ೯ ಮಾಡ್ತೀನಿ. ಅದ್ರಲ್ಲೇನು ತಪ್ಪಿದೆ? ಸಿದ್ದರಾಮಯ್ಯ ಬೆಳಗಾದ್ರೆ ಸಾಕು ಸಿಎಂ ಆಗಬೇಕು, ಸಿಎಂ ಆಗಬೇಕು ಅಂತಾರೆ. ಸಿಎಂ ಕುಚಿ೯ಯಂತೂ ಖಾಲಿ ಇಲ್ಲ. ಇತ್ತೀಚಿಗೆ ಡಿಕೆಶಿ ಬಹಳಷ್ಟು ಭವಿಷ್ಯ ಹೇಳ್ತಿದ್ದಾರೆ. ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಭವಿಷ್ಯ ಹೇಳಿದರು. ನಾವೇ ಗೆಲ್ತೀವಿ ಅಂದು ಬಳಿಕ ಸೋತು ಹೋದ್ರು. ಸಿಎಂ ಖುಚಿ೯ ಸಂಬಂಧ ಈಗ ಯಡಿಯೂರಪ್ಪಗೆ ಗಂಡಾಂತರ ಕಾಲ ಇದೆ ಅಂತ ಹೇಳ್ತಿದ್ದಾರೆ. ಸಕಾ೯ರದ ಉಳಿದ ದಿನಗಳಲ್ಲೂ ಸಹ ಯಡಿಯೂರಪ್ಪನವರೇ ಸಿಎಂ ಆಗಿತಾ೯ರೆ. ಡಿಕೆಶಿ ಅವರ ಭವಿಷ್ಯವೂ ಸಹ ಸುಳ್ಳಾಗುತ್ತದೆ.

ಇದನ್ನೂ ಓದಿ: ಭೀಮಾ ತೀರದಲ್ಲಿ ಮತ್ತೆ ತಲ್ವಾರ್ ಝಳಪಳ: ಶತ್ರು ಸಂಹಾರ ಪೂಜೆ ನೆರವೇರಿಸಿದ ಭಾಗಪ್ಪ..!

ಡಿಸಿಎಂ ಸ್ಥಾನದ ಬಗ್ಗೆ ಮಾತನಾಡಿದ ಅವರು, ನಾನು ಡಿಸಿಎಂ ಆಗಬೇಕು ಅನ್ನೋದು ಇಡೀ ರಾಜ್ಯದ ಆಶಯ. ನೋಡೋಣ. ನಮ್ಮ ನಾಯಕರು ಸೇರಿ ತೀರ್ಮಾನ ತೆಗೆದುಕೊಳ್ತಾರೆ ಎಂದಷ್ಟೇ ಹೇಳಿದರು. ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದ ಬಳಿಕ ಶ್ರೀರಾಮುಲು ಬಿಜೆಪಿಯಲ್ಲಿ ಸೈಡ್​ಲೈನ್ ಆಗಿದ್ದಾರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ರಾಮುಲು ಪ್ರತಿಕ್ರಿಯಿಸಿ, ತಾನು ಇವತ್ತಿನ ನಾಯಕ ಅಲ್ಲ. ಕೆಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಈ ಸ್ಥಾನಕ್ಕೆ ಬಂದಿದ್ದೇನೆ. ಜನಮತದಿಂದ ಬಂದ ಒಬ್ಬ ನಾಯಕನಾಗಿ ಬೆಳೆದುಕೊಂಡು ಬಂದಿದ್ದೇನೆ. ಇವತ್ತು ನನ್ನ ಜನಪ್ರಿಯತೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿಗೆ ಕುಟುಕಿದರು.

ಬಾಗಲಕೋಟೆ ನವನಗರದ ಕೆಐಎಡಿಬಿಯಲ್ಲಿ ರಂಗನಾಥ್ ಟೆಕ್ಸ್​ಟೈಲ್ಸ್ ಉದ್ಘಾಟಿಸಿ, ಮಾಧ್ಯಮಗಳೊಂದಿಗೆ ಮಾತನಾಡಿ, ಬೀಳಗಿಯ ಯಡಹಳ್ಳಿ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದರು. ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ, ವಾಲ್ಮೀಕಿ ಸಮಾಜದ ಮುಖಂಡ ಶಂಭುಗೌಡ ಪಾಟೀಲ ಇದ್ದರು.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: