• Home
  • »
  • News
  • »
  • district
  • »
  • ಶ್ರೀರಾಮಕೃಷ್ಣ ಆಶ್ರಮದಿಂದ 4 ತಾಲೂಕುಗಳಲ್ಲಿ ಬಡಮಕ್ಕಳಿಗೆ ದೂರತರಂಗ ಶಿಕ್ಷಣ, ಕೌಶಲ್ಯ ನೈಪುಣ್ಯ ಯೋಜನೆ

ಶ್ರೀರಾಮಕೃಷ್ಣ ಆಶ್ರಮದಿಂದ 4 ತಾಲೂಕುಗಳಲ್ಲಿ ಬಡಮಕ್ಕಳಿಗೆ ದೂರತರಂಗ ಶಿಕ್ಷಣ, ಕೌಶಲ್ಯ ನೈಪುಣ್ಯ ಯೋಜನೆ

ಸ್ವಾಮಿ ಜಪಾನಂದ

ಸ್ವಾಮಿ ಜಪಾನಂದ

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಕೈಗೊಂಡಿರುವ 27 ಸೇವಾ ಯೋಜನೆಗಳನ್ನು ಮೆಚ್ಚಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಸ್ವತಃ ಪತ್ರ ಬರೆದು ಸಂಸ್ಥೆಯ ಕೆಲಸಗಳನ್ನು ಕೊಂಡಾಡಿದ್ದಾರೆ.

  • Share this:

ತುಮಕೂರು: ಪಾವಗಡದ ಶ್ರೀರಾಮಕೃಷ್ಣ ಸೇವಾ ಆಶ್ರಮದ ವತಿಯಿಂದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲೂಕುಗಳ 7 ರಿಂದ 10ನೇ ತರಗತಿಯ ಮಕ್ಕಳಿಗಾಗಿ ದೂರ ತರಂಗ ಶಿಕ್ಷಣ ಹಾಗೂ ಕೌಶಲ್ಯ ನೈಪುಣ್ಯ ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ಸ್ವಾಮೀ ಜಪಾನಂದ ಜೀ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ, ಸ್ವಾಮೀ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರ ಹಾಗೂ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕೇಂದ್ರದ ಸುತ್ತಮುತ್ತಲ 500 ಹಳ್ಳಿಗಳ ಆರೋಗ್ಯ, ಅಕ್ಷರ, ಆಸರೆ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ 27 ಯೋಜನೆಗಳನ್ನು ಹಮ್ಮಿಕೊಂಡಿದ್ದು, ಆನ್ ಲೈನ್ ತರಗತಿಗಳಿಂದ ವಂಚಿತರಾಗುತ್ತಿದ್ದ ಗಡಿನಾಡಿನ ಮಕ್ಕಳನ್ನು ಗಮನದಲ್ಲಿಸಿಕೊಂಡು ದೂರ ತರಂಗ ಶಿಕ್ಷಣ ಮತ್ತು ಕೌಶಲ್ಯ ನೈಪುಣ್ಯ ಯೋಜನೆ ಜಾರಿಗೆ ತರಲಾಗಿದೆ ಎಂದರು.


ದೂರ ತರಂಗ ಶಿಕ್ಷಣದ‌ ಯೋಜನೆಯಡಿ ಅದರ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರಿದ ಮಧುಗಿರಿ,‌ ಶಿರಾ, ಪಾವಗಡ ಮತ್ತು ಕೊರಟಗೆರೆ ತಾಲೂಕುಗಳ ಸುಮಾರು 40 ಕುಗ್ರಾಮ ಮತ್ತು ಗಡಿ‌‌ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ದೃಶ್ಯ ಮತ್ತು ಶ್ರಮದ ಅತ್ಯಾಧುನಿಕ ಯಂತ್ರೋಪಕರಣ, ಡಿಜಿಟಲ್ ಟಚ್ ಬೊರ್ಡ್ ಮೂಲಕ ಎಲ್ಲಾ ವಿಷಯಗಳ ಬೋಧನೆ ದೊರೆಯುವಂತೆ ಮಾಡಲಾಗುತ್ತಿದೆ. 7ನೇ ತರಗತಿಯಿಂದ 10 ನೇ ತರಗತಿಯವರೆಗಿನ ಸುಮಾರು 15 ಸಾವಿರ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ಕೋರಿಕೆಯ ಮೇರೆಗೆ ಒಂದು ಯಂತ್ರವನ್ನು ತುಮಕೂರಿನ ರೆಡ್ ಕ್ರಾಸ್ ನವರು ನಡೆಸುತ್ತಿರುವ ಕಿವುಡು ಮತ್ತು ಮೂಕ ಮಕ್ಕಳ ಶಾಲೆಗೆ ನೀಡಲಾಗಿದೆ. ಇಷ್ಟು ಯೋಜನೆಯನ್ನು ಇನ್ಫೋಸಿಸ್‌ನ ಸಂಸ್ಥೆಯ ಸಹಯೋಗದಲ್ಲಿ ನಡೆಸುತ್ತಿದ್ದು, ಇದರ ನಿರ್ವಹಣೆಯನ್ನು ಇನ್ಫೋಸಿಸ್ ಸಂಸ್ಥೆಯ ಸಮರ್ಪಣಾ ಸೇವಾ ಸಂಸ್ಥೆ ಮಾಡಲಿದೆ ಎಂದುಜಪಾನಂದ ಸ್ವಾಮೀಜಿ ಹೇಳಿತಿಳಿಸಿದರು.


ಇದನ್ನೂ ಓದಿ: Toll Booth - ಇನ್ನೊಂದು ವರ್ಷದಲ್ಲಿ ಟೋಲ್ ಬೂತ್ ವ್ಯವಸ್ಥೆಯೇ ರದ್ದು: ಕೇಂದ್ರ ಸಾರಿಗೆ ಸಚಿವ


ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಕೈಗೊಂಡಿರುವ 27 ಸೇವಾ ಯೋಜನೆಗಳನ್ನು ಮೆಚ್ಚಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಸ್ವತಃ ಪತ್ರ ಬರೆದು ಸಂಸ್ಥೆಯ ಕೆಲಸಗಳನ್ನು ಕೊಂಡಾಡಿದ್ದಾರೆ. ಇದು ನಮ್ಮ ಸೇವಾ ಕಾರ್ಯಗಳಿಗೆ ನೂರಾನೆಯ బల ಬಂದಂತಾಗಿದೆ. ಅಲ್ಲದೆ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸಿಕೊಳ್ಳಲು ಸ್ಫೂರ್ತಿ ನೀಡಿದೆ ಎಂದು ಸ್ವಾಮೀಜಿ ಅಭಿಮಾನದಿಂದ ನುಡಿದರು.


ಪ್ರಸ್ತುತ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಕ್ಷಯ, ಕುಷ್ಠ, ಹೆಚ್.ಐ.ವಿ ಪೀಡಿತರು ಸೇವೆಯಲ್ಲಿ ತೊಡಗಿ, ಸಾವಿರಾರು ರೋಗಿಗಳನ್ನು ಗುಣಪಡಿಸಲಾಗಿದೆ. ಇದುವರೆಗೆ 6,39,739 ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ, ಒಳರೋಗಿಗಳಾಗಿ 1,39,957 ಜನರು ಚಿಕಿತ್ಸೆ ಪಡೆದಿದ್ದಾರೆ. ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆಯಿಂದ ಚಿಕ್ಕಮಕ್ಕಳಿಗೆ 13 ಸಾವಿರಕ್ಕು ಹೆಚ್ಚಿನ ಕಣ್ಣಿನ ಆಪರೇಷನ್ ಮಾಡಲಾಗಿದೆ. ಹೊಸದಾಗಿ ಮಿಂಟೋ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿಸುಸಜ್ಜಿತ ಏಷ್ಯಾದಲ್ಲಿಯೇ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು, ಸದ್ಯದಲ್ಲಿಯೇ ರೋಗಿಗಳ ಸೇವೆಗೆ ಲಭ್ಯವಾಗಲಿದೆ ಎಂದು ಜಪಾನಂದ ಸ್ವಾಮಿಜಿ ತಿಳಿಸಿದರು.


ಇದನ್ನೂ ಓದಿ: ಸಿಂದಗಿ ಉಪಚುನಾವಣೆ: ಅಶೋಕ ಮನಗೂಳಿಗೆ ಕಾಂಗ್ರೆಸ್ ಟಿಕೆಟ್; ಗೆಲುವಿನ ವಿಶ್ವಾಸದಲ್ಲಿ ಮಾಜಿ ಸಚಿವರ ಮಗ


ಅತ್ಯಂತ ಬರದ ಪ್ರದೇಶವಾಗಿರುವ ಪಾವಗಡ ತಾಲೂಕಿನ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ತಾಲೂಕಿನಲ್ಲಿ 11 ಶುದ್ದ ಕುಡಿಯುವ ನೀರಿನ ಘಟಕ ಮತ್ತು ತುಮಕೂರು ನಗರದಲ್ಲಿ ಒಂದು ಘಟಕವನ್ನು ಸ್ಥಾಪಿಸಿ ನಿರ್ವಹಿಸುತ್ತಿದೆ. ಇದುವರೆಗೂ ಯಾವುದೇ ತೊಂದರೆಯಾಗದಂತೆ ಅವುಗಳಿಂದ ಜನ ನಿರು ಕುಡಿಯುತ್ತಿದ್ದಾರೆ. ಆದರೆ ಸರಕಾರ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ವ್ಯವಸ್ಥಾಪಕ ನಾಗರಾಜು ಉಪಸ್ಥಿತರಿದ್ದರು..


ವರದಿ: ವಿಠಲ್ ಕುಮಾರ್

Published by:Vijayasarthy SN
First published: