ಉನ್ನತ ಹುದ್ದೆ ಅಲಂಕರಿಸಿರುವವರೆಲ್ಲ ಓದಿದ್ದು ಸರ್ಕಾರಿ ಶಾಲೆ, ಕಾಲೇಜುಗಳಲ್ಲೇ: ಎಸ್.ಆರ್. ವಿಶ್ವನಾಥ್

ನಾವೆಲ್ಲಾ ಓದಿದ್ದು ಸರ್ಕಾರಿ ಶಾಲೆ ಕಾಲೇಜುಗಳಲ್ಲೆ. ಅದರಲ್ಲೂ ಉನ್ನತ ಹುದ್ದೆ, ಎತ್ತರಕ್ಕೆ ಏರಿದವರೆಲ್ಲಾ ಓದಿ ಜೀವನ ಕಟ್ಟಿಕೊಂಡಿದ್ದು ಸರ್ಕಾರಿ ಶಾಲೆ-ಕಾಲೇಜುಗಳಲ್ಲೆ ಅನ್ನೋದು ನಮ್ಮ ಹೆಮ್ಮೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅಭಿಮಾನ ತೋರ್ಪಡಿಸಿದ್ದಾರೆ.

ಎಸ್.ಆರ್. ವಿಶ್ವನಾಥ್

ಎಸ್.ಆರ್. ವಿಶ್ವನಾಥ್

  • Share this:
ಯಲಹಂಕ: ಜನರಿಗೆ ಅದೇನಾಗಿದೆಯೋ ಗೊತ್ತಿಲ್ಲ, ಖಾಸಗಿ ಶಾಲೆ ಕಾಲೇಜುಗಳಲ್ಲಿ ಓದಿದ್ರೆ ಮಾತ್ರ ವಿದ್ಯೆ ಅನ್ನೋ ದೋರಣೆಗಳು ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇವೆ. ಇದರಿಂದಾಗಿ ಖಾಸಗಿ ಹೈಟೆಕ್ ಕಾಲೇಜುಗಳು, ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಲೇ ಇವೆ. ಅದಾಗಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಉತ್ತಮ ಶಿಕ್ಷಕರು, ಪ್ರಾಧ್ಯಾಪಕರು ಇಲ್ಲ ಅನ್ನೋ ಆರೋಪಕ್ಕೆ ಇಲ್ಲೊಂದು ಕಾಲೇಜು ಅಪವಾದವಾಗಿದೆ. ಇದು ಸರ್ಕಾರಿ ಕಾಲೇಜಾ ಅಥವಾ ಖಾಸಗಿ ಕಾಲೇಜಾ ಅನ್ನೋ ಅನುಮಾನ ಮೂಡಿಸುತ್ತೆ. ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಗುಣಗಾನ ಮಾಡಿದ್ದಾರೆ.

ನ್ಯೂಸ್ 18 ಜೊತೆ ಮಾತನಾಡಿದ ಯಲಹಂಕ ಶಾಸಕರೂ ಆದ ಎಸ್.ಆರ್.ವಿಶ್ವನಾಥ್, ಜನರು ಆರ್ಥಿಕವಾಗಿ ಸುಸ್ಥಿರರಾಗಿದ್ದಾರೆ. ಪ್ರತಿಷ್ಠೆ ಪ್ರಶ್ನೆಯಿಂದ ಒಬ್ಬರನ್ನ ನೋಡಿ ಮತ್ತೊಬ್ಬರು ಸಾಲಾ ಸೋಲ ಮಾಡಿ ಖಾಸಗಿ ಶಾಲೆ, ಕಾಲೇಜುಗಳಿಗೆ ಸೇರಿಸ್ತಿದ್ದಾರೆ. ಆದರೆ ನಾವೆಲ್ಲಾ ಓದಿದ್ದು ಸರ್ಕಾರಿ ಶಾಲೆ ಕಾಲೇಜುಗಳಲ್ಲೆ. ಅದರಲ್ಲೂ ಉನ್ನತ ಹುದ್ದೆ, ಎತ್ತರಕ್ಕೆ ಏರಿದವರೆಲ್ಲಾ ಓದಿ ಜೀವನ ಕಟ್ಟಿಕೊಂಡಿದ್ದು ಸರ್ಕಾರಿ ಶಾಲೆ-ಕಾಲೇಜುಗಳಲ್ಲೆ ಅನ್ನೋದು ನಮ್ಮ ಹೆಮ್ಮೆ ಎಂದು ಅಭಿಮಾನ ತೋರ್ಪಡಿಸಿದ್ದಾರೆ.

ಸದ್ಯ, ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎಗಳಿಗೆ ಪ್ರವೇಶ ನೊಂದಣಿ ಆರಂಭ ಆಗಿದೆ. ಆದರೆ ಕಾಲೇಜು ತೆರೆಯಲು ಯುಜಿಸಿ ನಿರ್ದೇಶನ ಬರುವವರೆಗೂ ಆಗಲ್ಲ. ಬಹುಶಃ ಸೆಪ್ಟೆಂಬರ್​ನಲ್ಲಿ ಕಾಲೇಜುಗಳು ತೆರೆಯಲಿದೆ ಎಂದವರು ಆಶಿಸಿದ್ದಾರೆ.

ಇದನ್ನೂ ಓದಿ: ರೈಲ್ವೆ ಖಾಸಗೀಕರಣ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ನಾಯಕರು

ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದಲ್ಲೇ ಎರಡನೆ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. ನುರಿತ ಪ್ರಾಧ್ಯಾಪಕರು, ಪಿ.ಹೆಚ್.ಡಿ ಮಾಡಿದ ಸುಮಾರು 60 ಕ್ಕೂ ಹೆಚ್ಚು ಪ್ರಾಧ್ಯಾಪಕರ ತಂಡ ಮಕ್ಕಳಿಗಾಗಿ ಶ್ರಮಿಸುತ್ತಿದೆ. ಸದ್ಯ ಕಾಲೇಜಿನಲ್ಲಿ 3,200 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದು ಸೀಟ್ ಸಿಗುವುದೇ ಕಷ್ಟವಾಗುತ್ತಿದೆ. ಸುತ್ತಮುತ್ತಲ ಜಿಲ್ಲೆಯ ವಿದ್ಯಾರ್ಥಿಗಳು ಸಹ ಯಥೇಚ್ಚವಾಗಿ ಬರುತ್ತಿರುವುದು ನಮ್ಮ ಶ್ರಮಕ್ಕೆ ಸಂದ ಪರಿಶ್ರಮ ಎಂಬ ಸಾರ್ಥಕತೆ ನಮ್ಮಲ್ಲಿದೆ. ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತ್ಯುತ್ತಮ ಕೌಶಲ್ಯಾಭಿವೃದ್ದಿ, ವಿವಿಧ ಕ್ಷೇತ್ರಗಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ಪ್ಲೇಸ್ಮೆಂಟ್ ಸಹ ಕೊಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಏಟಿಗೆ ಕುಂಬಾರರ ಬದುಕು ದುಸ್ತರ; ಸರ್ಕಾರ ಸಹಾಯ ಮಾಡಿದರಷ್ಟೇ ಬದುಕಿಗೆ ಆಧಾರಪ್ರಾದ್ಯಾಪಕರು ವಿದ್ಯಾರ್ಥಿಗಳ ಜೊತೆ ಸಂವಾದ, ಅವರ ಅವಶ್ಯಕತೆಗಳ ಬಗ್ಗೆ ಚರ್ಚೆ ನಡೆಸಿ ಬೇಕಾದ ವ್ಯವಸ್ತೆ ಕಲ್ಪಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇನ್ನೂ ಮೂರು ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮತ್ತು ಉನ್ನತ ಮಟ್ಟಕ್ಕೆ ಏರಿಸಲಾಗುತ್ತಿದೆ. ಖಾಸಗಿ ಕಾಲೇಜಿನವರೇ ಬಂದು ನಮ್ಮ ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸ್ತಿದಾರೆ ಎಂದು ಎಸ್.ಆರ್. ವಿಶ್ವನಾಥ್ ಹರ್ಷ ವ್ಯಕ್ತಪಡಿಸಿದ್ದಾರೆ.
Published by:Vijayasarthy SN
First published: