BJP ಸೇರ್ತಾರಾ S.R.Patil? ಪ್ರಶ್ನೆಗೆ ಚುನಾವಣೆಯಲ್ಲಿ ನಮ್ಮ ಚಡ್ಡಿ, ನಮ್ಮ ಹಿಂಬಾಲ ಇರುತ್ತೆ ಅಂದ್ರು!

ಜನ ಅವರಿಗೆ ಆಶೀರ್ವಾದ ಮಾಡಿದರೆ ಅವರು ಇರುತ್ತಾರೆ. ನಮಗೆ ಆಶೀರ್ವಾದ ಮಾಡಿದರೆ ನಾವಿರುತ್ತೇವೆ. ನಾವು ಪರಸ್ಪರ ವೈರಿಗಳಲ್ಲ,ನಾವೂ ಜನಸೇವೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇವೆ. ಅವರೂ ಜನಸೇವೆ ಮಾಡಬೇಕೆಂದು ಬಿಜೆಪಿಗೆ ಬಂದಿದ್ದಾರೆ ಎಂದರು.

ಎಸ್.ಆರ್.ಪಾಟೀಲ್

ಎಸ್.ಆರ್.ಪಾಟೀಲ್

  • Share this:
 ಬಾಗಲಕೋಟೆ: ಬಿಜೆಪಿ (BJP) ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದ ಸಚಿವ ಕೆ.ಎಸ್.ಈಶ್ವರಪ್ಪ (Minister K.S.Eshwarappa) ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ (SR Patil) ಇಂದು ಬಾಗಲಕೋಟೆಯಲ್ಲಿ (Bagalkot) ಸ್ಪಷ್ಟನೆ ನೀಡಿದರು. ನಾನು ನನ್ನ ಬದುಕಿನಲ್ಲೇ, ನನ್ನ ಪಕ್ಷದ ಸಿದ್ಧಾಂತಕ್ಕೆ ವ್ಯತಿರಿಕ್ತವಾದ  ನಿರ್ಧಾರಗಳನ್ನ ತೆಗೆದುಕೊಳ್ಳುವದಿಲ್ಲ. ಈಶ್ವರಪ್ಪ ಬಿಜೆಪಿ ತತ್ವ ಸಿದ್ಧಾಂತಕ್ಕೆ ಅನುಗುಣವಾಗಿ ಅವರ ಪಕ್ಷದಲ್ಲಿದ್ದಾರೆ. ನಾವು ಅಭಿವೃದ್ಧಿ ಕೆಲಸ ಮಾಡುವ ಸಮಯದಲ್ಲಿ ಜೊತೆಯಾಗಿ ಕೆಲಸ ಮಾಡುತ್ತೇವೆ.  ಚುನಾವಣೆ (Election) ಬಂದ ಸಂದರ್ಭದಲ್ಲಿ ಅವರ ಚಡ್ಡಿ ಹಿಂಬಾಲ, ನಮ್ಮ ಚಡ್ಡಿ  ನಮ್ಮ ಹಿಂಬಾಲ  ಇರುತ್ತೆ ಎಂದು ಉತ್ತರಿಸಿದರು.

ಜನ ಅವರಿಗೆ ಆಶೀರ್ವಾದ ಮಾಡಿದರೆ ಅವರು ಇರುತ್ತಾರೆ. ನಮಗೆ ಆಶೀರ್ವಾದ ಮಾಡಿದರೆ ನಾವಿರುತ್ತೇವೆ. ನಾವು ಪರಸ್ಪರ ವೈರಿಗಳಲ್ಲ,ನಾವೂ ಜನಸೇವೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇವೆ. ಅವರೂ ಜನಸೇವೆ ಮಾಡಬೇಕೆಂದು ಬಿಜೆಪಿಗೆ ಬಂದಿದ್ದಾರೆ ಎಂದರು.

ನನ್ನ ಪಕ್ಷ ನನಗೆ ಸ್ಥಾನಮಾನ ನೀಡಿದೆ

ಸೈದಾಂತಿಕ ನಿಲುವಿನಲ್ಲಿ ನಮ್ಮ ಮತ್ತು ಅವರ ಮಧ್ಯೆ ಭಿನ್ನಾಭಿಪ್ರಾಯಗಳು ಇವೆ. 45 ವರ್ಷ ಅಖಂಡವಾಗಿ ಒಂದು ಪಕ್ಷದಲ್ಲಿ ಇದ್ದು, ಒಂದು ಪಕ್ಷದ ಸಿದ್ಧಾಂತವನ್ನು ನಂಬಿಕೊಂಡು ಬಂದಿದ್ದೇನೆ. ನನ್ನ ಪಕ್ಷ ನನಗೆ ಅವಕಾಶ ಕೊಟ್ಟಿದೆ, ಅನೇಕ ಸ್ಥಾನಮಾನಗಳನ್ನು ಕೊಟ್ಟಿದೆ. ಜನಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ, ಇಂಥ ಸಮಯದಲ್ಲಿ ಕೇವಲ ಟಿಕೆಟ್ ತಪ್ಪಿದ್ದಕ್ಕೆ ಆ ಪಕ್ಷಕ್ಕೆ ಈ ಪಕ್ಷಕ್ಕೆ ಹೋಗುವುದು ನಮ್ಮ ಜಾಯಮಾನಕ್ಕೆ ಒಪ್ಪುವಂಥದಲ್ಲ ಎಂದು ಬಿಜೆಪಿ ಸೇರ್ಪಡೆಯ ಸುದ್ದಿಯನ್ನು ಅಲ್ಲಗಳೆದರು.

ಇದನ್ನೂ ಓದಿ: Mandya Politics: ಅಂದು ಸುಮಲತಾ, ಇಂದು ಮಂಜುನಾಥ್: ಮತ್ತೇ ಹಳೆ ತಂತ್ರ ಪ್ರಯೋಗ ಮಾಡ್ತಾ ಜೆಡಿಎಸ್?

ಈಶ್ವರಪ್ಪನವರದು ವೈಯಕ್ತಿಕ ಅಭಿಪ್ರಾಯ

ಒಳ್ಳೆಯ ಸ್ಥಾನಮಾನಗಳು ಯಾಕೆ ಬೇಕು, ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲ ಆಗಲು ಬೇಕು. ಈಶ್ವರಪ್ಪನವರದು ವೈಯಕ್ತಿಕ ಅಭಿಪ್ರಾಯ ಅದು ಅವರ ವಿಚಾರ. ನಾನು ನನ್ನ ಪಕ್ಷದ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ನಿರ್ಧಾರಗಳನ್ನ ನನ್ನ ಬದುಕಿನಲ್ಲಿ ತೆಗೆದುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಾರಿ ತಪ್ಪಿದ ಟಿಕೆಟ್

ನಾಲ್ಕು ಬಾರಿ MLC ಸದ್ಯ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿರುವ ಎಸ್.ಆರ್.ಪಾಟೀಲ್ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು.

ಪಾಟೀಲರಿಗೆ ಟಿಕೆಟ್ ತಪ್ಪಿದ್ದಕ್ಕೆ ಡಿಕೆಶಿ ಸ್ಪಷ್ಟನೆ

ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಲವೊಮ್ಮೆ ಸ್ಥಳೀಯ ನಾಯಕರ ಮಾತು ಕೇಳಬೇಕಾಗುತ್ತದೆ. ರಾಜ್ಯಸಭಾ ಚುನಾವಣೆ  ಸಂದರ್ಭದಲ್ಲಿ ಇದು ನಮ್ಮ ಗಮನಕ್ಕೆ ಬಂದಿದೆ. ಇದು ಅನಿವಾರ್ಯ ಎಂದು ಹೇಳಿದ್ದರು.

ಇದನ್ನೂ ಓದಿ:  ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ: Ramesh Jarkiholi

ಪಕ್ಷದಲ್ಲಿ ಹಿರಿಯರಾಗಿರುವ ಎಸ್.ಪಾಟೀಲ್ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಹೇಳಿದ್ದರು.

ಡಿಸೆಂಬರ್ 10 ಮತದಾನ, ಡಿ.14ಕ್ಕೆ ಫಲಿತಾಂಶ

2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ.

ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಎಲೆಕ್ಷನ್ ನಡೆಯಲಿದೆ.
Published by:Mahmadrafik K
First published: