HOME » NEWS » District » SPOORTHI SEVA TRUST DISTRIBUTE FREE FOOD SINCE LAST THREE DECADES IN DAVANAGERE RHHSN

ಬೆಣ್ಣೆ ನಗರಿಯ ಸ್ಫೂರ್ತಿ ಸೇವಾ ಟ್ರಸ್ಟ್​ನಿಂದ ಮೂರು ದಶಕಗಳಿಂದ ಪ್ರತಿನಿತ್ಯ ಅನ್ನದಾಸೋಹ

ತಾವಾಯಿತು ತಮ್ಮ ಕುಟುಂಬವಾಯಿತು ಅಂತ ಹೇಳಿ  ಬಾಳುವವರ ಮಧ್ಯೆ ಸಮಾಜಕ್ಕೆ ತಮ್ಮ ಕೈಲಾದ ಸೇವೆಯನ್ನು ನೀಡಬೇಕು ಅಂತ ನಿಸ್ವಾರ್ಥ ಮನೋಭಾವನೆಯಿಂದ ಕೆಲಸ ಮಾಡುತ್ತಿರುವ ಸತ್ಯನಾರಾಯಣ ರೆಡ್ಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿ ಅನ್ನೋದೆ ಜನರ ಆಶಯ.

HR Ramesh | news18-kannada
Updated:May 8, 2021, 7:51 AM IST
ಬೆಣ್ಣೆ ನಗರಿಯ ಸ್ಫೂರ್ತಿ ಸೇವಾ ಟ್ರಸ್ಟ್​ನಿಂದ ಮೂರು ದಶಕಗಳಿಂದ ಪ್ರತಿನಿತ್ಯ ಅನ್ನದಾಸೋಹ
ಸ್ಫೂರ್ತಿ ಸೇವಾ ಟ್ರಸ್ಟ್​ನಿಂದ ಅನ್ನದಾಸೋಹ.
  • Share this:
ದಾವಣಗೆರೆ: ಕೋವಿಡ್ ಮಹಾಮಾರಿ ಎಲ್ಲೆಡೆ ವ್ಯಾಪಿಸಿ ಸಾಕಷ್ಟು ಜನರ ಉದ್ಯೋಗ ಕಿತ್ತುಕೊಂಡಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರು, ಕೂಲಿ ಕಾರ್ಮಿಕರು, ಚಾಲಕರು  ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ತುತ್ತಿನ ಚೀಲ ತುಂಬಿಸಲು ಹುಟ್ಟಿರುವಂತಹ ಈ ಸಂಸ್ಥೆಯೇ ಸ್ಪೂರ್ತಿ ಸೇವಾ ಟ್ರಸ್ಟ್. ಹಸಿದವರಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಅನ್ನ ನೀಡುವ ಇವರ ಕೆಲಸ ಬೆಣ್ಣೆ ನಗರಿಯ ಜನರ ಮನಸ್ಸು ಗೆದ್ದಿದೆ.

ಕೆಲವರು ಉಚಿತವಾಗಿ ಬಡವರಿಗೆ ಊಟ ಹಾಕುತ್ತಿದ್ದಾರೆ ಅಂದ್ರೆ ಅದಕ್ಕೆ ಏನೋ ಒಂದು ಬಲವಾದ ಕಾರಣ  ಇರುತ್ತೆ. ಅವರ ರಾಜಕೀಯ ಪ್ರಚಾರಕ್ಕೋ, ವೈಯಕ್ತಿಕ ವರ್ಚಸ್ಸೋ ಹೀಗೆ ಹಲವು ಕಾರಣಗಳಿಂದ ಅನ್ನ- ನೀರು ನೀಡುವ ಕೆಲಸ ಮಾಡ್ತಾರೆ. ಆದರೆ ದಾವಣಗೆರೆ ಎಂ ಸಿಸಿ "ಎ" ಬ್ಲಾಕ್ ನ ಸ್ಪೂರ್ತಿ ಸೇವಾ ಟ್ರಸ್ಟ್ ನವರು ಕಳೆದ ಮೂರು ದಶಕಗಳಿಂದ ಹಸಿದವರಿಗೆ ಅನ್ನ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಕೋವಿಡ್ ಸಮಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಆಸ್ಪತ್ರೆ ಬಸ್ ಸ್ಟಾಪ್ ಅನಾಥ ಆಶ್ರಮಗಳಿಗೆ, ಭಿಕ್ಷುಕರಿಗೆ ಅನ್ನ ನೀಡುವ ಕೆಲಸ ಮಾಡುತ್ತಿದ್ದಾರೆ.

ಸತ್ಯನಾರಾಯಣ ರೆಡ್ಡಿ ಎಂಬುವರು ಈ ಸಂಸ್ಥೆಯ ಟ್ರಸ್ಟಿಯಾಗಿದ್ದು, ಇವರ ಮನೆಯ ಕುಟುಂಬ ಸದಸ್ಯರೆಲ್ಲ ಸೇರಿ ಅವರ ಸ್ವಂತ ಹಣದಲ್ಲಿ ಅಕ್ಕಿ, ಬೆಳೆ, ತರಕಾರಿ ತಂದು ಸ್ವತಃ ಅವರೆ ಅಡುಗೆ ತಯಾರಿಸಿ ಅವರದೆ ವಾಹನದಲ್ಲಿ ಅನ್ನದ ಪಾಕೆಟ್ ಗಳನ್ನು ಹಂಚುವ ಕೆಲಸ ಮಾಡುತಿದ್ದಾರೆ. ಸಿದ್ದಗಂಗಾ ಮಠದ ದಿವಂಗತ ಶಿವಕುಮಾರ್ ಶ್ರೀಗಳು, ಗದುಗಿನ ಪುಟ್ಟರಾಜ ಗವಾಯಿಗಳೇ ಈ ಕಾರ್ಯಕ್ಕೆ ಸ್ಪೂರ್ತಿ. ಅವರ ಮಾನವೀಯ ಕಾರ್ಯಗಳನ್ನ ಗಮನಿಸಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಅಂತ ಮೂರು ದಶಕಗಳಿಂದ ಹಸಿದವರಿಗೆ ಊಟ ನೀಡುವ ಕೆಲಸ ಮಾಡುತಿದ್ದಾರೆ. ಇನ್ನೂ ಯಾವುದೇ ಪಕ್ಷ, ಸಿದ್ದಾಂತಗಳಿಗೆ ಅಂಟಿಕೊಳ್ಳದೆ‌ ಯಾವುದೇ ಪ್ರಚಾರ ಇಲ್ಲದೆ, ಜ್ಯಾತ್ಯತೀತವಾಗಿ ಈ ಅನ್ನದಾಸೋಹ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಕೆಲ ಜನರು ಕೂಡ ಅವರ ಬಿಡುವಿನ ಸಮಯದಲ್ಲಿ ಬಂದು ಅವರ ಜೊತೆ ಕೈ ಜೋಡಿಸಿ ಅನ್ನ ಹಂಚುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಇದನ್ನು ಓದಿ: Lockdown Guideline: ಬಹುತೇಕ ಹಿಂದಿನ ಕರ್ಫ್ಯೂ ನಿಯಮಗಳೇ ಜಾರಿ; ಹಾಗಾದರೆ ನಿರ್ಬಂಧ ಯಾವುದಕ್ಕೆ?

ಇನ್ನೂ ಹಣಕಾಸಿ‌ನ ವ್ಯವಸ್ಥೆ, ಅದಕ್ಕೆ ಹೆಚ್ಚಿನ ಸಮಯ ನೀಡುವ ಅಗತ್ಯತೆ ಇದ್ದರು ಮನೆಯ ಸದಸ್ಯರು ಕೂಡ ಅವರಿಗೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದೆ ಅವರ ಕೆಲಸ ಕಾರ್ಯಗಳಿಗೆ ಕೈ ಜೋಡಿಸಿದ್ದಾರೆ.‌ ಇಂತಹ ಮಾನವೀಯ ಕುಟುಂಬವನ್ನ, ಸಮಾಜಮುಖಿ ಕೆಲಸವನ್ನ ಕಂಡು ಜಿಲ್ಲೆಯ ಜನರು ಕೂಡ ಅವರನ್ನ ಮುಕ್ತಕಂಠದಿಂದ ಹಾಡಿ ಹೊಗಳುತ್ತಾರೆ.
Youtube Video

ತಾವಾಯಿತು ತಮ್ಮ ಕುಟುಂಬವಾಯಿತು ಅಂತ ಹೇಳಿ  ಬಾಳುವವರ ಮಧ್ಯೆ ಸಮಾಜಕ್ಕೆ ತಮ್ಮ ಕೈಲಾದ ಸೇವೆಯನ್ನು ನೀಡಬೇಕು ಅಂತ ನಿಸ್ವಾರ್ಥ ಮನೋಭಾವನೆಯಿಂದ ಕೆಲಸ ಮಾಡುತ್ತಿರುವ ಸತ್ಯನಾರಾಯಣ ರೆಡ್ಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿ ಅನ್ನೋದೆ ಜನರ ಆಶಯ.

  • ವರದಿ: ಸಂಜಯ್ ಎ.ಪಿ. ಕುಂದುವಾಡ

Published by: HR Ramesh
First published: May 8, 2021, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories