Split In JDS: ಚನ್ನಪಟ್ಟಣ JDSನಲ್ಲಿ ಬಿರುಕು, ಸಿ.ಪಿ.ಯೋಗೇಶ್ವರ್ ಕಡೆಗೆ ಮುಖಂಡರು, ಕಾರ್ಯಕರ್ತರ ವಲಸೆ

ಯೋಗೇಶ್ವರ್ ನಾಯಕತ್ವಕ್ಕೆ ಮೆಚ್ಚಿ ನೂರಾರು ಜನ ಜೆಡಿಎಸ್ ಪ್ರಮುಖ ಮುಖಂಡರೇ ಬಿಜೆಪಿ ಪಕ್ಷ ಸೇರುತ್ತಿದ್ದಾರೆ.‌ ಕುಮಾರಸ್ವಾಮಿ ರವರು ಕ್ಷೇತ್ರದ ಶಾಸಕರಾದ ಬಳಿಕ ಚನ್ನಪಟ್ಟಣ ಜೆಡಿಎಸ್ ನಲ್ಲಿ ಪ್ರತ್ಯೇಕ ಗುಂಪುಗಳು ಹೆಚ್ಚಾಗಿದ್ದು ಅದು ಕುಮಾರಸ್ವಾಮಿ ಗೆ ಈಗ ದೊಡ್ಡ ಮಟ್ಟದಲ್ಲಿ ಪೆಟ್ಟಾಗುತ್ತಿದೆ.

ಸಿ.ಪಿ.ಯೋಗೇಶ್ವರ್

ಸಿ.ಪಿ.ಯೋಗೇಶ್ವರ್

  • Share this:
ರಾಮನಗರ(ಫೆ.23): 2018 ರಲ್ಲಿ ಜೆಡಿಎಸ್ (JDS) ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು, ಶಾಸಕರಾಗಿ (MLA) ರಾಜ್ಯದ ಸಿಎಂ ಸಹ ಆದರೂ. ಆದರೆ 2023 ರ ಚುನಾವಣೆ ಏನಾಗಲಿದೆ ಎಂದು ಸ್ವತಃ ಜೆಡಿಎಸ್ ಪಕ್ಷದವರೇ ಚಿಂತೆ ಮಾಡುವಂತಾಗಿದೆ. ಯಾಕೆಂದರೆ ಕ್ಷೇತ್ರದ ಮಾಜಿ ಸಚಿವ, ಬಿಜೆಪಿ ಪ್ರಭಾವಿ ನಾಯಕ ಸಿ.ಪಿ.ಯೋಗೇಶ್ವರ್ ಈಗ ಫುಲ್ ಅಕ್ಟೀವ್ ಆಗಿದ್ದಾರೆ. ಯೋಗೇಶ್ವರ್ ನಾಯಕತ್ವಕ್ಕೆ ಮೆಚ್ಚಿ ನೂರಾರು ಜನ ಜೆಡಿಎಸ್ ಪ್ರಮುಖ ಮುಖಂಡರೇ ಬಿಜೆಪಿ (BJP) ಪಕ್ಷ ಸೇರುತ್ತಿದ್ದಾರೆ.‌ ಕುಮಾರಸ್ವಾಮಿ ರವರು ಕ್ಷೇತ್ರದ ಶಾಸಕರಾದ ಬಳಿಕ ಚನ್ನಪಟ್ಟಣ ಜೆಡಿಎಸ್ ನಲ್ಲಿ ಪ್ರತ್ಯೇಕ ಗುಂಪುಗಳು ಹೆಚ್ಚಾಗಿದ್ದು ಅದು ಕುಮಾರಸ್ವಾಮಿ ಗೆ ಈಗ ದೊಡ್ಡ ಮಟ್ಟದಲ್ಲಿ ಪೆಟ್ಟಾಗುತ್ತಿದೆ. ಚನ್ನಪಟ್ಟಣದ ಕಡೆಗೆ ಗಮನಬಿಟ್ಟ ಕುಮಾರಸ್ವಾಮಿ ಗೆ ಈಗ ಇದು ತಲೆನೋವಾಗಿದೆ.

ಜತೆಗೆ ಸಿಎಂ ಆದ ಮೊದಲ ಒಂದು ವರ್ಷಗಳ ಕಾಲ ಚನ್ನಪಟ್ಟಣದ ಕಡೆಗೆ ಮುಖ ಮಾಡದ ಕುಮಾರಸ್ವಾಮಿ ನಡೆಗೆ ಸ್ವತಃ ಜೆಡಿಎಸ್ ಪಕ್ಷದಲ್ಲಿಯೇ ಭಾರೀ ವಿರೋಧ ವ್ಯಕ್ತವಾಗಿತ್ತು.‌ ನಂತರ ಅಧಿಕಾರ ಕಳೆದುಕೊಂಡ ನಂತರ ಕುಮಾರಸ್ವಾಮಿ ರವರು ಕ್ಷೇತ್ರದ ಕಡೆ ಕಾಲಿಟ್ಟರು. ಅಷ್ಟರಲ್ಲಿ ಚನ್ನಪಟ್ಟಣ ಜೆಡಿಎಸ್ ನಲ್ಲಿ ಗುಂಪುಗಾರಿಕೆ (Groupism) ಹೆಚ್ಚಾಗಿ ಪಕ್ಷದೊಳಗೆ ಆಂತರಿಕ ಕಿತ್ತಾಟ ಜೋರಾಗಿತ್ತು.‌

ಮುಖಂಡರ ಉಳಿಸಿಕೊಳ್ಳುವಲ್ಲಿ ಹೆಚ್ಡಿಕೆ ಸಂಪೂರ್ಣ ವಿಫಲ : 

ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡ ಎಸ್.ಲಿಂಗೇಶ್ ಕುಮಾರ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿಗೆ ಮಾನಸಪುತ್ರನಂತಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಜತೆಗೂ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದರು. ಆದರೆ ಕಾಲಕ್ರಮೇಣ ಅವರ ಪಕ್ಷದ ಕೆಲವರೇ ಅವರ ವಿರುದ್ಧ ರಾಜಕೀಯ ಮಾಡಲು ಹೊರಟರು.

ಇದನ್ನೂ ಓದಿ: ಹಾನಗಲ್ ಉಪಚುನಾವಣೆ ಅಭ್ಯರ್ಥಿ ಘೋಷಣೆ ಮಾಡಿದ ಜೆಡಿಎಸ್

ಆದರೆ ಈ ಸಂದರ್ಭದಲ್ಲಿ ಕುಮಾರಸ್ವಾಮಿ ರವರು ಮಧ್ಯಸ್ಥಿಕೆವಹಿಸಿಕೊಂಡು ರಾಜೀ ಮಾಡಿದ್ದರೆ ಪಕ್ಷದಲ್ಲಿ ಯಾವುದೇ ಗೊಂದಲಗಳು ಇರುತ್ತಿರಲಿಲ್ಲ. ಆದರೆ ಇದ್ಯಾವುದಕ್ಕೂ ತಲೆಹಾಕದ ಕುಮಾರಸ್ವಾಮಿಯವರ ನಡೆಯಿಂದ ಬೇಸತ್ತು ಈಗ ಲಿಂಗೇಶ್ ಕುಮಾರ್ ಯೋಗೇಶ್ವರ್ ಜತೆಗೆ ಕೈಜೋಡಿಸಿ ಬಿಜೆಪಿ ಸೇರಿದ್ದಾರೆ.‌ ಅವರ ಅಪಾರ ಬೆಂಬಲಿಗರು (Supporters) ಸಹ ಕೈಜೋಡಿಸಿದ್ದಾರೆ.

ಸಿಎಂ ಆಗಿದ್ದ ವೇಳೆ ಮುಖಂಡರ ಗಮನಿಸದ ಕುಮಾರಸ್ವಾಮಿ : 

ಕುಮಾರಸ್ವಾಮಿ ರವರು ಸಿಎಂ ಆಗಿದ್ದ ವೇಳೆ ಚನ್ನಪಟ್ಟಣದ ಮುಖಂಡರ ಕಡೆಗೆ ಕಿಂಚಿತ್ತು ಗಮನಕೊಡಲಿಲ್ಲ ಅನ್ನೋದು ಸ್ವತಃ ಜೆಡಿಎಸ್ ಪಕ್ಷದ ಮುಖಂಡರ ಆರೋಪ.‌ ಈಗ ಸಿ.ಪಿ.ಯೋಗೇಶ್ವರ್ (CP Yogeshwar) ರವರು ಕೇವಲ ವಿಧಾನಪರಿಷತ್ ಸದಸ್ಯರಾಗಿದ್ದರೂ ಸಹ ಅವರ ಕಾರ್ಯಕರ್ತರಿಗೆ ಕೆಲವು ನಾಮಿನಿ‌ ಹುದ್ದೆಗಳನ್ನ ನೀಡಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ.‌

ಇದನ್ನೂ ಓದಿ: JDS Candidates: ಎರಡು ಕ್ಷೇತ್ರಗಳಿಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ ಜೆಡಿಎಸ್; ಸಿಂಧಗಿಗೆ ಶಕೀಲಾ, ಹಾನಗಲ್​ನಿಂದ ನಿಯಾಜ್ ಸ್ಪರ್ಧೆ!

ಆದರೆ ಕುಮಾರಸ್ವಾಮಿ ರವರು ಈ ಕೆಲಸ ಮಾಡಲಿಲ್ಲ ಎಂಬುದು ಜೆಡಿಎಸ್ ಮುಖಂಡರೇ ರಾಜಕೀಯ ಪಡಸಾಲೆಗಳಲ್ಲಿ ಚರ್ಚೆ ಮಾಡಿದ್ದಾರೆ.‌ ಈ ಎಲ್ಲಾ ಕಾರಣದಿಂದಲೇ ಚನ್ನಪಟ್ಟಣದಲ್ಲಿ ಜೆಡಿಎಸ್ ನೆಲಕಚ್ಚುತ್ತಿದೆ ಎಂದು ಹೇಳಲಾಗ್ತಿದೆ.
Published by:Divya D
First published: