HOME » NEWS » District » SPECIAL WORSHIP IN TEMPLES ACROSS YADAGIRI DISTRICT AS LAND WORSHIP IN AYODHYA MAK

ಅಯೋಧ್ಯೆಯಲ್ಲಿ ಭೂಮಿ ಪೂಜೆ ಮಾಡುತ್ತಿದ್ದಂತೆ ಯಾದಗಿರಿ ಜಿಲ್ಲಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ

ಯಾದಗಿರಿ ನಗರದ ಗಂಜ್ ಪ್ರದೇಶದಲ್ಲಿನ ಹನುಮಾನ ಮಂದಿರದಲ್ಲಿ ರಾಮ ಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಕ್ಷೀರಾಭೀಷಕ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮಕ್ಕಳು, ಮಹಿಳೆಯರು, ಯುವಕರು ಶ್ರೀರಾಮನಿಗೆ ಜಯಘೋಷ ಹಾಕಿದ್ದಾರೆ. ನಂತರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

news18-kannada
Updated:August 5, 2020, 3:10 PM IST
ಅಯೋಧ್ಯೆಯಲ್ಲಿ ಭೂಮಿ ಪೂಜೆ ಮಾಡುತ್ತಿದ್ದಂತೆ ಯಾದಗಿರಿ ಜಿಲ್ಲಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ: ಶ್ರೀರಾಮನ ಜನ್ಮ‌ ಸ್ಥಳ ಅಯೋಧ್ಯೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅತ್ತ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ ಇತ್ತ ಯಾದಗಿರಿ ಜಿಲ್ಲೆಯ ದೇಗುಲದಲ್ಲಿ ಹಾಗೂ ವಿವಿಧೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ಜಿಲ್ಲೆಯ ಗುರುಮಠಕಲ್ ಪಟ್ಟಣದ ನಗರೇಶ್ವರ ಮಂದಿರ, ಹನುಮಾನ ಮಂದಿರ ಸೇರಿದಂತೆ ಎಲ್ಲಾ ದೇಗುಲದಲ್ಲಿ ಶ್ರೀರಾಮನ ಭಕ್ತರು ವಿಶೇಷ ಪೂಜೆ ನಡೆಸಿದ್ದಾರೆ.

ಗುರುಮಠಕಲ್ ಪಟ್ಟಣದಲ್ಲಿ ಶ್ರೀರಾಮನ ಬಂಟ ಹನುಮಾನ ಮಂದಿರದಲ್ಲಿ ಅಭಿಷೇಕ ಹಾಗೂ ವಿವಿಧ ಪೂಜೆ ಮಾಡಲಾಯಿತು. ಪೂಜೆ ಕಾರ್ಯನಂತರ ಕರಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅದೆ ರೀತಿ ರೀತಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೈಕಾರ ಹಾಕಲಾಗಿದೆ. ಈ ಬಗ್ಗೆ ಶ್ರೀರಾಮನ ಭಕ್ತ ಗುರುಮಠಕಲ್ ನಿವಾಸಿ ಬಸವರಾಜ ಮಾತನಾಡಿ, "ಬಹು ವರ್ಷದ ನಂತರ  ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಗಿದ್ದು ಗುರುಮಠಕಲ್ ಪಟ್ಟಣದ ಎಲ್ಲಾ ದೇಗುಲದಲ್ಲಿ ಪೂಜೆ ಮಾಡಲಾಗಿದೆ. ಇದು ಅತ್ಯಂತ ಸಂತಸದ ಕ್ಷಣವಾಗಿದೆ" ಎಂದಿದ್ದಾರೆ.

ಯಾದಗಿರಿ ನಗರದ ಗಂಜ್ ಪ್ರದೇಶದಲ್ಲಿನ ಹನುಮಾನ ಮಂದಿರದಲ್ಲಿ ರಾಮ ಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಕ್ಷೀರಾಭೀಷಕ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮಕ್ಕಳು, ಮಹಿಳೆಯರು, ಯುವಕರು ಶ್ರೀರಾಮನಿಗೆ ಜಯಘೋಷ ಹಾಕಿದ್ದಾರೆ. ನಂತರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅದೆ ರೀತಿ ನಗರದ ಶಾಸ್ತ್ರೀ ವೃತ್ತದ ಸಮೀಪ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಕಚೇರಿ ಆವರಣದಲ್ಲಿರುವ ಹನುಮಾನ ಮಂದಿರದ ಮುಂಭಾಗದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಹಾಗೂ ಅನೇಕ ಗಣ್ಯರು ಶ್ರೀರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : Ram Mandir: ಜೈ ಶ್ರೀರಾಮ ಘೋಷಣೆ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ; ಪ್ರಧಾನಿ ಮೋದಿ

ಈ ವೇಳೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, "ಶ್ರೀರಾಮನ ಭಕ್ತರ ಕನಸು ಈಗ ಈಡೇರಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗ ರಾಮನ ಮಂದಿರಕ್ಕೆ ಭೂಮಿ ಪೂಜೆ ಮಾಡಿದ್ದು, ದೇಶದ ಜನರಿಗೆ ಖುಷಿಯಾಗಿದೆ" ಎಂದಿದ್ದಾರೆ. ಅದೆ ರೀತಿ ಯಾದಗಿರಿ ನಗರದ ವಿವಿಧೆಡೆ ಪೂಜೆ ಮಾಡಲಾಯಿತು. ಹುಣಸಗಿ ಪಟ್ಟಣದ ಹನುಮಾನ ಮಂದಿರದಲ್ಲಿ ಸುರಪುರ ಶಾಸಕ ರಾಜುಗೌಡ ಅವರು ಪೂಜೆ ನೆರವೇರಿಸಿದರು.
Youtube Video

ಪುಟ್ಟ ಬಾಲಕನಿಂದ  ರಾಮನ ಜಪ...!ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ 3 ವರ್ಷದ ಬಾಲಕ ಪುಷ್ಪರಾಜ್ ದೇಸಾಯಿ ಶ್ರೀರಾಮನ ಪರಮ ಭಕ್ತನಾಗಿದ್ದು ಇಂದು ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುತ್ತಿರುವ ಹಿನ್ನೆಲೆ ಸಂಭ್ರಮಪಟ್ಟಿದ್ದಾನೆ. ಅಲ್ಲದೆ, ಶಹಾಪುರ ಪಟ್ಟಣದಲ್ಲಿರುವ ಭವಾನಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀರಾಮ ನಾಮ ಪಠಣ ಮಾಡಿದ್ದಾನೆ. ಯಾದಗಿರಿ ಜಿಲ್ಲೆಯಲ್ಲಿ ಎಲ್ಲಡೆ ಇಂದು ಹಬ್ಬದ ಸಂಭ್ರಮ ಮನೆ ಮಾಡಿದೆ.
Published by: MAshok Kumar
First published: August 5, 2020, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories