ಘಾಟಿಯಲ್ಲಿ ಡಿಕೆ ಶಿವಕುಮಾರ್​ಗೆ ಪೂರ್ಣಕುಂಭ ಮೆರವಣಿಗೆ; ಪಕ್ಷ ಸಂಘಟನೆಗೆ ಬಲ ಸಿಕ್ಕಿತೆಂದು ಹಿಗ್ಗಿದ ಕೈ ಕಾರ್ಯಕರ್ತರು

ನಮಗೆ ಡಿ.ಕೆ. ಶಿವಕುಮಾರ್ ಅವರಂತಹ ಉತ್ತಮ ನಾಯಕರು ಸಿಕ್ಕಿದ್ದಾರೆ. ಬೂತ್ ಮಟ್ಟ, ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುತ್ತಾರೆ ಎಂದು ದೊಡ್ಡಬಳ್ಳಾಪುರದ ಕಾಂಗ್ರೆಸ್ ಕಾರ್ಯಕರ್ತರು ವಿಶ್ವಾಸಪಟ್ಟಿದ್ದಾರೆ.

news18-kannada
Updated:July 2, 2020, 8:18 PM IST
ಘಾಟಿಯಲ್ಲಿ ಡಿಕೆ ಶಿವಕುಮಾರ್​ಗೆ ಪೂರ್ಣಕುಂಭ ಮೆರವಣಿಗೆ; ಪಕ್ಷ ಸಂಘಟನೆಗೆ ಬಲ ಸಿಕ್ಕಿತೆಂದು ಹಿಗ್ಗಿದ ಕೈ ಕಾರ್ಯಕರ್ತರು
ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು
  • Share this:
ದೊಡ್ಡಬಳ್ಳಾಪುರ(ಜುಲೈ 02): ಕಾಂಗ್ರೆಸ್ ಪ್ರಭಾವಿ ಮುಖಂಡ ಡಿ.ಕೆ. ಶಿವಕುಮಾರ್ ಇಂದು ಕೆಪಿಸಿಸಿ ಅಧ್ಯಕ್ಷ‌ರಾಗಿ ಪ್ರತಿಜ್ಞಾ ವಿಧಿ ಪಡೆದು ಪದಗ್ರಹಣ ಮಾಡಿದ್ದಾರೆ. ಡಿಕೆಶಿಯ ಪದೋನ್ನತಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯಕರ್ತರಲ್ಲಿ ಸಂಭ್ರಮ ಉಂಟು ಮಾಡಿದೆ. ಕೆಪಿಸಿಸಿ ನೂತನ ಅಧ್ಯಕ್ಷರಿಗೆ ಶುಭ ಕೋರಿ ದೊಡ್ಡ‌ಬಳ್ಳಾಪುರದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ವಿಷೇಶ ಪೂಜೆ ಮಾಡಲಾಗಿದೆ. 

ಸುಬ್ರಹ್ಮಣ್ಯ ಸ್ವಾಮಿ‌ಗೆ ಅಭಿಷೇಕ, ಮಹಿಳೆಯರಿಂದ ಪೂರ್ಣ ಕುಂಭ ಮೆರವಣಿಗೆ ಮಾಡಲಾಗಿತು. ಮೆರವಣಿಗೆಯಲ್ಲಿ  ಡೊಳ್ಳು ಕುಣಿತ, ಕೀಲು ಕುದುರೆ, ವೀರಗಾಸೆ ತಂಡಗಳು ಪ್ರದರ್ಶನ ನೀಡಿ ಜನರ ಗಮನ ಸೆಳೆದರು. ಪಟಾಕಿ ಸಿಡಿಸಿ ಡಿ.ಕೆ‌. ಶಿವಕುಮಾರ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದ್, ಘಾಟಿ ಸುಬ್ರಹ್ಮಣ್ಯ ಒಂದು ಪವಿತ್ರ ಕ್ಷೇತ್ರ‌ವಾಗಿದ್ದು, ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ‌ಯಾಗಿ ಆಧಿಕಾರಕ್ಕೆ ಬರಲೆಂದ್ದು ಕ್ಷೇತ್ರದಲ್ಲಿ ವಿಶೇಷ ಪೂಜೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ 18 ಸಾವಿರ ಗಡಿ ದಾಟಿದ ಕೊರೋನಾ ಪ್ರಕರಣ; ಬೆಂಗಳೂರಿನಲ್ಲಿ ಶತಕ ದಾಖಲಿಸಿದ ಸಾವಿನ ಸಂಖ್ಯೆ

ಕಾಂಗ್ರೆಸ್ ಇತಿಹಾಸ‌ವುಳ್ಳ ಪಕ್ಷ, ಭಾರತ ಸ್ವಾತಂತ್ರ್ಯ ಪಡೆಯಲು ಹುಟ್ಟಿ‌ಕೊಂಡ ಪಕ್ಷವಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮಗೆ ಡಿ.ಕೆ. ಶಿವಕುಮಾರ್ ಅವರಂತಹ ಉತ್ತಮ ನಾಯಕರು ಸಿಕ್ಕಿದ್ದಾರೆ. ಬೂತ್ ಮಟ್ಟ, ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುತ್ತಾರೆ. ರಾಜ್ಯವನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಾರೆ ಎಂದು ಆನಂದ್ ಅವರು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ತಳ ಮಟ್ಟದಿಂದ ಮನವರಿಕೆ ಮಾಡಿ ಪಕ್ಷಕ್ಕೆ ಜನಬೆಂಬಲ ಗಳಿಸುವ ಕೆಲಸವನ್ನ ಡಿಕೆಶಿ ನೇತೃತ್ವದ ತಂಡ ಮಾಡಲಿದೆ. ಬೂತ್, ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಲಿದ್ದೇವೆ ಎಂದವರು ವಿವರಿಸಿದರು.
First published: July 2, 2020, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading