ಕಾರವಾರ ಮೀನು ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ ; ಜಾಗ ಹಿಡಿಯಲು ಬಂದ ಮಹಿಳೆಯರ ನಡುವೆ ಜಟಾಪಟಿ

ಗ್ರಾಮೀಣ ಭಾಗದ ಮೀನುಗಾರ ಮಹಿಳೆಯರಿಗೂ ಮತ್ತು ನಗರ ಭಾಗದ ಮೀನುಗಾರ ಮಹಿಳೆಯರಿಗೂ ಜಾಗಕ್ಕಾಗಿ ಮಾತಿನ ಚಕಮಕಿ ಏರ್ಪಟ್ಟಿತ್ತು, ಕೂಡಲೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು..

news18-kannada
Updated:August 16, 2020, 4:23 PM IST
ಕಾರವಾರ ಮೀನು ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ ; ಜಾಗ ಹಿಡಿಯಲು ಬಂದ ಮಹಿಳೆಯರ ನಡುವೆ ಜಟಾಪಟಿ
ಮಾತಿನ ಚಕಮಕಿಯಲ್ಲಿ ತೊಡಗಿರುವ ಮೀನುಗಾರ ಮಹಿಳೆಯರು
  • Share this:
ಕಾರವಾರ(ಆಗಸ್ಟ್. 16): ಮೀನುಗಾರ ಮಹಿಳೆಯರ ಕನಸಿನ ಕೂಸಾದ ಆಧುನಿಕ ಮೀನು ಮಾರುಕಟ್ಟೆ ಕಾರವಾರ ಹೃದಯಭಾಗದಲ್ಲಿ ನಿರ್ಮಾಣವಾಗಿ ಉದ್ಘಾಟನೆ ಗೊಂಡಿದೆ. ಆದರೆ, ಇಲ್ಲಿ ವ್ಯಾಪರಕ್ಕೆ ಸ್ಥಳಾವಕಾಶದ ಕೊರತೆಯಿಂದ ಮೀನುಗಾರ ಮಹಿಳೆಯರಲ್ಲೆ ವೈ ಮನಸ್ಸು, ಜಗಳ ಏರ್ಪಟ್ಟಿತ್ತು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು, ಅದ್ಧೂರಿ ಸಮಾರಂಭದಲ್ಲಿ ಹೊಸ ಮೀನು ಮಾರುಕಟ್ಟೆಗೆ ಚಾಲನೆ ನೀಡಿ ಹೋಗುತ್ತಿದ್ದಂತೆ ಕೆಲವೇ ಕ್ಷಣದಲ್ಲಿಯೇ ಸುಮಾರು ಐದನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ, ಮೀನುಗಾರ ಮಹಿಳೆಯರು ಒಂದೇ ಸಮನೆ ನೀ ಮುಂದು  ನಾ ಮುಂದು ಎನ್ನುತ್ತಲೇ ಓಡೋಡಿ ಹೋಗಿ ಹೊಸ ಮೀನು ಮಾರುಕಟ್ಟೆಯಲ್ಲಿ ಜಾಗ ಹಿಡಿಯಲು ಮುಂದಾದರು.

ಕೇವಲ 150 ಮಹಿಳೆಯರಿಗೆ ಮಾತ್ರ ಅವಕಾಶವಿದ್ದ ಹಿನ್ನೆಲೆಯಲ್ಲಿ ಉಳಿದವರು ತಮಗೆ ಸ್ಥಳ ದೊರೆಯಲಿಕ್ಕಿಲ್ಲ ಎಂಬ ಧಾವಂತದಲ್ಲಿದ್ದರು. ಆದರೆ, ಹೊಸ ಮಾರುಕಟ್ಟೆಯಲ್ಲಿ ಕೇವಲ 150 ಕ್ಕೆ ಸೀಮಿತವಾಗಿದ್ದ ಸ್ಥಳಾವಕಾಶದಿಂದ ಉಳಿದ ಮಹಿಳಾ ವ್ಯಾಪಾರಿಗಳು ನಿರಾಶೆಗೆ ಒಳಗಾದರು. ಹೊಸ ಮೀನು ಮಾರುಕಟ್ಟೆಯಲ್ಲಿನ ಸುವ್ಯವಸ್ಥೆಯು ಮೀನುಗಾರ ಮಹಿಳೆಯರ ಆಕರ್ಷಣೆಗೆ ಒಳಗಾಗಿದ್ದು, ಜಾಗ ಸಿಗದ ಉಳಿದ ಮುನ್ನೂರಕ್ಕೂ ಹೆಚ್ಚಿನ ಮಹಿಳೆಯರು, ನಿರಾಶೆಯಿಂದ ನಗರಸಭೆ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರು, ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.

ನಗರಸಭೆ ಅಧಿಕಾರಿಗಳು ಮತ್ತು ರಾಜಕಾರಣಿ ಹಾಗೂ  ಮೀನುಗಾರ ಮುಖಂಡರ ಅನುಪಸ್ಥಿತಿಯಲ್ಲಿ  ಮಹಿಳೆಯರು ಅವಾಚ್ಯ ಶಬ್ಧಗಳಿಂದ ಬೈಗುಳ ಶುರುವಿಟ್ಟು ಕೊಂಡರು. ಗ್ರಾಮೀಣ ಭಾಗದ ಮೀನುಗಾರ ಮಹಿಳೆಯರಿಗೂ ಮತ್ತು ನಗರ ಭಾಗದ ಮೀನುಗಾರ ಮಹಿಳೆಯರಿಗೂ ಜಾಗಕ್ಕಾಗಿ ಮಾತಿನ ಚಕಮಕಿ ಏರ್ಪಟ್ಟಿತ್ತು, ಕೂಡಲೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು

ಮೀನುಗಾರ ಮಹಿಳೆಯರ ಅಳಲು

ಕೆಲ ಹಿರಿಯ ಮೀನುಗಾರ ಮಹಿಳೆಯರಂತೂ, ತಾವು 20-30 ವರ್ಷಗಳಿಂದ ಈ ಹಿಂದೆ ಇದ್ದ ಹಳೆಯ ಮೀನುಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಿಕೊಂಡು ಬಂದಿದ್ದೇವು. ಆದರೆ, ಇಲ್ಲಿ ಹೊಸಬರು ಎಲ್ಲ ಜಾಗವನ್ನು ಕಬಳಿಸಿಕೊಂಡಿದ್ದಾರೆ. ಅಲ್ಲದೇ ಒಂದೇ ಮನೆಯ ಐದಾರು ಮಹಿಳೆಯರು ಇಲ್ಲಿ ಜಾಗ ಹಿಡಿದಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ನಗರಸಭೆಯವರು, ಎಲ್ಲರಿಗೂ ಸರಿಯಾದ ನ್ಯಾಯ ಒದಗಿಸಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ಮೀನು ಮಾರುಕಟ್ಟೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸುಮಾರು 150 ಮಹಿಳಾ ಮೀನುಗಾರ ವ್ಯಾಪಾರಿಗಳು ಕುಳಿತು ವ್ಯಾಪಾರ ಮಾಡಲು ಅವಕಾಶವಿರುತ್ತದೆ. ಮೇಲ್ಮಹಡಿಯಲ್ಲಿ ಒಣ ಮೀನು ಮಾರಾಟ ಹಾಗೂ ಕೆಳ ಅಂತಸ್ತಿನಲ್ಲಿ ಹಸಿಮೀನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಾರುಕಟ್ಟೆಯ ಮತ್ತೊಂದು ಭಾಗದಲ್ಲಿ ಬಳಚು, ಸಿಗಡಿ ಹಾಗೂ ಕಲ್ವಾ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಹಾಗೂ ಮೀನು ಕಟ್ ಮಾಡುವ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ.

ಇದನ್ನೂ ಓದಿ :  ಪ್ರವಾಹವಾಗಿ ಒಂದು ವರ್ಷ ಕಳೆದರು ಸಿಗದ ಪರಿಹಾರ ; ಇನ್ನೂ ಬಿದ್ದ ಮನೆಗಳಲ್ಲೆ ವಾಸ ಮಾಡುತ್ತಿರುವ ಕುಟುಂಬಗಳುಒಳಾಂಗಣದಲ್ಲಿ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಕಟ್ಟೆ (ಟೈಲ್ಸ್), ಗಾಳಿ ಆಡಲು  ವಿದ್ಯುತ್ ಫ್ಯಾನ್‌ನಂತಹ ವ್ಯವಸ್ಥೆ ಮಾಡಲಾಗಿದೆ. ಮಾರುಕಟ್ಟೆಯನ್ನು ಸ್ವಚ್ಚವಾಗಿಡಲು ತ್ಯಾಜ್ಯ ನೀರು ಒಂದು ಬದಿ ಹರಿದು ಹೋಗುವಂತೆ ಮೋರಿ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕಾರ್ಯಕ್ಕಾಗಿ ನೀರಿನಲ್ಲಿ (ಟ್ಯಾಪ್) ವ್ಯವಸ್ಥೆ ಮಾಡಿಕೊಡಲಾಗಿದೆ. ಪರಸ್ಪರ ಎದುರು ಮುಖ ಮಾಡಿಕೊಂಡು ವ್ಯಾಪಾರ ಮಾಡಲು ವ್ಯವಸ್ಥೆ ಇದ್ದು, ಇವುಗಳ ಮಧ್ಯದ ಅಂತರದಲ್ಲಿ ಗ್ರಾಹಕರಿಗೆ ಓಡಾಡಲು ಪ್ಯಾಸೇಜ್ ಬಿಡಲಾಗಿದೆ.

ಒಟ್ಟಾರೆ ಆಧುನಿಕ ಸೌಲಭ್ಯ ಇರುವ ಸುಸಜ್ಜಿತ ಹೊಸ ಮೀನು ಮಾರುಕಟ್ಟೆಯನ್ನು ನಗರಸಭೆ ನಿರ್ಮಿಸಿಕೊಟ್ಟಿದೆ. ಆದರೆ, ಈಗ ಮೀನುಗಾರ ವ್ಯಾಪಾರಸ್ಥರ ಸಂಖ್ಯೆ 300ಕ್ಕೂ ಹೆಚ್ಚು ಇದೆ, ಆದರೆ, ಇಲ್ಲಿ 150 ಜನ ಮಾತ್ರ ಕಳಿತುಕೊಳ್ಳಲು ಅವಕಾಶ ಇದೆ. ಇದರಿಂದ ಭವಿಷ್ಯದಲ್ಲಿ ಮೀನುಗಾರ ವ್ಯಾಪರಸ್ಥ ಮಹಿಳೆಯರ ಜಗಳ ಮಾತ್ರ ನಿರಂತರ ಅಂತಾರೆ ಸ್ಥಳೀಯರು.
Published by: G Hareeshkumar
First published: August 16, 2020, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading