ಡ್ರಗ್ಸ್ ವಿರುದ್ಧ ಪೊಲೀಸರ ಸಮರೋಪಾದಿ ಕೆಲಸ - ಸಾರ್ವಜನಿಕರ ಸಹಕಾರ ಅತ್ಯಗತ್ಯ ; ರವಿ ಡಿ. ಚನ್ನಣ್ಣನವರ್

ನನ್ನ ಕನಸಿನ ಕೂಸಾದ ಭರವಸೆ ಯೋಜನೆ ತಂಡಲ್ಲಿ ಶಿಕ್ಷಣ, ಕೃಷಿ, ಕ್ರೀಡೆ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವಲ್ಲಿ ಪರಿಣಿತಿ ಹೊಂದಿರುವ ತಂಡದ ಸದಸ್ಯರು ಕೆಲಸ ಮಾಡಲಿದ್ದಾರೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್

  • Share this:
ದೊಡ್ಡಬಳ್ಳಾಪುರ(ಸೆಪ್ಟೆಂಬರ್​. 17): ರಾಜ್ಯವನ್ನು ಮಾದಕ‌ ವಸ್ತುಗಳ ಮಾರಾಟದಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಪೊಲೀಸರು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರ ಕೆಲಸಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು. ಅವರು ನಗರದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ  ಸಹಕಾರದೊಂದಿಗೆ  ಪ್ರಾರಂಭವಾದ ಭರವಸೆ ಎಂಬ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ನನ್ನ ಕನಸಿನ ಕೂಸಾದ 'ಭರವಸೆ' ಯೋಜನೆಯಿಂದ ಯಾರೊಬ್ಬ ಉನ್ನತ ವ್ಯಾಸಂಗ, ಒಬ್ಬ ಕ್ರೀಡಾಪಟು, ಒಬ್ಬ ಸಾಧಕನಾಗಿ ಹೊರ ಹೊಮ್ಮಲಿ ಎನ್ನುವುದು ನನ್ನ ಕನಸ್ಸಾಗಿದ್ದು, ನನ್ನ ಕನಸ್ಸಿಗೆ ಹಲವರು ಬೆಂಬಲವಾಗಿ ನಿಂತು ಕೆಲವರು ಪಾಠ ಮಾಡುತ್ತೇನೆ, ಕೆಲವರು ಆಟ ಹೇಳಿ ಕೊಡುತ್ತೇನೆ ಅಂದ್ರೆ, ಇನ್ನೂ ಕೆಲವರು ಕೈಲಾದ ಸೇವೆ ಮಾಡುತ್ತೇವೆ ಎಂದು ಮುಂದೆ ಬಂದಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಭರವಸೆ ಈಡೇರಲಿದೆ ಎಂದರು.

ಲಾಕ್‌ ಡೌನ್‌ ನಂತರ ರೈತರು ಸೇರಿದಂತೆ ಹಲವಾರು ಜನರ ಉದ್ಯೋಗಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಸಾಕಷ್ಟು ಜನ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಅಂತರವು ಇದೆ. ಈ ಎಲ್ಲವನ್ನು ಸರಿಪಡಿಸುವ ಮೂಲಕ ಪೊಲೀಸ್ ಇಲಾಖೆ ಜನಸ್ನೇಹಿಯಾಗಿಯು ಕೆಲಸ ಮಾಡುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕೆಲಸ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಭರವಸೆ ತಂಡಲ್ಲಿ ಶಿಕ್ಷಣ, ಕೃಷಿ, ಕ್ರೀಡೆ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವಲ್ಲಿ ಪರಿಣಿತಿ ಹೊಂದಿರುವ ತಂಡದ ಸದಸ್ಯರು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಗಾಂಜಾ ಸೊಪ್ಪು ಬೆಳೆಸುತ್ತಿದ್ದ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ದ ಈಗಾಗಲೇ 40 ಪ್ರಕರಣಗಳು ದಾಖಲಾಗಿದ್ದು, 52 ಜನರನ್ನು ಬಂಧಿಸಲಾಗಿದೆ. ಇದಲ್ಲದೆ ಜಿಲ್ಲೆಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿ ಇಸ್ಮಾಯಿಲ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದರು.

ಇದನ್ನೂ ಓದಿ : ಚಿಂಚೋಳಿ ಬಳಿ ಹಳ್ಳದಲ್ಲಿ ಕೊಚ್ಚಿ ಹೋದ ತಹಶೀಲ್ದಾರ್ ಕಾರು; ಮರವೇರಿ ಕುಳಿತ ಅಧಿಕಾರಿಯ ರಕ್ಷಣೆ

ಕಾರ್ಯಕ್ರಮದಲ್ಲಿ ಮಾತನಾಡಿದ ಡಿವೈಎಸ್​ಪಿ ಟಿ.ರಂಗಪ್ಪ, ಮಾದಕ ವಸ್ತುಗಳ ಮಾರಾಟಗಾರರನ್ನು ಬಂಧಿಸುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತದೆ. ಆದರೆ, ಪೋಷಕರು ನಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವ ಕಡೆಗೆ ಸದಾ ನಿಗಾ ವಹಿಸಬೇಕು. ಯುವ ಸಮುದಾಯ ಚಟಕ್ಕೆ ದಾಸರಾಗದಂತೆ ನೋಡಿಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರವು ಮುಖ್ಯ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಪೋಷಕರು ಮಕ್ಕಳಿಗೆ ಏನೆಲ್ಲಾ ಕೊಡುತ್ತಾರೆ, ಮಕ್ಕಳ ಸಂತೋಷಕ್ಕಾಗಿ ಆದರೆ, ಅದೇ ಮುಳುವಾಗ ಬಾರದು. ಮಕ್ಕಳನ್ನ ಸ್ನೇಹಿತರನ್ನಾಗಿ ಕಾಣಿ, ಅವರ ಜೊತೆ ಕೆಲ ಸಮಯ ಕಳೆಯಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಒಂದೇ ಸಾಕಾಗಲ್ಲ. ವಿದ್ಯೆ ಸಮಾಜದ ಅರಿವು ಅಷ್ಟೆ, ಪೋಷಕರ ಸಾಂಗತ್ಯದಲ್ಲಿ ಮಕ್ಕಳ ಒಂಟಿತನ ಸಾಮಾಜಿಕ ಸಾಂಸ್ಕೃತಿಕ ಕಾಳಜಿ ಆಸಕ್ತಿ ಬೆಳೆಸಿದ್ರೆ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ ಎಂದು ತಿಳಿಸಿದರು.
Published by:G Hareeshkumar
First published: