ಮೊಳಕೆ ಬಾರದ ಸೋಯಾಬಿನ್; ಕಳಪೆ ಬೀಜ ವಿತರಣೆಗೆ ರೈತರ ಆಕ್ರೋಶ
ಈ ಬಗ್ಗೆ ಸ್ಥಳೀಯ ರೈತ ಸಂಪರ್ಕ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ನಮಗೆ ಮಾತ್ರ ಬಿತ್ತನೆ ಮಾಡಲು ಉತ್ತಮ ಬೀಜ ಬೇಕು ಹಾಗೂ ಬಿತ್ತನೆ ಮಾಡಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗರಗ ಗ್ರಾಮದ ರೈತ ಶಂಕ್ರಪ್ಪ ಮನವಿ ಮಾಡಿದ್ದಾರೆ.
news18-kannada Updated:June 10, 2020, 2:54 PM IST

ಸರಿಯಾಗಿ ಮೊಳಕೆ ಬಾರದ ಸೋಯಾಬಿನ್ ಬೀಜ.
- News18 Kannada
- Last Updated: June 10, 2020, 2:54 PM IST
ಧಾರವಾಡ: ರೈತರಿಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಲೇ ಇವೆ. ಈ ಮೊದಲು ಲಾಕ್ಡೌನ್ ನಿಂದ ನಷ್ಟವಾಗಿದ್ದ ರೈತರು ಈಗ ಮುಂಗಾರು ಬೆಳೆ ಬೆಳೆಯಲು ಮುಂದಾಗಿದ್ದಾರೆ. ಸುರಿದ ಅಲ್ಪಸ್ವಲ್ಪ ಮಳೆಯಲ್ಲಿ ಬಿತ್ತನೆ ಮಾಡಲು ಸಜ್ಜಾಗಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೇಕಾದ ಬೀಜ ಪಡೆಯಲು ಹರಸಾಹಸ ಪಟಿದ್ದರು. ಕೊನೆಗೂ ಬೀಜ ಸಿಕ್ಕಿವೆ ಎಂದು ಸಂತಸ ಪಟ್ಟು ಬಿತ್ತನೆ ಮಾಡಿದರೆ ಈಗ ಆ ಬೀಜಗಳ ಮೊಳಕೆ ಪ್ರಮಾಣ ಕಡಿಮೆ ಇದೆ. ಇದರಿಂದ ರೈತರು ಕಂಗಾಲಾಗಿ ಹೋಗಿದ್ದಾರೆ.
ಇದು ಧಾರವಾಡ ತಾಲೂಕಿನ ಗರಗ, ಲಕಮಾಪೂರ, ತಡಕೋಡ ಗ್ರಾಮದಲ್ಲಿ ಸೋಯಾಬಿನ್ ಬೀಜ ಮೊಳಕೆ ಪ್ರಮಾಣ ಕಡಿಮೆ ಕಂಡು ಬಂದಿದೆ. ಸರ್ಕಾರಿ ರೈತ ಸಂಪರ್ಕ ಕೇಂದ್ರದಲ್ಲಿ ತಂದಿದ್ದ ಸೋಯಾಬಿನ್ ಬಿತ್ತನೆ ಬೀಜ ಕಳಪೆಯಾಗಿರುವ ಕಾರಣದಿಂದ ಮೊಳಕೆ ಸರಿಯಾಗಿ ಬಂದಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಗರಗ, ತಡಕೋಡ, ಲಕಮಾಪೂರ ಗ್ರಾಮದ ರೈತರು ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ ತಂದಿದ್ದರು. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಬಿತ್ತನೆ ಮಾಡುವ ಮೊದಲು ಬೀಜವನ್ನು ಜರ್ಮಿನೆಷನ್ ( ಬೀಜ ಪರಿಕ್ಷೆ) ಮಾಡಿ ಎಂದು ಹೇಳಿ ಕೊಟ್ಟಿದ್ದರು. ಅದರಂತೆ ಕೆಲವು ರೈತರು ತಮ್ಮ ಮನೆಯಲ್ಲಿ ಬೀಜ ನಾಟಿ ಮಾಡಿದರೆ ಕೆಲ ರೈತರು ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿ ವಾರ ಕಳೆದ ಬಳಿಕ ರೈತರಿಗೆ ಶಾಕ್ ಆಗಿದೆ. ಶೇ. 40 ಬೀಜದಲ್ಲಿ ಶೇ. 20ಕ್ಕೂ ಕಡಿಮೆ ಬೀಜ ಮೊಳಕೆ ಒಡೆದಿವೆ. ಈ ಬಗ್ಗೆ ಸ್ಥಳೀಯ ರೈತ ಸಂಪರ್ಕ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ನಮಗೆ ಮಾತ್ರ ಬಿತ್ತನೆ ಮಾಡಲು ಉತ್ತಮ ಬೀಜ ಬೇಕು ಹಾಗೂ ಬಿತ್ತನೆ ಮಾಡಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗರಗ ಗ್ರಾಮದ ರೈತ ಶಂಕ್ರಪ್ಪ ಮನವಿ ಮಾಡಿದ್ದಾರೆ.
ಇದನ್ನು ಓದಿ: ಕಾರ್ಯಕ್ರಮ ರದ್ದು ಮಾಡುವ ಪ್ರಶ್ನೆಯೇ ಇಲ್ಲ, ಸಿಎಂಗೆ ಮತ್ತೆ ಪತ್ರ ಬರೆಯುತ್ತೇನೆ; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಧಾರವಾಡ ಜಿಲ್ಲೆಯಲ್ಲಿ ಸೋಯಾಬಿನ್ ಪ್ರಮುಖ ಬೆಳೆಯಾಗಿದ್ದು, ಸಾಕಷ್ಟು ರೈತರು ಈಗಾಗಲೇ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆದಿದ್ದಾರೆ. ಹಲವು ಕಂಪನಿಯ ಬ್ರ್ಯಾಂಡ್ ಬೀಜ ಕಳಪೆ ಗುಣಮಟ್ಟ ಎಂಬುದು ಮೆಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ಕೇಳಿದರೆ, ಸೋಯಾಬಿನ್ ಬೀಜದ ಜರ್ಮಿನೆಷನ್ ಶೇ. 60 ಇದೆ. ಈ ಹಿನ್ನೆಲೆಯಲ್ಲಿ ಬೀಜ ಮೊಳಕೆ ಪ್ರಮಾಣದಲ್ಲಿ ಕಡಿಮೆ ಆಗಿರಬಹುದು. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ನಂತರ ಸರ್ಕಾರದಿಂದ ಕ್ರಮವನ್ನು ಅನುಸರಿಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದು ಧಾರವಾಡ ತಾಲೂಕಿನ ಗರಗ, ಲಕಮಾಪೂರ, ತಡಕೋಡ ಗ್ರಾಮದಲ್ಲಿ ಸೋಯಾಬಿನ್ ಬೀಜ ಮೊಳಕೆ ಪ್ರಮಾಣ ಕಡಿಮೆ ಕಂಡು ಬಂದಿದೆ. ಸರ್ಕಾರಿ ರೈತ ಸಂಪರ್ಕ ಕೇಂದ್ರದಲ್ಲಿ ತಂದಿದ್ದ ಸೋಯಾಬಿನ್ ಬಿತ್ತನೆ ಬೀಜ ಕಳಪೆಯಾಗಿರುವ ಕಾರಣದಿಂದ ಮೊಳಕೆ ಸರಿಯಾಗಿ ಬಂದಿಲ್ಲ ಎಂದು ರೈತರು ಆರೋಪಿಸಿದ್ದಾರೆ.