HOME » NEWS » District » SOUTH AFRICA DRUGS PEDLER SAMSON ARRESTED BY COP MAK

ಡ್ರಗ್ಸ್ ಮಾರಾಟ ದಂಧೆ ಭೇದಿಸಿದ ಪೊಲೀಸರು; ದಕ್ಷಿಣ ಆಫ್ರಿಕಾದ ಒಪೊಂಗ್ ಸ್ಯಾಮ್ಸನ್ ಬಂಧನ

ವೃತ್ತಿಯಿಂದ ವೈಟ್ ಲಿಫ್ಟಿರ್ ಆಗಿರುವ ಒಪೊಂಗ್ ಸ್ಯಾಮ್ಪ್ಸನ್ ಬೆಂಗಳೂರಿನ ಹೊರಮಾವಿನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿಯ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

news18-kannada
Updated:September 23, 2020, 7:17 AM IST
ಡ್ರಗ್ಸ್ ಮಾರಾಟ ದಂಧೆ ಭೇದಿಸಿದ ಪೊಲೀಸರು; ದಕ್ಷಿಣ ಆಫ್ರಿಕಾದ ಒಪೊಂಗ್ ಸ್ಯಾಮ್ಸನ್ ಬಂಧನ
ಬಂಧಿತ ಡ್ರಗ್ ಪೆಡ್ಲರ್ ಸ್ಯಾಮ್ಸನ್.
  • Share this:
ಕೊಡಗು: ರಾಜ್ಯದಲ್ಲಿ ಕನ್ನಡ ಚಿತ್ರರಂಗದ ಕೆಲವು ನಟ ನಟಿಯರು ಡ್ರಗ್ಸ್ ಸರಬರಾಜು ಮತ್ತು ಸೇವನೆ ಜಾಲ ಜಾಲದಲ್ಲಿ ಇದ್ದಾರೆಂದು ಭಾರೀ ಸದ್ದು ಮಾಡುತ್ತಿರುವಾಗಲೇ ಕೊಡಗಿನಲ್ಲೂ ಡ್ರಗ್ಸ್ ಮಾರಾಟ ದಂಧೆ ಆರೋಪಿ ಸೆರೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವಿದೇಶಿ ಆರೋಪಿಯನ್ನು ಕೊಡಗು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಎಕ್ರಾ ರಾಜ್ಯದ ಕುಂಸ್ಸೆ ಗ್ರಾಮದ ವ್ಯಕ್ತಿ ಒಪೊಂಗ್ ಸ್ಯಾಮ್ಪ್ಸನ್ ಬಂಧಿತ ಆರೋಪಿ. ಆಗಸ್ಟ್ 28 ರಂದು ಮಡಿಕೇರಿಯ ರಾಜಶೀಟ್ ಬಳಿ ಅ್ಯಂಪೆಟಮಿನ್ ಡ್ರಗ್ಸ್ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ. ಈ ಮಾಹಿತಿ ಕಲೆಹಾಕಿದ್ದ ಡಿಸಿಐಬಿ ಪೊಲೀಸರು ದಾಳಿ ನಡೆಸಿ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಆದರೆ ಈ ವೇಳೆ ಬೆಂಗಳೂರಿನಿಂದ ಬಂದಿದ್ದ  ಆರೋಪಿ ಒಪೊಂಗ್ ಸ್ಯಾಮ್ಪ್ಸನ್ ಲಕ್ಷಾಂತರ ರೂಪಾಯಿ ಮೌಲ್ಯದ ಅ್ಯಂಪೆಟಮಿನ್ ಡ್ರಗ್ಸನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದವನು ಸ್ಥಳದಿಂದ ಎಸ್ಕೇಪ್ ಆಗಿದ್ದ. ಒಪೊಂಗ್ ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳೊಂದಿಗೆ ಸಂಬಂಧ ಹೊಂದಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಐಬಿ ಪೊಲೀಸರು ಆರೋಪಿಗಾಗಿ ಬಲೆಬೀಸಿದ್ದರು.

ಇದನ್ನೂ ಓದಿ: ರೈತರ ಪ್ರತಿಭಟನೆ ಜೊತೆಗೆ ಬುಧವಾರ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರಿಂದಲೂ ಮುಷ್ಕರ

ವೃತ್ತಿಯಿಂದ ವೈಟ್ ಲಿಫ್ಟಿರ್ ಆಗಿರುವ ಒಪೊಂಗ್ ಸ್ಯಾಮ್ಪ್ಸನ್ ಬೆಂಗಳೂರಿನ ಹೊರಮಾವಿನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿಯ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಕೊಡಗಿನ ಮೂಲದವರಾದ ಕಿರುತೆರೆ ನಟಿ ಮತ್ತು ಸ್ಫೋಟ್ಸ್ ಮೆನ್ ಗಳನ್ನು ಐಎಸ್ ಡಿ ಪೊಲೀಸರು ವಿಚಾರಣೆ ನಡೆಸುತ್ತಿರುವಾಗಲೇ ಆರೋಪಿ ಸೆರೆಯಾಗಿರುವುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ಎಲ್ಲವೂ ವಿಚಾರಣೆ ಬಳಿಕ ಬಯಲಾಗಬೇಕಾಗಿದೆ.
Published by: MAshok Kumar
First published: September 23, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories