• Home
  • »
  • News
  • »
  • district
  • »
  • ನನ್ನನ್ನು ಕೆಪಿಸಿಸಿ ಅಧ್ಯಕ್ಷ್ಯರನ್ನಾಗಿ ಮಾಡಲು ಸೋನಿಯಾ ಗಾಂಧಿ ಎರಡು ಬಾರಿ ಯತ್ನಿಸಿದ್ದರು; ಕೆ.ಹೆಚ್​ ಮುನಿಯಪ್ಪ

ನನ್ನನ್ನು ಕೆಪಿಸಿಸಿ ಅಧ್ಯಕ್ಷ್ಯರನ್ನಾಗಿ ಮಾಡಲು ಸೋನಿಯಾ ಗಾಂಧಿ ಎರಡು ಬಾರಿ ಯತ್ನಿಸಿದ್ದರು; ಕೆ.ಹೆಚ್​ ಮುನಿಯಪ್ಪ

ಕೆ.ಹೆಚ್​.ಮುನಿಯಪ್ಪ

ಕೆ.ಹೆಚ್​.ಮುನಿಯಪ್ಪ

ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆಯೇ ಬೇಡ. ಹೇಳುವವರ ಮಾತಿಗೆ ಕಿವಿಕೊಟ್ಟರೆ ಪಕ್ಷ ಹಾಳಾಗುತ್ತದೆ ಎಂದು ಮಾಜಿ ಸಂಸದ ಮುನಿಯಪ್ಪ ಕಿವಿಮಾತು ಹೇಳಿದ್ದಾರೆ.

  • Share this:

ಕೋಲಾರ (ಡಿಸೆಂಬರ್​ 31); ಲೋಕಸಭೆ ಚುನಾವಣೆ ಸೋಲಿನ ನಂತರ ಮಾಜಿ ಸಂಸದ ಕೆಎಚ್ ಮುನಿಯಪ್ಪ ಪಕ್ಷ ಬಲಪಡಿಸುವ ವಿಚಾರವನ್ನ ಆಗಾಗ್ಗ ಪ್ರಸ್ತಾಪ ಮಾಡಿತ್ತಲೆ ಇದ್ದಾರೆ. ಇದೀಗ ಕಾಂಗ್ರೆಸ್ ಸಂಸ್ಥಾಪನಾ ದಿನ ಅಂಗವಾಗಿ ಜಿಲ್ಲೆಯ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರಿಗೆ ನೀಡಿರುವ ಸಂದೇಶದಲ್ಲಿ ಪಕ್ಷದಲ್ಲಿನ ಭಿನ್ನಮತವನ್ನ ಸರಿಪಡಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ. ಕಾಂಗ್ರೆಸ್ ಸಂಸ್ಥಾಪನ ದಿನ ಅಂಗವಾಗಿ ನೀಡಿರುವ ಹೇಳಿಕೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಕೊನೆಯುಸಿರು ಇರುವತನಕ ಉಳಿಯುವುದಾಗಿ ತಿಳಿಸಿದ್ದಾರೆ. ಜಗತ್ತಿನಲ್ಲಿ ಇತಿಹಾಸ ಸೃಷ್ಟಿ ಮಾಡಿರುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ಕೇವಲ‌ ಬಿಜೆಪಿ ಪಕ್ಷವನ್ನ ಟೀಕಿಸದೆ, ನಮ್ಮ ಪಕ್ಷದ ನಾಯಕರು, ಚುನಾಯಿತ ಹಾಗೂ ಪರಾಜಿತ ಸದಸ್ಯರೆಲ್ಲರು ನಮ್ಮ‌ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನ ಅಳವಡಿಸಿಕೊಂಡು, ನಮ್ಮಲ್ಲಿರುವ ನ್ಯೂನತೆಗಳನ್ನು ಪ್ರಮುಖವಾಗಿ ಸರಿಪಡಿಸಿಕೊಳ್ಳಬೇಕೆಂದು ಮುನಿಯಪ್ಪ ಕರೆ ನೀಡಿದ್ದಾರೆ‌.


ಕೇವಲ ಭಾಷಣಗಳಿಂದ ಕಾರ್ಯ ಸಾಧನೆ ಮಾಡಲು ಆಗುವುದಿಲ್ಲ ಎಂದಿರುವ ಮುನಿಯಪ್ಪ, ಅತ್ಯಗತ್ಯವಾಗಿ ಹೋರಾಡಬೇಕಾದರೆ, ಪಕ್ಷದಲ್ಲಿನ ಮುಂಚೂಣಿ 10 ಘಟಕಗಳನ್ನ ತಳಮಟ್ಟದಿಂದ ಬಲಗೊಳಿಸಬೇಕು, ಕೇವಲ ಸಿದ್ದರಾಮಯ್ಯ ಒಬ್ಬರೇ  ಬಿಜೆಪಿಯನ್ನ ಟೀಕಿಸಿದರೆ ಸಾಲದು, ಇದರಿಂದಾಗಿ ಅವರು ವಯಕ್ತಿಕ ಟೀಕೆಗು ಗುರಿಯಾಗಬೇಕಾಗುತ್ತದೆ ಎಂದಿದ್ದಾರೆ.


ಹಾಗಾಗಿ ಒಗ್ಗಟ್ಟಾಗಿ ನಾವೆಲ್ಲರು ಬಿಜೆಪಿಯನ್ನ ಎದುರಿಸಬೇಕು. ನಮ್ಮ ವಿರೋದ ಪಕ್ಷದಲ್ಲಿರುವರು ಸರ್ಕಾರದ ಭ್ರಷ್ಟಾಚಾರದ ವಿರುದ್ದ ಹೋರಾಡಿ ಜನಸಾಮಾನ್ಯರಿಗೆ ಸರ್ಕಾರದ ಭ್ರಷ್ಟಾಚಾರದ ಮಾಹಿತಿಯನ್ನು ತಿಳಿಸಬೇಕು. ನಾನೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ಪಕ್ಷದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದೇನೆ, ನನ್ನ ಕೊನೆಯುಸಿರು ಇರುವ ವರೆಗು ಕಾಂಗ್ರೆಸ್ಸಿಗನಾಗಿಯೇ ಇರುವೆ ಎಂದು ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.


ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ್ಯ ಗಾದಿಯನ್ನ ನಮ್ಮವರೇ ತಪ್ಪಿಸಿದ್ದು - ಕೆಎಚ್ ಮುನಿಯಪ್ಪ ಆರೋಪ.


ಪ್ರಧಾನಿ ಮೋದಿಯವರು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗ ಸಂವಿಧಾನಕ್ಕೆ ನಮಸ್ಕರಿಸಿ, ಸಂವಿಧಾನದ‌ ಆಶಯದಂತೆ ನಡೆಯುವೆ ಎಂದು ಪ್ರಮಾಣ ಮಾಡಿದ್ದರು. ಆದರೆ ಸಂವಿಧಾನ ಬದ್ದವಾಗಿ ರಚನೆಯಾದ ಮಧ್ಯಪ್ರದೇಶ ಹಾಗೂ ಕರ್ನಾಟಕ ದಲ್ಲಿದ ಸರ್ಕಾರಗಳನ್ನು ಉರುಳಿಸಲಾಯಿತು. ನಮ್ಮಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರಿಗೂ ಹೈ ಕಮಾಂಡ್ ಜವಾಬ್ದಾರಿ ನೀಡಿದ್ದಾರೆ.


ಇದನ್ನೂ ಓದಿ : ಕೇಂದ್ರದ ಕೃಷಿ ಮಸೂದೆ ವಿರುದ್ಧ ನಿರ್ಣಯ ಮಂಡಿಸಿದ ಕೇರಳ ಸರ್ಕಾರ; ಬಿಜೆಪಿ ಏಕೈಕ ಶಾಸಕನೂ ಬೆಂಬಲ!


ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆಯೇ ಬೇಡ. ಹೇಳುವವರ ಮಾತಿಗೆ ಕಿವಿಕೊಟ್ಟರೆ ಪಕ್ಷ ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಮುನಿಯಪ್ಪ, ‌ಖುದ್ದು ಸೋನಿಯಾ ಗಾಂಧಿಯವರೆ ನನ್ನನ್ನ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ್ಯರನ್ನಾಗಿ ಮಾಡಲು ಹೋದಾಗ ನಮ್ಮ ಪಕ್ಷದವರೆ ಅಡ್ಡಗಾಲು ಹಾಕಿದ್ದರು. ಆದರು ನನಗೆ ಯಾವುದೇ ಬೇಸರವಿಲ್ಲ, ಪಕ್ಷಕ್ಕಾಗಿ ನಾವೆಲ್ಲರು ತ್ಯಾಗಕ್ಕು ಸಿದ್ದರಿರಬೇಕೆಂದು ಕರೆ ನೀಡಿದರು.


ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಸೋಲಿನ ನಂತರ ಕೆಎಚ್ ಮುನಿಯಪ್ಪ ಅವರಿಗೆ ಪಕ್ಷ ಸಂಘಟನೆ ನೆನಪಾಗಿದೆ ಎಂದು ಕೈ ಪಾಳಯದಲ್ಲೆ ಚರ್ಚೆಗಳು ಆರಂಭವಾಗಿದೆ. ಜಿಲ್ಲೆಯಲ್ಲಿ ಸದ್ಯ ಕಾಂಗ್ರೆಸ್ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಮುನಿಯಪ್ಪ ಅವರ ಭಾವನಾತ್ಮಕ ಸಂದೇಶಕ್ಕೆ ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಹೇಗೆ ಪ್ರತಿಕ್ರಿಯೆ ನೀಡುವರೊ ಕಾದುನೋಡಬೇಕಿದೆ.

Published by:MAshok Kumar
First published: