ಹುಣಸೂರು ಶಾಸಕ ಮಂಜುನಾಥ್‌ಗೆ ಜೀವ ಬೆದರಿಕೆ; ಹೆಚ್‌. ವಿಶ್ವನಾಥ್ ಪುತ್ರನ ವಿರುದ್ಧ ಪ್ರಚೋದನೆ ಆರೋಪ

ಎಂಎಲ್‌ಎಗೆ ಹೊಡಿರಿ ಬಡೀರಿ ಎಂದು ಮೆಸೇಜ್ ಬರ್ತಿದೆ ಅಂತ ಸಚಿವರ ಮುಂದೆ ಹುಣಸೂರು ಶಾಸಕ ಹೆಚ್‌.ಪಿ. ಮಂಜುನಾಥ್ ಅಳಲು ತೊಡಿಕೊಂಡ ಘಟನೆ ಇಂದು ಮೈಸೂರಿನ ಜಿ.ಪಂ ಸಭೆಯಲ್ಲಿ ನಡೆದಿದೆ.

news18-kannada
Updated:August 14, 2020, 5:29 PM IST
ಹುಣಸೂರು ಶಾಸಕ ಮಂಜುನಾಥ್‌ಗೆ ಜೀವ ಬೆದರಿಕೆ; ಹೆಚ್‌. ವಿಶ್ವನಾಥ್ ಪುತ್ರನ ವಿರುದ್ಧ ಪ್ರಚೋದನೆ ಆರೋಪ
ಹುಣಸೂರು ಶಾಸಕ ಮಂಜುನಾಥ್.
  • Share this:
ಮೈಸೂರು (ಆಗಸ್ಟ್‌ 14); ಬೆಂಗಳೂರಿನ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಮನೆ ಮೇಲೆ ದಾಳಿ ಪ್ರಕರಣ ಮರೆಮಾಚುವ ಮುನ್ನವೇ ಮೈಸೂರಿನಲ್ಲು ಶಾಸಕರಿಗೆ ಜೀವನ ಬೆದರಿಕೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂದು ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆಯುತ್ತಿದ್ದ ತುಂಬಿದ ಸಭೆಯಲ್ಲಿ ಶಾಸಕರು ತನಗೆ ಜೀವನ ಬೆದರಿಕೆ ಇದೆ, ಅದಕ್ಕೆ ಸಾಕ್ಷಿ ಇದೆ ಎಂದು ಆಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ.

ಹುಣಸೂರು ಕ್ಷೇತ್ರದಲ್ಲಿ ಉಪಚುನಾವಣೆ ನಂತರ ಜಿದ್ದಾಜಿದ್ದಿ ಹೆಚ್ಚಾಗಿದ್ದು, ಹಾಲಿ ಶಾಸಕ ಹೆಚ್‌.ಪಿ. ಮಂಜುನಾಥ್ ಪರಾಜಿತ ಅಭ್ಯರ್ಥಿಯಾಗಿದ್ದ ಹಾಲಿ ವಿಧಾನಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್ ಪುತ್ರನ ಮೇಲೆ ಆರೋಪ ಮಾಡಿದ್ದಾರೆ. ಶಾಸಕರಿಗೆ ಬೆದರಿಕೆ ಹಾಕಿರುವ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಎಂಎಲ್‌ಎಗೆ ಹೊಡಿರಿ ಬಡೀರಿ ಎಂದು ಮೆಸೇಜ್ ಬರ್ತಿದೆ ಅಂತ ಸಚಿವರ ಮುಂದೆ ಹುಣಸೂರು ಶಾಸಕ ಹೆಚ್‌.ಪಿ. ಮಂಜುನಾಥ್ ಅಳಲು ತೊಡಿಕೊಂಡ ಘಟನೆ ಇಂದು ಮೈಸೂರಿನ ಜಿ.ಪಂ ಸಭೆಯಲ್ಲಿ ನಡೆದಿದೆ. ಸಭೆ ಆರಂಭದ ಮುನ್ನವೇ ಸಮಸ್ಯೆ ಹೇಳಿದ ಶಾಸಕ 17ನಿಮಿಷದ ಆಡಿಯೋ ಇದೆ ಎಂದು ಸಭೆಯಲ್ಲಿ ಆಡಿಯೋ ಬಿಡುಗಡೆ ಮಾಡಿದರು. ಈ ವೇಳೆ ಎಸ್‌ಪಿ ಅವ್ರಿಗೆ ಆಡಿಯೋ ಕಳುಹಿಸಿ, ಈಗಲೇ ಈ ಬಗ್ಗೆ ಕ್ರಮ ಕೈಗೊಳ್ತಾರೆ ಎಂದ ಸಚಿವ ಎಸ್.ಟಿ.ಸೋಮಶೇಖರ್‌, ಸಭೆಯಲ್ಲಿ ಶಾಸಕರ ಆರೋಪವನ್ನ ಗಂಭೀರವಾಗಿ ಪರಿಗಣಿಸಲಿಲ್ಲ.

ಸಭೆ ನಂತರ ಮಾತನಾಡಿದ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್, ಹುಣಸೂರಿನ ಸಿದ್ದಯ್ಯನ ಕೊಪ್ಪಲು ಗ್ರಾಮದಲ್ಲಿ ಜಮೀನು ಗಲಾಟೆ ವಿಚಾರವಾಗಿ ರಮೇಶ್ ಹಾಗೂ ಪುಟ್ಟರಾಜು ಎಂಬುವರ ನಡುವೆ ಸಂಭಾಷಣೆ ನಡೆದಿದೆ. ಈ ಸಂಭಾಷಣೆಯಲ್ಲಿ ನನ್ನ ಮೇಲೆ ಹಲ್ಲೆ ಪಿತೂರಿ ನಡೆದಿದೆ, ಇದಕ್ಕೆ ಎಂ.ಎಲ್.ಸಿ ವಿಶ್ವನಾಥ್ ಪುತ್ರ ಅಮಿತ್ ದೇವರಟ್ಟಿ ಪ್ರಚೋದನೆ ನೀಡಿದ್ದಾರೆ" ಎಂದು ನೇರ ಆರೋಪ ಮಾಡಿದರು.

"ನನ್ನ ಮೇಲೆ ಹಲ್ಲೆ ಮಾಡಲು ಅಮಿತ್ ಪ್ರಚೋದನೆ ನೀಡಿದ್ದಾರೆ. ಈ ವಿಚಾರವನ್ನು ಆಡಿಯೋದಲ್ಲಿ ರಮೇಶ್ ಎಂಬುವರು ಹೇಳಿದ್ದಾರೆ. ಅದನ್ನು ಆಧರಿಸಿ ನಾನು ಎಸ್‌ಪಿಗೆ ಲಿಖಿತ ದೂರು ಕೊಡಲಿದ್ದೇನೆ. ವಿಶ್ವನಾಥ್ ಎಂ.ಎಲ್.ಸಿ ಆದ ನಂತರ ಅಮಿತ್ ಆಟಾಟೋಪ ಜಾಸ್ತಿಯಾಗಿದೆ. ನನ್ನ ವಿರುದ್ದ ಜನರನ್ನು ಎತ್ತಿ‌ಕಟ್ಟೋಕೆ ಶುರು ಮಾಡಿದ್ದಾರೆ. ನನ್ನ ಹೊಡೆಸೋಕೆ ಜನರನ್ನು ಎತ್ತಿಕಟ್ಟಿದ ಬಗ್ಗೆ ಆಡಿಯೋ ಬಹಿರಂಗವಾಗಿದೆ.

ಇದು ಸ್ಯಾಂಪಲ್ ಅಷ್ಟೇ, ಇನ್ನು ಬೇಕಾದಷ್ಟು ಘಟನೆ ನಡೆದಿದೆ ನಾನು ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈ ಬಗ್ಗೆ ಜಿಲ್ಲಾ ಮಂತ್ರಿ ಹಾಗೂ ಡಿಸಿಗೆ ದೂರು ಕೊಟ್ಟಿರುವೆ. ಇಷ್ಟು ದಿನ ರಾಜಕಾರಣ ಮಾತ್ರ ನಡೆಯುತ್ತಿತ್ತು. ಈಗ ಈ ರೀತಿಯ ಬೆದರಿಕೆ ನಡೆಯುತ್ತಿದೆ. ನಾನು 10 ವರ್ಷದಲ್ಲಿ ಒಂದು ದಿನಾನೂ ಪೊಲೀಸ್ ಸ್ಟೇಷನ್‌ಗೆ ಪೋನ್‌ಮಾಡಿಲ್ಲ. ಈಗ ನನಗೆ ರಕ್ಷಣೆ ಕೊಡಿ ಅಂತ ಪೋನ್ ಮಾಡುವಂತಾಗಿದೆ" ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ನೇತ್ರಾವತಿ ನದಿ ಪರಂಬಕೋಕಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣ : ಸ್ಥಳದ ಸರ್ವೆಗೆ ಪುತ್ತೂರು ತಹಶೀಲ್ದಾರ್ ಸೂಚನೆಇದಕ್ಕೆ ಪ್ರತಿಕ್ರಿಯಿಸಿರುವ ಎಂಎಲ್‌ಸಿ ಹೆಚ್‌.ವಿಶ್ವನಾಥ್, "ಹುಣಸೂರು ದೇವರಾಜ ಅರಸರ ಊರು. ಯಾರೋ ಸುಮ್ಮನೆ ಮೈ ಪರಚಿಕೊಳ್ಳುತ್ತಿದ್ದಾರೆ ಅಷ್ಟೆ, ನಾನು ಎಂಎಲ್‌ಸಿ ಆಗಬಾರದು ಅಂತ ತುಂಬಾ ನಡೆಸಿದರು. ಈಗ ಮಂತ್ರಿಮಂಡಲ ವಿಸ್ತರಣೆ ಅಲ್ವಾ ಅದಕ್ಕೆ ಸ್ಟೋರಿ ಹೇಳ್ತಿದ್ದಾರೆ. ನನ್ನ ಮಗ ಹೇಳಿದ್ದಾರೆ ಅನ್ನೋದು ಅಷ್ಟೆ ಇಲ್ಲಿ ಆರೋಪ ಇಂತಹ ಪುಡಿ ಪುಡಿ ಆರೋಪ ತುಂಬಾ ನೋಡಿದ್ದೇನೆ.

ಏನಾಗಿದೆ ಎಂಎಲ್‌ಎಗೆ ಅವರ ಮೇಲೆ ಯಾರಾದ್ರು ಹಲ್ಲೆ ಮಾಡಿದ್ರಾ. ಆಗಿದ್ರೆ ದೂರು ಕೊಡಲಿ ಅವರಿಗೆ ನಿಜವಾಗಿಯೂ ಏನಾದ್ರು ಹೇಳಿದ್ರೆ ಎದ್ದು ನಿಂತು ಹೇಳ್ತಿದ್ರು. ಇದೇಲ್ಲ ಸುಳ್ಳಿನ ಕಂತೆ. ಮಂಜುನಾಥ್ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಮಂಜುನಾಥ್ ನಾನು ಮಂತ್ರಿ ಆಗಿಬಿಡ್ತಿನಿ ಅಂತ ಈ ಆರೋಪ ಮಾಡ್ತಿದ್ದಾರೆ" ಎಂದು ತಿರುಗೇಟು ನೀಡಿದರು.
Published by: MAshok Kumar
First published: August 14, 2020, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading