ಹೆತ್ತವರನ್ನೇ ಕೊಂದ ಮಗ; ಆರೋಪಿ ಪೊಲೀಸ್ ವಶಕ್ಕೆ

ಇವರಿಬ್ಬರ ಮಗ ರಾಮು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕ್ಷುಲ್ಲಕ ಕಾರಣಕ್ಕೆ ತಂದೆ-ತಾಯಿಯೊಡನೆ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆರೋಪಿ ರಾಮು ಸದ್ಯ ಪೊಲೀಸ್ ವಶದಲ್ಲಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ: ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ-ತಾಯಿ ಅಂತ ನಾವು ಬಹಳ ಸಲ ಕೇಳಿದ್ದೀವಿ.  ಆದರೆ ಇಲ್ಲೊಬ್ಬ ಪಾಪಿ ಮಗ ತನ್ನ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ತಾಯಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಂದೆ ಸಾವು-ಬದುಕಿನ‌ ಮಧ್ಯೆ ಹೋರಾಡಿ, ಗಂಗಾವತಿ ಆಸ್ಪತ್ರೆಯಲ್ಲಿ ಅವರೂ ಸಹ ಸಾವನ್ನಪ್ಪಿದ್ದಾರೆ.

ಈ ಘಟನೆ ನಡೆದದ್ದು‌ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ. ಸಾವನ್ನಪ್ಪಿರುವ ತಾಯಿಯನ್ನು ಅಕ್ಕಮ್ಮ (55) ಎಂದೂ, ತಂದೆಯನ್ನು ಗಿರಿಯಪ್ಪ (60) ಎಂದು ಗುರುತಿಸಲಾಗಿದೆ.

ಇವರಿಬ್ಬರ ಮಗ ರಾಮು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕ್ಷುಲ್ಲಕ ಕಾರಣಕ್ಕೆ ತಂದೆ-ತಾಯಿಯೊಡನೆ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆರೋಪಿ ರಾಮು ಸದ್ಯ ಪೊಲೀಸ್ ವಶದಲ್ಲಿದ್ದಾನೆ.

ಇದನ್ನು ಓದಿ: ಫ್ರಾನ್ಸ್ ಅಧ್ಯಕ್ಷನ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ ಕೊರೋನಾ ಓವನ್; ಇದರ ವಿಶೇಷವೇನು ಗೊತ್ತಾ?
First published: