ಮೊಬೈಲ್ ಬಳಸಬೇಡ ಎಂದು ತಿಳಿ ಹೇಳಿದ್ದಕ್ಕೆ ತಾಯಿಯನ್ನೇ ಹತ್ಯೆ ಮಾಡಿದ ದುರುಳ ಮಗ

ಬುದ್ದಿ ಹೇಳಿದ್ದಕ್ಕೆ ಹೆತ್ತು‌ ಹೊತ್ತು ಸಾಕಿದ್ದ ತಾಯಿಯನ್ನೇ‌ ಬರ್ಬರವಾಗಿ ಹತ್ಯೆ ಮಾಡಿದ್ದ ಈ ಪಾಪಿ ಮಗ ಇದೀಗ ಜೈಲು ಸೇರಿದ್ದಾನೆ‌. ಆದರೆ ಈ ಕೃತ್ಯ ಎಸಗಿದ ಮಗನ ವರ್ತನೆ ಮಂಡ್ಯದ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಕೈ ತುತ್ತು ನೀಡಿ, ಸಾಕಿ ಸಲವಿದ್ದ ತಾಯಿಯನ್ನೇ ಹತ್ಯೆ ಮಾಡುವಂತಹ ಇಂತಹ ಹೀನ ಮಗನಿಗೆ ತಕ್ಕ ಶಿಕ್ಷೆಯಾಗಲಿ, ಇದೊಂದು ಪಾಠವಾಗಲಿ ಎಂದು ಜನರು ಹೇಳುತ್ತಿದ್ದಾರೆ.

news18-kannada
Updated:August 1, 2020, 7:03 PM IST
ಮೊಬೈಲ್ ಬಳಸಬೇಡ ಎಂದು ತಿಳಿ ಹೇಳಿದ್ದಕ್ಕೆ ತಾಯಿಯನ್ನೇ ಹತ್ಯೆ ಮಾಡಿದ ದುರುಳ ಮಗ
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ: ಮನೆಯಲ್ಲಿ ಮೊಬೈ ಲ್ ಬಳಸದಂತೆ ಮಗನಿಗೆ ತಿಳಿ ಹೇಳಿದ್ದಕ್ಕೆ ತಾಯಿಯನ್ನು‌ ಹತ್ಯೆ ಮಾಡಿರುವ‌ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ. 

ಹೌದು! ಜುಲೈ 29ರಂದು ಮಂಡ್ಯದ ವಿದ್ಯಾನಗರದಲ್ಲಿ ಶ್ರೀಲಕ್ಷ್ಮಿ(46) ಎಂಬ ಮಹಿಳೆಯೊಬ್ಬರ ಬರ್ಬರ ಕೊಲೆಯಾಗಿತ್ತು. ತಲೆಯನ್ನು ಸೀಳಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.‌ ಅಡುಗೆ ಮನೆಯಲ್ಲಿ ಕೊಲೆಯಾಗಿದ್ದ ಮಹಿಳೆಯ ದೇಹದಿಂದ ಸುರಿದ ನೆತ್ತರಿಂದ ಇಡೀ ಅಡುಗೆ ಮನೆಯಲ್ಲಿ ರಕ್ತದ ಕೋಡಿ ಹರಿದಿತ್ತು. ಇದನ್ನು ನೋಡಿದರೆ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಅಂದು ಕೊಳ್ಳುವಂತಿತ್ತು. ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. 

ಇನ್ನು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ ಪೊಲೀಸರಿಗೆ ಮೃತ ಮಹಿಳೆಯ ಗಂಡ ತನ್ನ ಮಗ ಮನುಶರ್ಮಾ ಅಮ್ಮನ ಜೊತೆಗಿದ್ದ ಎಂಬ ಮಾಹಿತಿ ನೀಡಿದ್ದರು. ಘಟನೆ ಬಳಿಕ ಮಗ ನಾಪತ್ತೆಯಾಗಿದ್ದ. ಮಗನ ಮೇಲೆ ಅನುಮಾನಗೊಂಡ ಪೊಲೀಸರು ನಾಪತ್ತೆಯಾದ ಮಗನನ್ನು ಪತ್ತೆಹಚ್ಚಿ, ವಿಚಾರಣೆ ಮಾಡಿದಾಗ ಮನೆಯಲ್ಲಿ  ಮೊಬೈಲ್ ಬಳಸದಂತೆ ತಾಯಿ ಹೇಳಿದ್ದಳು. ಅಲ್ಲದೇ ಅವಾಚ್ಯ ಶಬ್ದದಿಂದ ನಿಂದಿಸಿದ್ದಳು. ಇದರಿಂದ ಆಕ್ರೋಶಗೊಂಡು ಚಕ್ಕುಲಿ ಹೊಳ್ಳಿನಿಂದ ತಾಯಿಯ ತಲೆಯನ್ನು ಸೀಳಿ ಹತ್ಯೆ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಆರೋಪಿ ಮಗನ ಹೇಳಿಕೆ ಪಡೆದ ಪೊಲೀಸರು ಕೃತ್ಯಕ್ಕೆ  ಬಳಸಿದ್ದ ಚಕ್ಕುಲಿ ಹೊಳ್ಳು ಸೇರಿದಂತೆ ಮೊಬೈಲ್ ಹಾಗೂ ಬೈಕ್ ಅನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನು ಓದಿ: ಕುಬೇರ ಮೂಲೆಗೆ ಹೋಗಿ ಕ್ಷಣಾರ್ಧದಲ್ಲೇ ಕನ್ನ ಹಾಕುತ್ತಿದ್ದ ಕೊಲಂಬಿಯಾ ಹೈಟೆಕ್ ಗ್ಯಾಂಗ್!

ಬುದ್ದಿ ಹೇಳಿದ್ದಕ್ಕೆ ಹೆತ್ತು‌ ಹೊತ್ತು ಸಾಕಿದ್ದ ತಾಯಿಯನ್ನೇ‌ ಬರ್ಬರವಾಗಿ ಹತ್ಯೆ ಮಾಡಿದ್ದ ಈ ಪಾಪಿ ಮಗ ಇದೀಗ ಜೈಲು ಸೇರಿದ್ದಾನೆ‌. ಆದರೆ ಈ ಕೃತ್ಯ ಎಸಗಿದ ಮಗನ ವರ್ತನೆ ಮಂಡ್ಯದ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಕೈ ತುತ್ತು ನೀಡಿ, ಸಾಕಿ ಸಲವಿದ್ದ ತಾಯಿಯನ್ನೇ ಹತ್ಯೆ ಮಾಡುವಂತಹ ಇಂತಹ ಹೀನ ಮಗನಿಗೆ ತಕ್ಕ ಶಿಕ್ಷೆಯಾಗಲಿ, ಇದೊಂದು ಪಾಠವಾಗಲಿ ಎಂದು ಜನರು ಹೇಳುತ್ತಿದ್ದಾರೆ.
Published by: HR Ramesh
First published: August 1, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading