ಅಬಕಾರಿ ಸಚಿವ ಎಚ್ ನಾಗೇಶ್ ತವರಿನಲ್ಲೇ ಲಾಕ್​ಡೌನ್ ನಿಯಮ ಉಲ್ಲಂಘನೆ; ಡಾಬಾದಲ್ಲಿ ಎಣ್ಣೆ ಪಾರ್ಟಿ ಮಾಡಿ ಉದ್ದಟತನ ತೋರಿದ ಯುವಕರು

ಅಕ್ರಮ ಮದ್ಯಸೇವನೆ ವಿಚಾರವನ್ನ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಗೆ ತಿಳಿಸಿದಾಗ, ಕಾನ್ಸ್‌ಟೇಬಲ್ ಇಬ್ಬರು ಸ್ಥಳಕ್ಕೆ ಭೇಟಿ ನೀಡಿ ಡಾಬಾ ಮುಚ್ಚಿಸಿದರು. ಅಲ್ಲದೆ ಮತ್ತೊಮ್ಮೆ ತೆರೆಯದಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದರು.

news18-kannada
Updated:July 6, 2020, 9:02 AM IST
ಅಬಕಾರಿ ಸಚಿವ ಎಚ್ ನಾಗೇಶ್ ತವರಿನಲ್ಲೇ ಲಾಕ್​ಡೌನ್ ನಿಯಮ ಉಲ್ಲಂಘನೆ; ಡಾಬಾದಲ್ಲಿ ಎಣ್ಣೆ ಪಾರ್ಟಿ ಮಾಡಿ ಉದ್ದಟತನ ತೋರಿದ ಯುವಕರು
ಎಣ್ಣೆ ಪಾರ್ಟಿ ಮಾಡಿರುವ ದೃಶ್ಯ
  • Share this:
ಕೋಲಾರ(ಜು.06): ಕೊರೋನಾ ಮಹಾಮಾರಿ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಭಾನುವಾರ ಲಾಕ್ ಡೌನ್ ಘೋಷಿಸಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಕೋಲಾರದಲ್ಲಿ ಕೆಲ ಮದ್ಯಪ್ರಿಯರು ಸರ್ಕಾರದ ಆದೇಶವನ್ನು ಪಾಲಿಸದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.

ಹೌದು, ಕೋಲಾರ ಜಿಲ್ಲೆಯಾದ್ಯಂತ ಲಾಕ್​ಡೌನ್ ಯಶಸ್ವಿಯಾಗಿಸಲು ಪೊಲೀಸ್ ಸಿಬ್ಬಂದಿ ದಿನವಿಡೀ ರಸ್ತೆಗಳಲ್ಲಿ ನಿಂತು ಕಾವಲು ಕಾಯುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದಲ್ಲೇ ಇರುವ ಡಾಬಾದಲ್ಲಿ ಮಸ್ತ್ ಗುಂಡು-ತುಂಡು ಪಾರ್ಟಿ ಮಾಡುವ ಮೂಲಕ ಮದ್ಯಪ್ರಿಯರು ಉದ್ದಟತನ ತೋರಿದ್ದಾರೆ.

ಅಬಕಾರಿ ಸಚಿವ ಎಚ್.ನಾಗೇಶ್  ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ನಿಯಮಗಳ ಪ್ರಕಾರ ಡಾಬಾಗಳಲ್ಲಿ ಮದ್ಯ ಸೇವನೆಯೇ ಮಾಡುವಂತಿಲ್ಲ. ಹೀಗಿದ್ದರೂ ಸಹ ರಾಷ್ಟ್ರೀಯ ಹೆದ್ದಾರಿ 75 ರ ಕಿಶೋರ್ ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ಯುವಕರು  ಅಕ್ರಮವಾಗಿ ಮದ್ಯ ಸೇವನೆ ಜೊತೆಗೆ ಮೋಜು-ಮಸ್ತಿಯಲ್ಲಿ ತೊಡಗಿದ್ದರು.ಮಂಡ್ಯದಲ್ಲಿ ಸಮುದಾಯಕ್ಕೆ ಹಬ್ಬಿದ ಕೊರೋನಾ; ಜಿಲ್ಲೆಯ 7 ತಾಲೂಕಿನ ಗ್ರಾಮೀಣ ಭಾಗದಲ್ಲೂ ಹರಡಿರುವ ಸೋಂಕು

ಭಾನುವಾರ ಹೊಟೆಲ್, ಡಾಬಾಗಳಲ್ಲಿ ಊಟ, ತಿಂಡಿ ಪಾರ್ಸೆಲ್ ಗೆ ಮಾತ್ರ ಅವಕಾಶವಿದೆ. ಆದರೆ ಅಬಕಾರಿ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಡಾಬಾಗಳಲ್ಲಿ ಮದ್ಯ ಸೇವನೆ ದಂಧೆ ಅವ್ಯಾಹತವಾಗಿ ಸಾಗುತ್ತಿದೆ. ಸ್ಥಳಕ್ಕೆ ನ್ಯೂಸ್ 18 ಕನ್ನಡ ವರದಿ ಮಾಡಲು ಹೋದಾಗ, ಕ್ಯಾಮೆರಾ ನೋಡಿದಾಕ್ಷಣ ಮದ್ಯಪ್ರಿಯರು ಎಣ್ಣೆ ಬಿಟ್ಟು ಅಲ್ಲಿಂದ ಪರಾರಿಯಾದರು. 

ಮಾಲೀಕ ಜಯರಾಂ ಎನ್ನುವವರ ಒಡೆತನದ ಡಾಬಾ ಇದಾಗಿದೆ ಎಂದು ತಿಳಿದು ಬಂದಿದೆ. ಯುವಕರು ಅಧಿಕಾರಿಗಳ ಕಣ್ತಪ್ಪಿಸಿ ಈ ಕೃತ್ಯ ಎಸಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಕಡೆ ಸಾಕಷ್ಟು ಡಾಬಾಗಳು ಮುಚ್ಚಿದ್ದರೂ, ಇದೊಂದು ಕಡೆಯಲ್ಲಿ ಮಾತ್ರ ಮದ್ಯಪ್ರಿಯರು, ಮಾಂಸ ಪ್ರಿಯರು ಲಾಕ್ ಡೌನ್ ನಿಯಮಗಳನ್ನೇ ಉಲ್ಲಂಘಿಸಿದ್ದಾರೆ.ನ್ಯೂಸ್ 18 ಮಾಹಿತಿ ಮೇರೆಗೆ ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಾಬಾದಲ್ಲಿ ಲಾಕ್ ಡೌನ್ ಮಧ್ಯೆಯೂ ಅಕ್ರಮವಾಗಿ ಮದ್ಯ ಸೇವನೆ ನಡೆಯುತ್ತಿದೆ. ಆದರೂ ಸಹ ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ಪರಿಶೀಲನೆ ಸಹ ನಡೆಸಿದಂತೆ ಕಂಡುಬಂದಿಲ್ಲ. ಬೆಳಗ್ಗೆಯೇ ಒಮ್ಮೆ ಪೊಲೀಸರು ಗಸ್ತು ತಿರುಗುವಾಗ ಪಾರ್ಸೆಲ್ ಊಟ ಮಾರಾಟ ಮಾಡುವಂತೆ ಸೂಚಿಸಿದ್ದಾರೆ.

ಡಾಬಾ ಮುಚ್ಚಿಸುತ್ತಿರುವ ಪೊಲೀಸರು


ಅಕ್ರಮ ಮದ್ಯಸೇವನೆ ವಿಚಾರವನ್ನ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಗೆ ತಿಳಿಸಿದಾಗ, ಕಾನ್ಸ್‌ಟೇಬಲ್ ಇಬ್ಬರು ಸ್ಥಳಕ್ಕೆ ಭೇಟಿ ನೀಡಿ ಡಾಬಾ ಮುಚ್ಚಿಸಿದರು. ಅಲ್ಲದೆ ಮತ್ತೊಮ್ಮೆ ತೆರೆಯದಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಲು ಮಾಲೀಕ ಜಯರಾಂ ನಿರಾಕರಿಸಿದ್ದು, ಗೊತ್ತಿಲ್ಲದ ಆಗೋಗಿದೆ ಬಿಡಿ ಎಂದರು. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.

 
Published by: Latha CG
First published: July 6, 2020, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading