• Home
  • »
  • News
  • »
  • district
  • »
  • ಅಮಾವಾಸ್ಯೆಯಂದು ಮೃತಪಟ್ಟಿದ್ದ ವೃದ್ಧನ ಶವವನ್ನು ಅಮಾವಾಸ್ಯೆಯಂದೇ ಹೊತ್ತೊಯ್ದ ದುಷ್ಕರ್ಮಿಗಳು; ಏನಿದರ ರಹಸ್ಯ!? 

ಅಮಾವಾಸ್ಯೆಯಂದು ಮೃತಪಟ್ಟಿದ್ದ ವೃದ್ಧನ ಶವವನ್ನು ಅಮಾವಾಸ್ಯೆಯಂದೇ ಹೊತ್ತೊಯ್ದ ದುಷ್ಕರ್ಮಿಗಳು; ಏನಿದರ ರಹಸ್ಯ!? 

ಸಮಾಧಿ ಅಗೆದು ಶವ ಹೊತ್ತೊಯ್ದಿರುವುದು.

ಸಮಾಧಿ ಅಗೆದು ಶವ ಹೊತ್ತೊಯ್ದಿರುವುದು.

ಕೆಲವರು ವಾಮಾಚಾರಿಗಳು, ನಿಧಿ ಆಸೆಗೆ ಗರ್ಭಿಣಿ, ಚಿಕ್ಕ ಮಕ್ಕಳ ಬಲಿ ಪಡೆಯುವುದು, ಶವ ಹೊತ್ತೊಯ್ಯುವುದು ಮಾಡುತ್ತಾರೆ. ಆದರೆ ವೃದ್ಧನ ಶವದಿಂದ ವಾಮಾಚಾರ ಮಾಡುತ್ತಾರೆಯೇ? ಯಾಕೆ ಹೂತಿದ್ದ ವೃದ್ಧನ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಜಿಜ್ಞಾಸೆ ಗ್ರಾಮಸ್ಥರಲ್ಲಿ ಮೂಡಿದೆ.

  • Share this:

ಬಾಗಲಕೋಟೆ (ಜು. 22): ಕಳೆದ ಫೆಬ್ರವರಿ 21ರ ಶಿವರಾತ್ರಿ ಅಮಾವಾಸ್ಯೆಯಂದು ಮೃತಪಟ್ಪ ವೃದ್ಧನ ಹೂತಿದ್ದ ಶವವನ್ನು ಬರೋಬ್ಬರಿ ಐದು ತಿಂಗಳ ಬಳಿಕ ಜುಲೈ 21 ಭೀಮನ (ನಾಗರ) ಅಮಾವಾಸ್ಯೆಯಂದೇ ದುಷ್ಕರ್ಮಿಗಳು ಹೊತ್ತೊಯ್ದಿರುವ ವಿಲಕ್ಷಣ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.


ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ 63 ವರ್ಷದ ರಾಮಪ್ಪ ತುಂಬರಮಟ್ಟಿ ಎಂಬುವರು ಕಳೆದ ಫೆಬ್ರವರಿ 21ರಂದು ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಕುಟುಂಬಸ್ಥರು ಫೆಬ್ರವರಿ 22ರಂದು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಿದ್ದರು. ಇದೀಗ ಬರೋಬ್ಬರಿ ಐದು ತಿಂಗಳ ಬಳಿಕ ಜುಲೈ 21ರಂದು ಭೀಮನ ಅಮಾವಾಸ್ಯೆಯಂದೇ ಹೂತಿದ್ದ ಮೃತದೇಹವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಹೊತ್ತೊಯ್ದಿದ್ದಾರೆ.


ವಾಮಾಚಾರಿಗಳು ನಿಧಿ ಆಸೆಗೆ ಮೃತದೇಹ ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಂತ್ಯಕ್ರಿಯೆ ನಡೆದು ಐದು ತಿಂಗಳಾಗಿದ್ದರಿಂದ ಮೃತದೇಹ ಅಸ್ಥಿ ಪಂಜರವಾಗಿರುವ ಸಾಧ್ಯತೆಯಿದ್ದು, ಮೃತ ವೃದ್ಧನ ಅಸ್ಥಿ ಪಂಜರದಿಂದ ವಾಮಾಚಾರ ಮಾಡುವ ಶಂಕೆಯನ್ನು ಕೆಲವು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಜೊತೆಗೆ  ಅಮಾವಾಸ್ಯೆಯಂದು ಮೃತಪಟ್ಟಿದ್ದ ವೃದ್ಧನ ಮೃತದೇಹವನ್ನು ಅಮಾವಾಸ್ಯೆಯಂದೇ ಹೊತ್ತೊಯ್ದಿರುವ ರಹಸ್ಯವಾದರೂ ಏನು ಎನ್ನುವ ಪ್ರಶ್ನೆ ಕಾಡತೊಡಗಿದೆ.


ಇದನ್ನು ಓದಿ: ಶಾಸಕ ದುರ್ಯೋಧನ ದರ್ಪಕ್ಕೆ ಬೀದಿಗೆ ಬಿದ್ದ ತಹಶೀಲ್ದಾರ್ ; ರಾತ್ರಿಯಿಡೀ ಬಯಲಲ್ಲೆ ರಾತ್ರಿ ಕಳೆದ ತಹಶೀಲ್ದಾರ್ ಭಜಂತ್ರಿ


ಕೆಲವರು ವಾಮಾಚಾರಿಗಳು, ನಿಧಿ ಆಸೆಗೆ ಗರ್ಭಿಣಿ, ಚಿಕ್ಕ ಮಕ್ಕಳ ಬಲಿ ಪಡೆಯುವುದು, ಶವ ಹೊತ್ತೊಯ್ಯುವುದು ಮಾಡುತ್ತಾರೆ. ಆದರೆ ವೃದ್ಧನ ಶವದಿಂದ ವಾಮಾಚಾರ ಮಾಡುತ್ತಾರೆಯೇ? ಯಾಕೆ ಹೂತಿದ್ದ ವೃದ್ಧನ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಜಿಜ್ಞಾಸೆ ಗ್ರಾಮಸ್ಥರಲ್ಲಿ ಮೂಡಿದೆ. ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸಿ, ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಸತ್ಯಾಂಶ ಹೊರತರಬೇಕಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು