ಬಿಜೆಪಿಯಲ್ಲಿ ಕೆಲವರು ನಾನೂ ಲೀಡರ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ : ಸಚಿವ ಎಸ್. ಟಿ. ಸೋಮಶೇಖರ್​​

ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದಾರೆ. 2-3 ದಿನಗಳಲ್ಲಿ ರಿಸಲ್ಟ್ ಬರುತ್ತೆ ಅಂತ ಸಿಎಂ ಹೇಳುತ್ತಿದ್ದಾರೆ. ಅದನ್ನು ಹೊರತು ಪಡಿಸಿದರೆ ಬಿಜೆಪಿಯಲ್ಲಿ ಬೇರೆ ಯಾವ ಮನೆಯೂ ಇಲ್ಲ, ಗೋಡೆಯೂ ಇಲ್ಲ ಎಂದು ತಿಳಿಸಿದರು

ಸಚಿವ ಎಸ್. ಟಿ. ಸೋಮಶೇಖರ್

ಸಚಿವ ಎಸ್. ಟಿ. ಸೋಮಶೇಖರ್

  • Share this:
ವಿಜಯಪುರ(ನವೆಂಬರ್​. 20 ): ಬಿಜೆಪಿಯಲ್ಲಿ ಕೆಲವರು ನಾನೂ ಲೀಡರ್ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಂದೇ ಮನೆ ಇದೆ. ಅದು ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳಿನ್​​​ ಕುಮಾರ್​ ಕಟೀಲ್ ಅವರ ನಿರ್ಧಾರವೇ ಅಂತಿಮ. ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದಾರೆ. 2-3 ದಿನಗಳಲ್ಲಿ ರಿಸಲ್ಟ್ ಬರುತ್ತೆ ಅಂತ ಸಿಎಂ ಹೇಳುತ್ತಿದ್ದಾರೆ. ಅದನ್ನು ಹೊರತು ಪಡಿಸಿದರೆ ಬಿಜೆಪಿಯಲ್ಲಿ ಬೇರೆ ಯಾವ ಮನೆಯೂ ಇಲ್ಲ, ಗೋಡೆಯೂ ಇಲ್ಲ ಎಂದು ತಿಳಿಸಿದರು. ವಿಜಯನಗರ ಹೊಸ ಜಿಲ್ಲೆ ಸ್ಥಾಪನೆ ವಿರೋಧಿಸಿ ಬಳ್ಳಾರಿ ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಮುಖ್ಯಮಂತ್ರಿಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಸಂಪುಟ ಸಭೆಯಲ್ಲೇ ವಿಜಯನಗರ ಎಂದು ಘೋಷಣೆ ಮಾಡಿದ್ದಾರೆ.

ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಕರೆದು ಸಿಎಂ ಮಾತನಾಡುತ್ತಾರೆ. ಸಚಿವ ಆನಂದಸಿಂಗ್ ಅವರನ್ನೂ ಕರೆಸಿ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ, ಎಲ್ಲ ಸರಿಯಾಗುತ್ತೆ ಎಂದರು

ಮರಾಠಾ ಅಭಿವೃದ್ಧಿ ಸ್ಥಾಪನೆಗೆ ಕರ್ನಾಟಕ ಬಂದ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಮರಾಠಿಗರು ಇಲ್ಲವಾ? ಎಂದು ಪ್ರಶ್ನಿಸಿದರು. ಅನೇಕರು ಇಲ್ಲೇ ಹುಟ್ಟಿ ಬೆಳೆದಿದ್ದಾರೆ. ಎಲ್ಲ ಜಾತಿ, ಸಮುದಾಯಗಳಿಗೆ ಕೊಟ್ಟಂತೆ ಅವರಿಗೂ ಒಂದು ನಿಗಮ ಕೊಟ್ಟಿದ್ದಾರೆ. ಗಡಿಗೂ ಮತ್ತು ಭಾಷೆಗೂ ಸಂಬಂಧವೇ ಇಲ್ಲ. ಕರ್ನಾಟಕದಲ್ಲಿ ಅನೇಕ ಜನ ಮರಾಠಿಗರಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಚಾಮರಾಜನಗರಕ್ಕೆ ಬರಲು ಸಿಎಂ ಹಿಂದೇಟು: ಮೂಢನಂಬಿಕೆಗೆ ಕಟ್ಟುಬಿದ್ರಾ ಯಡಿಯೂರಪ್ಪ

ಸಹಕಾರಿ ಕ್ಷೇತ್ರದಲ್ಲಿ ಮತ ಚಲಾವಣೆ ನಿಯಮ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಕೇಂದ್ರ ಸರಕಾರ ಮಾಡಿದ ಕಾನೂನು. ಸತತ 5 ಸಾಮಾನ್ಯ ಸಭೆಯಲ್ಲಿ 3 ಸಭೆಗಳಿಗೆ ಗೈರು ಹಾಜರಾದರೆ ಮತದಾನದ ಹಕ್ಕಿಲ್ಲ ಎಂಬ ನಿಯಮವಿತ್ತು. ಆದರೆ, ಹೈಕೋರ್ಟ್ ಈಗ ಬದಲಾವಣೆ ಮಾಡಲು ಸೂಚಿಸಿದೆ.

5 ರಲ್ಲಿ 2 ಸಾಮಾನ್ಯಸಭೆಗೆ ಹಾಜರಾದರೆ ಮತ ಚಲಾಯಿಸಬಹುದು. ಈ ಕುರಿತು ಡಿ. 7 ರಂದು ಕಾನೂನಿಗೆ ತಿದ್ದುಪಡಿ ತರುತ್ತಿದ್ದೇವೆ. ಆದರೆ, ಸಭೆಗೆ ಹಾಜರಾಗದವರಿಗೂ ಮತ ಹಾಕಲು ಅವಕಾಶ ನೀಡಲು ಸಾಧ್ಯವಿಲ್ಲ. ಸಹಕಾರಿ ಬ್ಯಾಂಕಿನ ಸಾಮಾನ್ಯ ಸಭೆಗೆ ಹಾಜರಾಗದಿದ್ದರೆ ಬ್ಯಾಂಕಿನ ಆಗುಹೋಗುಗಳನ್ನು ತಿಳಿಯಲು ಸಾಧ್ಯವಿಲ್ಲ ಎಂದರು.
Published by:G Hareeshkumar
First published: