ಚಾಮರಾಜನಗರ(ಜುಲೈ 06): ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ಹೆಮ್ಮಾರಿ ಗ್ರಾಮೀಣ ಪ್ರದೇಶಗಳಿಗೂ ತನ್ನ ಕಬಂಧ ಬಾಹು ಚಾಚಿದೆ. ಹೆಚ್ಚಾಗಿ ಬೆಂಗಳೂರು ಮೈಸೂರು ಮತ್ತಿತರ ಹೊರ ಊರುಗಳಿಗೆ ಹೋಗಿ ಬಂದವರಿಗೆ ಕೊರೊನಾ ಸೋಂಕು ತಗುಲಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನ ಆತಂಕಗೊಂಡಿದ್ದಾರೆ. ಇದೇ ಆತಂಕದಲ್ಲಿದ್ದ ಬಿಳಿಗಿರಿರಂಗನಬೆಟ್ಟದ ಹೊಸಪೋಡಿನ ಬುಡಕಟ್ಟು ಸೋಲಿಗರು ತಮ್ಮೂರಿಗೆ ಬಸ್ ಬರುವುದೇ ಬೇಡ ಎಂದು ಆಗ್ರಹಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಯಳಂದೂರಿನಿಂದ ಬಿಳಿಗಿರಿರಂಗನಬೆಟ್ಟಕ್ಕೆ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ ಅನ್ನು ಹೊಸಪೋಡು ಬಳಿ ತಡೆದ ಬುಡಕಟ್ಟು ಸೋಲಿಗರು ಬಸ್ನಲ್ಲಿ ಬರುವ ವ್ಯಕ್ತಿಗಳಿಂದ ಕೊರೋನಾ ಸೋಂಕು ತಗುಲುವ ಸಾಧ್ಯತೆಗಳಿವೆ. ನಗರಪ್ರದೇಶದಿಂದ ಅರಣ್ಯ ಪ್ರದೇಶಕ್ಕೆ ಕೊರೋನಾ ಹರಡುತ್ತದೆ. ಹಾಗಾಗಿ ಸದ್ಯಕ್ಕೆ ಬಸ್ ಬರುವುದು ಬೇಡ ಎಂದು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ