ಮಂಡ್ಯದಲ್ಲಿ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವ ಸಾಫ್ಟ್​ವೇರ್ ಯುವತಿ

ಸಾಫ್ಟ್​ವೇರ್ ಎಂಜಿನಿಯರ್ ಎಂಬ ಹಮ್ಮಿಲ್ಲದೆ ಜೀವನ ನಿರ್ವಹಣೆಗೆ ತರಕಾರಿ ಮಾರಾಟ ಮಾಡುತ್ತಿರುವ ಮಂಡ್ಯದ ಯುವತಿಯನ್ನ ಭೇಟಿ ಮಾಡಿದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

news18-kannada
Updated:July 13, 2020, 7:05 AM IST
ಮಂಡ್ಯದಲ್ಲಿ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವ ಸಾಫ್ಟ್​ವೇರ್ ಯುವತಿ
ತರಕಾರಿ ವ್ಯಾಪಾರ ಮಾಡುತ್ತಿರುವ ಸಾಫ್ಟ್​ವೇರ್ ಎಂಜಿನಿಯರ್​ಳನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಡಿ.ಸಿ. ತಮ್ಮಣ್ಣ
  • Share this:
ಮಂಡ್ಯ: ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಮಂಡ್ಯದಲ್ಲಿ ಯಾವುದೇ ಹಮ್ಮಿಲ್ಲದೆ ತರಕಾರಿ ವ್ಯಾಪಾರ ಮಾಡುತ್ತಿರುವ ಘಟನೆ ಜಿಲ್ಲೆಯವರ ಗಮನ ಸೆಳೆದಿದೆ. ಮಾಜಿ ಸಚಿವ ಹಾಗೂ ಮದ್ದೂರು ಶಾಸಕರು ಈಕೆಯನ್ನ ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

ಈಕೆಯ ಹೆಸರು ಅನು. ಮಂಡ್ಯದ ನಿವಾಸಿಯಾಗಿದ್ದ ಇವರು ಬಿ.ಇ. ಕಂಪ್ಯೂಟರ್ ಸೈನ್ಸ್ ಓದಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗದಲ್ಲಿದ್ದವರು. ಕೊರೋನಾದಿಂದ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಾದಾಗ ಮಂಡ್ಯದಲ್ಲಿರುವ ತನ್ನ ಮನೆಗೆ ಬಂದಿದ್ದರು. ಈಕೆಯ ತಾಯಿ ಮಂಡ್ಯ ನಗರದ ಬಂದೀಖಾನೆ ವೃತ್ತದ ರಸ್ತೆ ಬದಿಯಲ್ಲಿ ಜೀವನ‌ ನಿರ್ವಹಣೆಗೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ, ಈಕೆ ಕೆಲಸ ಮಾಡ್ತಿದ್ದ ಕಂಪನಿ ಕೂಡ ಕೆಲಸವಿಲ್ಲದ ಕಾರಣಕ್ಕೆ ಇವರನ್ನ ಕೆಲಸದಿಂದ ತೆಗೆದುಹಾಕಿತ್ತು.

ಹೇಗೋ ಅಮ್ಮ ಮಾಡ್ತಿದ್ದ ಆ ತರಕಾರಿ ವ್ಯಾಪಾರದಿಂದ ಇವರ ಕುಟುಂಬದ ಜೀವನ ನಡೆಯುತ್ತಿತ್ತು. ಇತ್ತೀಚೆಗೆ ತಾಯಿಗೂ ಆರೋಗ್ಯ ಕೈ ಕೊಟ್ಟಿದ್ರಿಂದ ಸಂಸಾರ ನಿರ್ವಹಣೆಗೆ ತಾಯಿಯ ಕಾಯಕ ಮುಂದುವರಿಸಿದ್ದಾರೆ. ತಾನೋರ್ವ ಸಾಫ್ಟ್​ವೇರ್ ಉದ್ಯೋಗಿ ಎಂಬ ಹಮ್ಮಿಲ್ಲದೆ ತರಕಾರಿ ವ್ಯಾಪಾರ ನಡೆಸುತ್ತಿದ್ದಾರೆ.

ಲಾಕ್​ಡೌನ್​ನಿಂದ ಅದೆಷ್ಟೋ ಉದ್ಯೋಗಿಗಳು ಕೆಲಸ ಕಳೆದುಕೊಂಡು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಾರೆ. ಅಂಥವರ ನಡುವೆ ಈ ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಅನು ಇದೀಗ ತನ್ನ ಈ ಕಾಯಕದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರತಿನಿತ್ಯ ರಸ್ತೆ ಬದಿ ತರಕಾರಿ‌ ವ್ಯಾಪಾರ ಮಾಡುತ್ತಾ ಆದರ್ಶಪ್ರಾಯರಾಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಕೋವಿಡ್​ಗೆ ಮತ್ತೊಂದು ಬಲಿ; ಕೊರೋನಾ ಗೆದ್ದ 4 ವರ್ಷದ ಬಾಲೆ

ಈ ಯುವತಿ ಮಾಡುತ್ತಿರುವ ಈ ಆದರ್ಶ ಕೆಲಸದ ಬಗ್ಗೆ ತಿಳಿದು ಮದ್ದೂ ರಿನ‌ ಶಾಸಕ ಡಿ.ಸಿ. ತಮ್ಮಣ್ಣ ಖುದ್ದು ಸ್ಥಳಕ್ಕೆ ಬಂದು ಯುವತಿಯ ಈ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯುವತಿಗೆ ವೈಯಕ್ತಿಕವಾಗಿ 50 ಸಾವಿರ ರೂ ನೆರವು ನೀಡಿದ್ದಾರೆ. ಇದರ ಜೊತೆಗೆ ಈ ಕೊರೊನಾ ಸಮಸ್ಯೆ‌ ಮುಗಿದ ಬಳಿಕ ಮತ್ತೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವ ಭರವಸೆ ಕೂಡ ನೀಡಿದ್ದಾರೆ.

ಒಟ್ಟಾರೆ, ಕೊರೋನಾ ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡು ಅದೆಷ್ಟೋ ಜನರು ಮನೆಯಲ್ಲಿಯೇ ಇದ್ದು ಮುಂದಿನ ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ. ಅಂಥವರ ನಡುವೆ ಈ ದಿಟ್ಟ ಯುವತಿ ಮಾತ್ರ ಯಾವುದೇ ಕೆಲಸವಾದರೂ ಸೈ ಎಂದು ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಾ ತನ್ನ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಈ ಮೂಲಕ ನಿರುದ್ಯೋಗಿ‌ಗಳ ಬದುಕಿಗೆ‌ ಆಶಾಕಿರಣವಾಗಿ, ಇತರರಿಗೆ ಆದರ್ಶಪ್ರಾಯರಾಗಿದ್ದಾರೆ.
Published by: Vijayasarthy SN
First published: July 13, 2020, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading