ಹಿಂದುಳಿದ ವರ್ಗದವರ ವಿದ್ಯಾರ್ಥಿವೇತನ ಹಣ ಗುಳುಂ ಮಾಡಿದ ಹಾಸನದ ಸರ್ಕಾರಿ ನೌಕರ

ಆಲೂರಿನ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯೊಬ್ಬರು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಹಣವನ್ನು ನುಂಗಿಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ಧಾರೆ.

ಹಾಸನದಲ್ಲಿ ವಿದ್ಯಾರ್ಥಿವೇತನ ಹಣ ನುಂಗಿದ ಆರೋಪಿ

ಹಾಸನದಲ್ಲಿ ವಿದ್ಯಾರ್ಥಿವೇತನ ಹಣ ನುಂಗಿದ ಆರೋಪಿ

  • Share this:
ಹಾಸನ: ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ  ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಹಲವಾರು ಸ್ಕಾಲರ್​ಶಿಪ್ ಯೋಜನೆಗಳನ್ನ ಜಾರಿಗೆ ತಂದಿದೆ. ಪ್ರತೀವರ್ಷ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಾವಿರಾರು ರೂಪಾಯಿ ಹಣವನ್ನ ವಿದ್ಯಾರ್ಥಿ ವೇತನ ರೂಪದಲ್ಲಿ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪಿಸಬೇಕಾದ ಸರ್ಕಾರಿ ನೌಕರನೇ ಆ ಹಣ ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ನೌಕರ ಸತೀಶ್​ನ ಗೋಲ್ಮಾಲ್ ಕಂಡು ಸಾರ್ವಜನಿಕರ ಆಕ್ರೋಶಗೊಂಡಿದ್ದಾರೆ.

ಸತೀಶ್ ಹಾಸನ ಜಿಲ್ಲೆಯ ಆಲೂರಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಡಿಎ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಬೇಕಾದ ಹಣವನ್ನು ಅವರ ಅಕೌಂಟ್‌ಗೆ ಹಾಕದೆ, ಬೇರೆ ಅಕೌಂಟ್‌ಗೆ ಹಾಕಿರುವ ಆರೋಪ ಈತನ ಮೇಲೆ ಕೇಳಿ ಬಂದಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಬರಬೇಕಾದ ಸಾವಿರಾರು ರೂಪಾಯಿ ಸರ್ಕಾರದ ಹಣವನ್ನ ತನಗೆ ಪರಿಚಯ ಇರುವ ಬೇರೆ ವ್ಯಕ್ತಿಗಳ ಅಕೌಂಟ್​ಗೆ ವರ್ಗಾವಣೆ ಮಾಡಿಕೊಂಡು ಹಣ ಗುಳುಂ ಮಾಡಿದ್ದನೆ. ಇದೇ ರೀತಿ ಲಕ್ಷಾಂತರ ರೂಪಾಯಿ ವಿದ್ಯಾರ್ಥಿ ವೇತನದ ಹಣವನ್ನ ದುರುಪಯೋಗ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಶಿಕ್ಷಕರಿಗೆ ಕೊರೋನಾ ಪರೀಕ್ಷೆ : ಕೊರೋನಾ ಪಾಸಾದರಷ್ಟೆ ಶಾಲೆಗೆ ಪ್ರವೇಶ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಇಬ್ಬರು ವಿದ್ಯಾರ್ಥಿಗಳ ಹಣ ದುರುಪಯೋಗ ಆಗಿರುವ ಬಗ್ಗೆ ತಮಗೆ ಮಾಹಿತಿ ಇದೆ. ಈ ಬಗ್ಗೆ ವಿದ್ಯಾರ್ಥಿಗಳು ನಮಗೆ ತಿಳಿಸಿದ ಬಳಿಕ ವಿಚಾರ ಗೊತ್ತಾಗಿದೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಮೋಸ ಆಗಿದ್ದರೆ ಅವರೂ ಕೂಡ ದೂರು ನೀಡಬಹುದು. ಈ ಬಗ್ಗೆ ಸಮಾಜ ಕಲ್ಯಾಣ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಮುಂದಿನ‌ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಆರ್ ಆರ್ ನಗರ ಉಪ ಚುನಾವಣೆ : ಮುನಿರತ್ನ ನಮ್ಮ ವೈರಿ ಅಲ್ಲ, ಬಿಜೆಪಿ ವಿರುದ್ಧ ನಮ್ಮ ಹೋರಾಟ : ಸಂಸದ ಡಿಕೆ ಸುರೇಶ್

ಒಟ್ಟಾರೆ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್​ಶಿಪ್ ಹಣದಲ್ಲಿ ವಿದ್ಯಾರ್ಥಿಗಳಿಗೆ ಮೋಸ ಆಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರ್ಕಾರ ಆದಷ್ಟು ಬೇಗ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ವರದಿ: ಡಿಎಂಜಿ ಹಳ್ಳಿ ಅಶೋಕ್
Published by:Vijayasarthy SN
First published: