ವಿಜಯಪುರ ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು; ನಾಯಕರ ವಿರುದ್ಧ ಕಾರ್ಯಕರ್ತರ ಸೋಶಿಯಲ್ ಮೀಡಿಯಾ ವಾರ್ ಜೋರು

ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರಿದ್ದರೂ ಸತತ ಮೂರನೇ ಬಾರಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುತ್ತಿದೆ.  ಇದು ಬಿಜೆಪಿ ಕಾರ್ಯಕರ್ತರ ಪಿತ್ತ ನೆತ್ತಿಗೇರಲು ಕಾರಣವಾಗಿದೆ. 

news18-kannada
Updated:July 1, 2020, 1:02 PM IST
ವಿಜಯಪುರ ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು; ನಾಯಕರ ವಿರುದ್ಧ ಕಾರ್ಯಕರ್ತರ ಸೋಶಿಯಲ್ ಮೀಡಿಯಾ ವಾರ್ ಜೋರು
ಸೋತ ಬಿಜೆಪಿ ಅಭ್ಯರ್ಥಿ ಭೀಮಾಶಂಕರ್ ಬಿರಾದಾರ
  • Share this:
ವಿಜಯಪುರ (ಜು. 01): ವಿಜಯಪುರ ಬಿಜೆಪಿ ಕಾರ್ಯಕರ್ತರು ಜಿಲ್ಲಾ ನಾಯಕರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವಾರ್ ಆರಂಭಿಸಿದ್ದಾರೆ.  ನಿನ್ನೆ ನಡೆದ ವಿಜಯಪುರ ಜಿ. ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಸೋಲು ಇದಕ್ಕೆಲ್ಲಾ ಕಾರಣವಾಗಿದೆ.      

ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರಿದ್ದರೂ ಸತತ ಮೂರನೇ ಬಾರಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುತ್ತಿದೆ.  ಇದು ಬಿಜೆಪಿ ಕಾರ್ಯಕರ್ತರ ಪಿತ್ತ ನೆತ್ತಿಗೇರಲು ಕಾರಣವಾಗಿದೆ.  ಜಿಲ್ಲೆಯ ನಾಯಕರು ಕಾಂಗ್ರೆಸ್ ನಾಯಕರ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದೇ ಕಾರ್ಯಕರ್ತರು ಫೇಸ್‌ ಬುಕ್ ನಲ್ಲಿ ಹರಿಹಾಯ್ದಿದ್ದಾರೆ.

ವಿಜಯಪುರ ಜಿಲ್ಲಾ ಬಿಜೆಪಿ ಮಾಜಿ ಮಾಧ್ಯಮ ಪ್ರಮುಖ ಕೃಷ್ಣಾ ಗುನ್ಹಾಳಕರ, ಒಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ತಾಕತ್ತು ಇಲ್ಲದ ನಮ್ಮ ಜಿಲ್ಲೆಯ ಬಿಜೆಪಿ ರಾಜಕಾರಣ ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬ ಯುವ ಮುಖಂಡ ಸಿದ್ದು ಪಾಟೀಲ ಜಾಲವಾದ ಕಳೆದ 10 ವರ್ಷಗಳಿಂದ ಜಿಲ್ಲಾ ಪಂಚಾಯತ್ ಬಿಜೆಪಿಯಿಂದ ಕೈ ತಪ್ಪಲು ಪಾತ್ರಧಾರಿಗಳು ಕಾರಣನಾ? ಅಥವಾ ಸೂತ್ರಧಾರಿಗಳು ಕಾರಣನಾ? ಎಂದು ಫೇಸ್‌ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ನೀಲಕಂಠ ವಾಲಿಕಾರ ಎಂಬುವರು ಅದಕ್ಕೇ ಹೇಳೋದು ಭಾಜಪ ಸಂಘದ ಶಿಸ್ತಿನ ಗರಡಿಯಲ್ಲಿ ಬೆಳೆದ ನಿಷ್ಠಾವಂತ ಕಟಿಭದ್ದ ಕಾರ್ಯಕರ್ತರಿಂದ ಕೂಡಿರಬೇಕೆ ಹೊರತು, ಗೆಲ್ಲುವ ಕುದುರೆ ಎಂದು ಯಾವುದೋ ಕಲಬೆರಕೆಗಳನ್ನು, ಎಡಚರನ್ನು ಜೊಡಿಸಿಕೊಂಡರೆ ಹೀಗೇ ಆಗುವುದು.  ಅದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಆಗಿರಬಹುದು, ಎಂ ಎಲ್ ಎ, ಎಮ್ ಎಲ್ ಸಿ, ಎಮ್ ಪಿ ಅಥವಾ ಮತ್ತ್ಯಾವದೇ ಆಗಿದ್ದರೂ ಪಕ್ಷದ ಕಥೆ ಇಷ್ಟೇ.  ಪಕ್ಷದ ನಿಷ್ಠಾವಂತ ಕಾರ್ಯಕರ್ತರ ನಿಷ್ಠೆಗೆ, ಅದರ್ಶಕ್ಕೆ, ಪ್ರಾಮಾಣಿಕತೆಗೆ, ಪರಿಶ್ರಮಕ್ಕೆ ನಾಯಕರೆನಿಸಿಕೊಂಡ ನಾಲಾಯಕರು ಮಾಡುತ್ತಿರುವ ಅವಮಾನ, ದೌರ್ಜನ್ಯ, ಅತ್ಯಾಚಾರ, ಅನಾಚಾರವಾಗಿದೆ. ಕಾರ್ಯಕರ್ತರೇನಾದರೂ ಮುನಿಸಿಕೊಂಡರೆ, ನಾಯಕರೆಲ್ಲಾ ಹುಚ್ಚು ಹಿಡಿದ ಬೀದಿ ನಾಯಿಗಳ ತರಹ ತಿರುಗಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಜಗದೀಶ್, 9 ಪಿಡಿಒಗಳ ವಿರುದ್ದ FIR ದಾಖಲು; ಮತ್ತೊಮ್ಮೆ ಮುನ್ನೆಲೆಗೆ ಬಂದ ಬೆಳ್ಳಿ ಕಿರೀಟ, ಗದೆ ನೀಡಿದ ಬೀಳ್ಕೊಡುಗೆ

ಈಗ ರಾಜಕೀಯದಿಂದ ದೂರವಾಗಿ ಸ್ವಯಂ ಉದ್ಯೋಗ ಕೈಗೊಂಡಿರುವ ಬಿಜೆಪಿ ಹಿರಿಯ ಮಾಜಿ ಮುಖಂಡ ರಾಜು ಗಚ್ಚಿನಮಠ ಎಂಬುವರು ಉಂಟ ತಾಟದಲ್ಲಿ ಹೇಸಿಗೆ ಮಾಡುವ ನಾಯಕರು ಈ ಜಿಲ್ಲೆಯಲ್ಲಿ ಹೆಚ್ಚು.  ಅದರಲ್ಲೂ ನಮ್ಮ ಪಕ್ಷದಲ್ಲಿ ಸ್ವಲ್ಪ ಜಾಸ್ತಿ ಎಂದು ಕಿಡಿಕಾರಿದ್ದಾರೆ.  ರವಿಕುಮಾರ ಎಂ. ಗಾಯಕವಾಡ ಎಂಬುವರು ನಿಮ್ಮವರೆ ನಿಮಗೆ ಗೂಟ ಇಟ್ಟಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರೆ, ನಿಷ್ಠೇಯ ಕೊರತೆ ಹಣದ ಲಾಲಸೆ ಕಳ್ಳನ ಕೈಯ್ಯಲ್ಲಿ ಕೀಲಿ ಕೊಟ್ಟಂಗೆ ೞದು ಕಲ್ಲನಗೌಡ ಗುರುನಗೌಡರ ಪ್ರತಿಕ್ರಿಯಿಸಿದ್ದಾರೆ.

ಅದರಲ್ಲೂ ಜೀತು ರಜಪೂತ ಎಂಬ ಹಿರಿಯ ಕಾರ್ಯಕರ್ತ ಯಾರೋ ಒಬ್ಬರು ಹಿರಿಯರು ಮಾತನಾಡುತ್ತಿದ್ದರು.  ಸಾಕಿದ ನಾಯಿಗಳೇ ಬ್ಯಾಟಿ ಆಡೋದು ಹಿಡಕೊಂಡು ಬಂದ ನಾಯಿಗಳಲ್ಲಾ.. ನಿಜವಾ? ಎಂದು ಪ್ರತಿಕ್ರಿಯಿಸುವ ಮೂಲಕ ಪಕ್ಷ ಕೇವಲ ಗೆಲ್ಲುವ ಕುದುರೆಗಳಿಗೆ ಮಣೆ ಹಾಕುವ ಬದಲು ಪಕ್ಷ ನಿಷ್ಠರಿಗೆ ಆದ್ಯತೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.ಮೊದಲು ಕಾರ್ಯಕರ್ತರನ್ನು ಗುರುತಿಸಿ ಜಿ. ಪಂ. ಟಿಕೆಟ್ ಕೊಡಿ.  ಶಾಸಕರಿಗೆ ಆಪ್ತರು, ಅವರ ಜಾತಿಯವರು ಅಂತ ಪರಿಗಣಿಸಿದರೆ ಹೀಗೆ ಆಗೋದು ಎಂದು ವೀರೇಶ ಪಾಟೀಲ ಎಂಬುವರು ಪ್ರತಿಕ್ರಿಯಿಸಿದರೆ, ವಿಠ್ಠಲ ಆರ್ ಯಂಕಂಚಿ ಬೊಮ್ಮನಜೋಗಿ ಎಂಬುವರು ಜಿಲ್ಲೆಯಲ್ಲಿ ಎಂ. ಬಿ. ಪಾಟೀಲ ಅವರನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುವವರವ ಬಿಜೆಪಿಯಲ್ಲಿ ಯಾರಾದರೂ ಇದ್ದರೆ ಹೇಳಿ ಎಂದು ಸವಾಲು ಹಾಕಿದ್ದಾರೆ.  ಎಲ್ಲರೂ ಅವರ ಕೈಯಲ್ಲಿಯೇ ಇದ್ದಾರೆ.  ಅವರಿಗೆ ಅಧಿಕಾರ ಸಿಕ್ಕಿದೆ ಎಂದು ಹೇಳಿದ್ದಾರೆ.  ಜಗನ್ನಾಥಗೌಡ ಪಾಟೀಲ ಎಂಬುವರು ಪಕ್ಷದ ತತ್ವ, ಸಿದ್ಧಾಂತಗಳು ಏನೂ ಗೊತ್ತಿಲ್ಲದ ನಾಯಿಗಳಿಗೆ ಕರೆದುತಂದು ಕೂಡಿಸಿದರೆ ಹೀಗೆ ಆಗೋದು. ನಾಲಾಯಕ್ ನನ್ಮಕಳು ಎಂದು ಕಟುವಾಗಿ ಟೀಕಿಸಿದ್ದಾರೆ.  ಭೀಮಾಶಂಕರ ಮೇತ್ರಿ ಎಂಬುವರಂತೂ ಮೂರು ನಾಯಿಗಳು ಇದರಲ್ಲಿ  ಮಗ್ನರಾಗಿದ್ದಾರೆ ಎಂದು ಹೇಳಿದ್ದಾರೆ.

ವಿನೋದ ಹಿಂಚಗೇರಿ ಎಂಬುವರಂತೂ ಬಿಜಾಪುರದಾಗ ಬಿಜೆಪಿದಾಗ ಗಂಡಸರ MLA ಇಲ್ಲ ತಿಳಿದುಕೋ ಎಂದರೆ, ಆರಂಭದಿಂದಲೂ ಬಿಜೆಪಿಯಲ್ಲಿಯೇ ಇರುವ    ಸೋಮನಗೌಡ ಬಿರಾದಾರ ಎಂಬುವರಂತೂ ಎಂ. ಬಿ. ಪಾಟೀಲ ಬಿಜೆಪಿಯ ನಾಯಕರು ಎಂದು ಹೇಳುವ ಮೂಲಕ ವಿಜಯಪುರ ಜಿಲ್ಲೆಯ ಬಿಜೆಪಿ ಪರಿಸ್ಥಿತಿಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.  ಸಂತೋಷ ಪಾಟೀಲ ಎಂಬುವರು ನೈಸರ್ಗಿಕ ಮೂರ್ಖತನ ಕೃತಕ ಜಾಣತನಕ್ಕಿಂತಲೂ ಒಳ್ಳೆಯದು.  ಇತ್ತೀಚೆಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿದ್ದೂ ಇದೆ ಎಂದು ವ್ಯಂಗ್ಯಾಡಿದ್ದಾರೆ.

ಒಟ್ಟಾರೆ, ವಿಜಯಪುರ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಪಿತ್ತ ನೆತ್ತಿಗೇರಿದ್ದು, ತಮ್ಮ ನಾಯಕರು ಕಾಂಗ್ರೆಸ್ಸಿನೊಂದಿಗೆ ಹೊಂದಿರುವ ಒಳಒಪ್ಪಂದದ ಬಗ್ಗೆ ಈಗ ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ವಾರ್ ಆರಂಭಿಸಿದ್ದಾರೆ.  ಈ ಮೂಲಕವಾದರೂ ಪಕ್ಷದ ಬೇರುಗಳಾದ ಕಾರ್ಯಕರ್ತರ ಅಳಲನ್ನು ತಮ್ಮ ಹಾಜ್ಯ ಮತ್ತು ರಾಷ್ಟ್ರ ಹೈಕಮಾಂಡ್ ಗಮನಿಸಲಿ ಎಂಬುದು ಇವರ ಈ ಪೋಸ್ಚ್ ಗಳು ಮತ್ತು ಪ್ರತಿಕ್ರಿಯೆಗಳಿಂದ ವ್ಯಕ್ತವಾಗುತ್ತಿದೆ.
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading