ತುಮಕೂರು ಪೊಲೀಸರಿಂದ ಸ್ಮಾರ್ಟ್ ಲಾಕ್ ಮಾನಿಟರಿಂಗ್ ಸಿಸ್ಟಮ್ ಜಾರಿ ; ಮನೆಗಳ ಮೇಲೆ ಕ್ಯಾಮೆರಾ ಹದ್ದಿನಕಣ್ಣು

ಹೊರಗೆ ಪ್ರವಾಸ ಹೋಗುವವರು ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ನೆಮ್ಮದಿಯಿಂದ ಪ್ರವಾಸ ಮಾಡಬಹುದು. ಜೊತೆಗೆ ಮನೆಗಳ್ಳರ ಮೇಲೆ ಹೆಚ್ಚಿನ ಕಣ್ಣಿಟ್ಟು ಅಪರಾಧ ತಡೆಗೆ ಈ ಆ್ಯಪ್ ಸಹಕಾರಿಯಾಗಲಿದೆ

ಸ್ಮಾರ್ಟ್ ಲಾಕ್ ಮಾನಿಟರಿಂಗ್ ಸಿಸ್ಟಮ್

ಸ್ಮಾರ್ಟ್ ಲಾಕ್ ಮಾನಿಟರಿಂಗ್ ಸಿಸ್ಟಮ್

  • Share this:
ತುಮಕೂರು(ಆಗಸ್ಟ್​. 07): ಸ್ಮಾರ್ಟ್ ಸಿಟಿ ತುಮಕೂರು ಜನರು ಇನ್ಮುಂದೆ ಮನೆಗಳ್ಳರಿಗೆ ಹೆದರುವಂತಿಲ್ಲ. ಮನೆಗೆ ಬೀಗ ಹಾಕಿ ತಮಗಿಷ್ಟ ಬಂದಷ್ಟು ದಿನ ಸಂಬಂಧಿಕರ ಮನೆಗೊ, ಪ್ರವಾಸಕ್ಕೆ ಹೋಗಿ ಬರಬಹುದು. ಮನೆಯಲ್ಲಿರುವ, ಆಭರಣದ ಬಗ್ಗೆ ಚಿಂತೆ ಇಲ್ಲದೆ ನೆಮ್ಮದಿಯಾಗಿ ಕಾಲ ಕಳೆದು ಬರಬಹುದು. ಯಾಕೆಂದರೆ ನಿಮ್ಮ ಮನೆ ಸದಾ ಪೊಲೀಸರ ಹದ್ದಿನ ಕಣ್ಗಾವಲಿನಲ್ಲಿರುತ್ತದೆ.

ತುಮಕೂರು ಜಿಲ್ಲಾ ಪೊಲೀಸರು ಸಿಹಿ ಸುದ್ಧಿಯೊಂದನ್ನು ನೀಡಿದ್ದಾರೆ. ಸ್ಮಾರ್ಟ್ ಸಿಟಿಯ ಸಹಯೋಗದಲ್ಲಿ ಸ್ಮಾರ್ಟ್ ಲಾಕ್ ಔಟ್ ಮಾನಿರ್ಟರಿಂಗ್ ಸಿಸ್ಟಮ್ ಅನ್ನು ಜಾರಿಗೆ ತಂದಿದ್ದಾರೆ. ವಾರಾನುಗಟ್ಟಲೆ ಮನೆಯಿಂದ ಹೊರಗೆ ಹೋಗುವ ನಾಗರೀಕರು ತುಮಕೂರು ಜಿಲ್ಲಾ ಪೊಲೀಸರು ಜಾರಿಗೆ ತಂದಿರುವ ಎಲ್‍ಎಚ್‍ಎಂ ಆ್ಯಪ್ ಅನ್ನು ತಮ್ಮ ಮೊಬೈಲ್ ನಲ್ಲಿ ಇನ್​ಸ್ಟಾಲ್​​ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.

ಬಳಿಕ ಎಷ್ಟು ದಿನದವರೆಗೂ ಮನೆಯಲ್ಲಿ ಇರುವುದಿಲ್ಲ ಎನ್ನುವುದನ್ನು ಆ್ಯಪ್ ಮೂಲಕ  ಪೊಲೀಸರಿಗೆ ಮಾಹಿತಿ ನೀಡಬೇಕು. ಜೊತೆಗೆ ನಿಮ್ಮ ಮನೆಯಿಂದಲ್ಲೇ ಜಿ.ಪಿ.ಎಸ್ ಲೊಕೇಷನ್ ಶೇರ್ ಮಾಡಬೇಕು. ಈ ರೀತಿ ಮಾಡಿದ್ರೆ, ನಿಮ್ಮ ಮನೆಗೆ ಪೊಲೀಸರು ಕ್ಯಾಮೆರಾ ಆಳವಡಿಸಿ ಹದ್ದಿನ ಕಣ್ಣಿಡುತ್ತಾರೆ. ಈ ಆ್ಯಪ್ ಮೂಲಕ ನೀವು ಹಾಯಾಗಿ ವಾರಾನುಗಟ್ಟಲೆ ನೆಮ್ಮದಿಯಿಂದ ಹೊರಗೆ ಹೋಗಿ ಬರಬಹುದು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈವರೆಗೂ 300ಕ್ಕೂ ಹೆಚ್ಚು ಜನರು ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದು ತುಮಕೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ.

ಇದನ್ನೂ ಓದಿ : ಗದಗ ಜಿಲ್ಲೆಯಲ್ಲಿ ಬೆಣ್ಣೆ ಹಳ್ಳದ ಆರ್ಭಟಕ್ಕೆ ಸೇತುವೆಗಳು ಜಲಾವೃತ; ಜಲಾಸುರನ ಅಬ್ಬರಕ್ಕೆ ಜನರು ಕಂಗಾಲು!

ಇದರಿಂದ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಮನೆಗೆ ನುಗ್ಗಿ ದರೋಡೆ ಮಾಡುವುದನ್ನು ತಪ್ಪಿಸಬಹುದಾಗಿದೆ. ಈ ಮೂಲಕ ತುಮಕೂರು ನಾಗರೀಕರಿಗೆ ಹೆಚ್ಚಿನ ರಕ್ಷಣೆ ನೀಡಲು ಪೊಲೀಸ್ ಹಾಗೂ ಸ್ಮಾರ್ಟ್‍ಸಿಟಿ ಮುಂದಾಗಿದೆ. ಈ ಎಲ್ಲಾ ಖರ್ಚು ವೆಚ್ಚವನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನೀಡಲಾಗಿದೆ.

ಕೊರೋನಾ ಬಳಿಕ ತುಮಕೂರು ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೊರಗೆ ಪ್ರವಾಸ ಹೋಗುವವರು ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ನೆಮ್ಮದಿಯಿಂದ ಪ್ರವಾಸ ಮಾಡಬಹುದು. ಜೊತೆಗೆ ಮನೆಗಳ್ಳರ ಮೇಲೆ ಹೆಚ್ಚಿನ ಕಣ್ಣಿಟ್ಟು ಅಪರಾಧ ತಡೆಗೆ ಈ ಆ್ಯಪ್ ಸಹಕಾರಿಯಾಗಲಿದೆ. ತುಮಕೂರು ನಾಗರೀಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತುಮಕೂರು ಸ್ಮಾರ್ಟ್ ಸಿಟಿ ಹಾಗೂ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.
Published by:G Hareeshkumar
First published: