6 ಬಾರಿ ಶಾಸಕರಾಗಿ ಆಯ್ಕೆಯಾದ ಸುಳ್ಯದ ಅಂಗಾರಗೆ ಮಂತ್ರಿ ಪಟ್ಟ; ಖುಷಿ ಮೂಡ್ ನಲ್ಲಿ ಜಿಲ್ಲೆಯ ಜನತೆ
ಅತ್ಯಂತ ಸರಳ ಸಜ್ಜನಿಕೆಯ ಶಾಸಕರಾಗಿ ಗುರುತಿಸಿಕೊಂಡಿರುವ ಎಸ್. ಅಂಗಾರ ಶಾಸಕರಾಗಿ ಎಲ್ಲಾ ಪಕ್ಷದವರನ್ನೂ ಒಂದೇ ರೀತಿ ಕಂಡವರು. ಇದರಿಂದಾಗಿ ಅಂಗಾರ ಸಚಿವರಾಗಿ ಆಯ್ಕೆಯಾಗಲಿರುವ ವಿಚಾರ ಜಿಲ್ಲೆಯ ಎಲ್ಲರ ಹರ್ಷಕ್ಕೂ ಕಾರಣವಾಗಿದೆ. ಸುಳ್ಯದ ಅಭಿವೃದ್ಧಿಯ ಜೊತೆಗೆ ಇದೀಗ ಇಡೀ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲಿ ಎನ್ನುವ ಹಾರೈಕೆಯೂ ಕೇಳಿ ಬರಲಾರಂಭಿಸಿದೆ.
news18-kannada Updated:January 13, 2021, 3:09 PM IST

ಅಡಿಕೆ ಸುಲಿಯುತ್ತಿರುವ ಶಾಸಕ ಎಸ್.ಅಂಗಾರ.
- News18 Kannada
- Last Updated: January 13, 2021, 3:09 PM IST
ದಕ್ಷಿಣಕನ್ನಡ; ಜಿಲ್ಲೆಯ ಬಂಗಾರ ಎಂದೇ ಕರೆಸಿಕೊಳ್ಳುವ ಸುಳ್ಯ ಶಾಸಕ ಎಸ್. ಅಂಗಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲಿದ್ದಾರೆ. ಸತತ ಆರು ಬಾರಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಪಕ್ಷದ ಮೂಲಕ ಶಾಸಕರಾಗಿ ಆರಿಸಿಕೊಂಡು ಬಂದಿರುವ ಅಂಗಾರ ಸಿಂಪಲ್ ರಾಜಕಾರಣಿ ಎಂದೇ ಗುರುತಿಸಿಕೊಂಡವರು. ಜನಪ್ರತಿನಿಧಿಯಾಗಿ ಹಾಗೂ ಸಾಮಾನ್ಯ ವ್ಯಕ್ತಿಯಾಗಿ ಅಂಗಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಅತ್ಯಂತ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಎಸ್.ಅಂಗಾರರ ಈ ಗುಣವೇ ಎಲ್ಲರನ್ನು ಆಕರ್ಷಿಸಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿನ ಜನ ಅಂಗಾರರನ್ನೇ ನಿರಂತರವಾಗಿ ಆರಿಸಿಕೊಂಡು ಬರುತ್ತಿರುವುದಕ್ಕೆ ಅವರ ಸರಳತೆಯೇ ಕಾರಣ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳಾಗಿರುವ ಅಂಗಾರ ಎಳವೆಯಿಂದಲೇ ಸಂಘದ ವಿಚಾರಗಳನ್ನು ಮೈಗೂಡಿಸಿಕೊಂಡು ರಾಜಕೀಯಕ್ಕೆ ಬಂದವರು. ಸಂಘದಿಂದ ಬಿಜೆಪಿ ಪಕ್ಷ ಸಂಘಟನೆಗೆ ಬಂದ ಬಳಿಕ ರಾಜಕೀಯವಾಗಿ ಪಳಗಿ ಬಂದವರು. 1994 ರಿಂದ ನಿರಂತರವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯಶಸ್ಸು ಅಂಗಾರರದು. ಪ್ರತೀ ಬಾರಿಯೂ ಸುಳ್ಯ ಕ್ಷೇತ್ರಕ್ಕೆ ಅಂಗಾರರನ್ನು ಬಿಟ್ಟರೆ ಬಿಜೆಪಿಗೆ ಬೇರೆ ಆಯ್ಕೆಯೇ ಇಲ್ಲ, ಆಕಾಂಕ್ಷಿಗಳೂ ಇಲ್ಲ ಎನ್ನುವ ಟ್ರೆಂಡ್ ಸೃಷ್ಟಿಸಿರುವ ಕೀರ್ತಿಯೂ ಅಂಗಾರರಿಗೇ ಸೇರುತ್ತದೆ. ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಎಸ್.ಅಂಗಾರ ಬಗ್ಗೆ ಸುಳ್ಯ ಕ್ಷೇತ್ರದಲ್ಲಿ ಈಗಲೂ ಒಲವಿದೆ. ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಅಂಗಾರ ಮೂಡಿಬಂದಿದ್ದು, ತನ್ನ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಿದ್ದಾರೆ ಎನ್ನುವ ಅಭಿಪ್ರಾಯಗಳು ಜನಸಾಮಾನ್ಯರದ್ದಾಗಿದೆ. ಹೆಚ್ಚಾಗಿ ದಲಿತ ಕುಟುಂಬಗಳೇ ಇರುವ ಈ ಕ್ಷೇತ್ರದಲ್ಲಿ ದಲಿತ ಕಾಲನಿಗಳ ಏಳಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ ಎನ್ನುವ ಮೆಚ್ಚುಗೆಯ ಮಾತೂ ಕ್ಷೇತ್ರದ ಜನರದ್ದಾಗಿದೆ. ಇದನ್ನು ಓದಿ: ಜ.28ರಿಂದ ಫೆ.5ರವರೆಗೆ ವಿಧಾನಸಭಾ ಜಂಟಿ ಅಧಿವೇಶನ; ಕಾನೂನು ಸಚಿವ ಮಾಧುಸ್ವಾಮಿ
ಜನಪ್ರತಿನಿಧಿಯಾಗಿ ಅಂಗಾರ ಎಷ್ಟು ಸಿಂಪಲ್ಲೋ, ಅಷ್ಟೇ ಸಿಂಪಲ್ ವ್ಯಕ್ತಿತ್ವವನ್ನು ವೈಯುಕ್ತಿಕ ಬದುಕಿನಲ್ಲೂ ರೂಢಿಸಿಕೊಂಡು ಬಂದಿದ್ದಾರೆ. ತನ್ನ ಮನೆಯ ಎಲ್ಲಾ ಕೆಲಸಗಳನ್ನು ಸ್ವತಃ ಅವರೇ ಮಾಡುವ ಅಂಗಾರ ತಮ್ಮ ಕೃಷಿ ತೋಟದಲ್ಲಿ ಕೃಷಿ ಕಾರ್ಮಿಕರಾಗಿ ಈಗಲೂ ದುಡಿಯುತ್ತಾರೆ. ತೋಟದಲ್ಲಿ ಕಳೆ ಕೀಳುವ, ಕೊಯ್ದ ಅಡಿಕೆಯನ್ನು ಸುರಿಯುವ, ಮನೆಯ ಗೋವುಗಳಿಗೆ ಆಹಾರ ನೀಡುವ ಎಲ್ಲಾ ಕೆಲಸವನ್ನೂ ಮನೆಯಲ್ಲಿರುವ ಸಂದರ್ಭದಲ್ಲಿ ಅಂಗಾರರೇ ನಿರ್ವಹಿಸುತ್ತಾರೆ. ಅಲ್ಲದೇ ಬೆಂಗಳೂರಿನ ವಿಧಾನಸೌಧದ ಶಾಸಕರ ರೂಂ ನಲ್ಲಿ ಇರುವ ಸಂದರ್ಭದಲ್ಲೂ ತನಗೆ ಬೇಕಾದ ಆಹಾರವನ್ನು ತಾವೇ ಸಿದ್ದಪಡಿಸುತ್ತಾರೆ. ಅಲ್ಲದೇ ತಮ್ಮನ್ನು ಕಾಣಲು ಬರುವ ಕ್ಷೇತ್ರದ ಜನರು ತಮ್ಮ ಬೆಂಗಳೂರಿನ ಕಚೇರಿಗೆ ಬರುವ ಸಂದರ್ಭದಲ್ಲಿ ಬಂದ ಜನರ ಸತ್ಕಾರವನ್ನೂ ಅಂಗಾರರೇ ನಿರ್ವಹಿಸುತ್ತಾರೆ.
ಅತ್ಯಂತ ಸರಳ ಸಜ್ಜನಿಕೆಯ ಶಾಸಕರಾಗಿ ಗುರುತಿಸಿಕೊಂಡಿರುವ ಎಸ್. ಅಂಗಾರ ಶಾಸಕರಾಗಿ ಎಲ್ಲಾ ಪಕ್ಷದವರನ್ನೂ ಒಂದೇ ರೀತಿ ಕಂಡವರು. ಇದರಿಂದಾಗಿ ಅಂಗಾರ ಸಚಿವರಾಗಿ ಆಯ್ಕೆಯಾಗಲಿರುವ ವಿಚಾರ ಜಿಲ್ಲೆಯ ಎಲ್ಲರ ಹರ್ಷಕ್ಕೂ ಕಾರಣವಾಗಿದೆ. ಸುಳ್ಯದ ಅಭಿವೃದ್ಧಿಯ ಜೊತೆಗೆ ಇದೀಗ ಇಡೀ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲಿ ಎನ್ನುವ ಹಾರೈಕೆಯೂ ಕೇಳಿ ಬರಲಾರಂಭಿಸಿದೆ.
ಅತ್ಯಂತ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಎಸ್.ಅಂಗಾರರ ಈ ಗುಣವೇ ಎಲ್ಲರನ್ನು ಆಕರ್ಷಿಸಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿನ ಜನ ಅಂಗಾರರನ್ನೇ ನಿರಂತರವಾಗಿ ಆರಿಸಿಕೊಂಡು ಬರುತ್ತಿರುವುದಕ್ಕೆ ಅವರ ಸರಳತೆಯೇ ಕಾರಣ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳಾಗಿರುವ ಅಂಗಾರ ಎಳವೆಯಿಂದಲೇ ಸಂಘದ ವಿಚಾರಗಳನ್ನು ಮೈಗೂಡಿಸಿಕೊಂಡು ರಾಜಕೀಯಕ್ಕೆ ಬಂದವರು. ಸಂಘದಿಂದ ಬಿಜೆಪಿ ಪಕ್ಷ ಸಂಘಟನೆಗೆ ಬಂದ ಬಳಿಕ ರಾಜಕೀಯವಾಗಿ ಪಳಗಿ ಬಂದವರು. 1994 ರಿಂದ ನಿರಂತರವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯಶಸ್ಸು ಅಂಗಾರರದು. ಪ್ರತೀ ಬಾರಿಯೂ ಸುಳ್ಯ ಕ್ಷೇತ್ರಕ್ಕೆ ಅಂಗಾರರನ್ನು ಬಿಟ್ಟರೆ ಬಿಜೆಪಿಗೆ ಬೇರೆ ಆಯ್ಕೆಯೇ ಇಲ್ಲ, ಆಕಾಂಕ್ಷಿಗಳೂ ಇಲ್ಲ ಎನ್ನುವ ಟ್ರೆಂಡ್ ಸೃಷ್ಟಿಸಿರುವ ಕೀರ್ತಿಯೂ ಅಂಗಾರರಿಗೇ ಸೇರುತ್ತದೆ. ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಎಸ್.ಅಂಗಾರ ಬಗ್ಗೆ ಸುಳ್ಯ ಕ್ಷೇತ್ರದಲ್ಲಿ ಈಗಲೂ ಒಲವಿದೆ. ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಅಂಗಾರ ಮೂಡಿಬಂದಿದ್ದು, ತನ್ನ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಿದ್ದಾರೆ ಎನ್ನುವ ಅಭಿಪ್ರಾಯಗಳು ಜನಸಾಮಾನ್ಯರದ್ದಾಗಿದೆ. ಹೆಚ್ಚಾಗಿ ದಲಿತ ಕುಟುಂಬಗಳೇ ಇರುವ ಈ ಕ್ಷೇತ್ರದಲ್ಲಿ ದಲಿತ ಕಾಲನಿಗಳ ಏಳಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ ಎನ್ನುವ ಮೆಚ್ಚುಗೆಯ ಮಾತೂ ಕ್ಷೇತ್ರದ ಜನರದ್ದಾಗಿದೆ.