• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Kolar NH 75: ಕೆಆರ್ ಪುರಂನಿಂದ ಕೋಲಾರದ ಗಡಿವರೆಗೆ 6 ಪಥದ ರಸ್ತೆ ನಿರ್ಮಾಣಕ್ಕೆ ಮನವಿ; ಸಂಸದ ಎಸ್.ಮುನಿಸ್ವಾಮಿ

Kolar NH 75: ಕೆಆರ್ ಪುರಂನಿಂದ ಕೋಲಾರದ ಗಡಿವರೆಗೆ 6 ಪಥದ ರಸ್ತೆ ನಿರ್ಮಾಣಕ್ಕೆ ಮನವಿ; ಸಂಸದ ಎಸ್.ಮುನಿಸ್ವಾಮಿ

ಅಧಿಕಾರಿಗಳೊಂದಿಗೆ ಎನ್​ಎಚ್​ 75 ರಸ್ತೆ ಪರಿಶೀಲನೆ ನಡೆಸಿದ ಸಂಸದ ಎಸ್.ಮುನಿಸ್ವಾಮಿ.

ಅಧಿಕಾರಿಗಳೊಂದಿಗೆ ಎನ್​ಎಚ್​ 75 ರಸ್ತೆ ಪರಿಶೀಲನೆ ನಡೆಸಿದ ಸಂಸದ ಎಸ್.ಮುನಿಸ್ವಾಮಿ.

ಮಳೆ ಬಂದರೆ ರಸ್ತೆಗಳಲ್ಲಿ ನೀರು ನಿಲ್ಲುವುದು, ಚರಂಡಿಗಳಲ್ಲಿನ ನೀರು ಹೊರಗೆ ಹೊಗಲಾರದ ಪರಿಸ್ಥಿತಿಯು ಇದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗುತ್ತಿಗೆ ಪಡೆದ ಸಂಸ್ಥೆಯ ನಿರ್ಲಕ್ಷ್ಯ ಕಣ್ಣಿಗೆ ಕಾಣುತ್ತಿದೆ. ಕೂಡಲೇ ಇಂತಹ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಾಹನ ಸವಾರರು, ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದೆ ಓದಿ ...
  • Share this:

ಕೋಲಾರ: ಬೆಂಗಳೂರಿನ ಕೆಆರ್ ಪುರಂ ನಿಂದ ಕೊಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಂಧ್ರ ಗಡಿಯಾದ ನಂಗಲಿ ಗ್ರಾಮದವರೆಗೂ, ರಾಷ್ಟ್ರೀಯ ಹೆದ್ದಾರಿ 75 ರ ನಾಲ್ಕು ಪಥದ ರಸ್ತೆಯಿದೆ. ಇದೀಗ ಟ್ರಾಫಿಕ್ ದಟ್ಟಣೆ, ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಅಗತ್ಯ ಸ್ಥಳಗಳಲ್ಲಿ ಸ್ಕೈವಾಕರ್​ಗಳನ್ನು ಮತ್ತು ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆಗಳನ್ನು ನಿರ್ಮಿಸುವಂತೆ ಸಾರ್ವಜನಿಕ ವಲಯದಿಂದ ಸಾಕಷ್ಟು ಬಾರಿ ಆಗ್ರಹಗಳು ವ್ಯಕ್ತವಾಗುತ್ತಿದೆ.


ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರು, ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪರಿವೀಕ್ಷಣೆಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ಮಾಡಿದರು. ರಾಷ್ಟ್ರೀಯ ಪ್ರಾಧಿಕಾರದ ಹಿರಿಯ ಅಧಿಕಾರಿ ಸೋಮಶೇಖರ್,  ಡಿಸಿ ಸೆಲ್ವಮಣಿ, ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳ ಜೊತೆಗೂಡಿ, ಜನರು ಸಮಸ್ಯೆ ಎದುರಿಸುತ್ತಿರುವ ಸ್ಥಳಗಳನ್ನ ಪರಿಶೀಲನೆ ನಡೆಸಿದರು. ಬೆಂಗಳೂರಿನ ಕೆಆರ್ ಪುರಂ‌ನಿಂದ ಕೋಲಾರದ ನಂಗಲಿ ವರೆಗೂ ನಡೆದ ಪರಿವೀಕ್ಷಣೆಯಲ್ಲಿ ಪ್ರಮುಖವಾಗಿ ಅಂಡರ್ ಪಾಸ್,  ಮೇಲ್ಸೇತುವೆ ಕಟ್ಟುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.


ಕೋಲಾರ ಜಿಲ್ಲೆಯ ನರಸಾಪುರ, ಕೊಂಡರಾಜನಹಳ್ಳಿ, ಮಡೇರಹಳ್ಳಿ, ವಡಗೂರು, ಅಜ್ಜಪ್ಪನಹಳ್ಳಿ, ತಂಬಹಳ್ಳಿ, ಕಾಂತರಾಜ ಸರ್ಕಲ್ ಸೇರಿದಂತೆ ಹಲವೆಡೆ ದಿನನಿತ್ಯ ಅಪಘಾತಗಳು ನಡೆಯುತ್ತಿದ್ದು, ವಾಹನ ಸವಾರರು ತಮ್ಮ ಪ್ರಾಣ ಕಳೆದುಕೊಳ್ಳುವಂತಾಗಿದೆ. ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರು ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ‌.


ಇದನ್ನು ಓದಿ: Assembly Session - ಅಧಿವೇಶನದ ಎರಡನೇ ದಿನವೂ ಕಲಾಪಕ್ಕೆ ಅಡ್ಡಿ; ‘ಅಯ್ಯಯ್ಯೋ ಅನ್ಯಾಯ’ ಎಂದು ಕೈ ಪ್ರತಿಭಟನೆ


ರಾಷ್ಟ್ರೀಯ ಹೆದ್ದಾರಿ 75 ಪರಿವೀಕ್ಷಣೆಯ ವೇಳೆ ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ  ಅವರು, ವಾಹನ ದಟ್ಟಣೆ ಹೆಚ್ಚುತ್ತಿರುವ ಅನುಗುಣವಾಗಿ ರಸ್ತೆಯಲ್ಲಿನ ಸೌಲಭ್ಯಗಳನ್ನು ಕೊಡಬೇಕಾಗಿದೆ. ಹೀಗಾಗಿ  4 ಲೇನ್ ಇರುವ ರಸ್ತೆಯನ್ನು, 6  ಲೇನ್ ಆಗಿ ಪರಿವರ್ತಿಸಬೇಕಾದ ಅವಶ್ಯಕತೆ ಇದ್ದು, ಇದರ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ  ಅವರ ಅನುಮೋದನೆ ಪಡೆದು, ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಇದನ್ನು 6 ಲೇನ್ ಆಗಿ ಪರಿವರ್ತಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.


ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾದ ರಾಷ್ಟ್ರೀಯ ಹೆದ್ದಾರಿ 75


ರಾಷ್ಟ್ರೀಯ ಹೆದ್ದಾರಿ ರಸ್ತೆಯು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ‌ ಆಗರವಾಗಿದೆ. ರಸ್ತೆಯ ಬದಿಯ ವಿಭಜಕದ ಮಧ್ಯೆ ಹಾಕಿರುವ ಗಿಡಗಳು ಭಾಗಶಃ ಸರಿಯಾಗಿ ಪೋಷಣೆ ಮಾಡುತ್ತಿಲ್ಲ. ಅದರಿಂದಾಗಿ ಎರಡು ಬದಿಯಲ್ಲಿ ಚಲಿಸುವ ವಾಹನಗಳ ಅತಿಯಾದ ಬೆಳಕಿನಿಂದ ಅಪಘಾತಗಳು ಹೆಚ್ಚುತ್ತಿದೆ, ಇನ್ನು ರಸ್ತೆಯಲ್ಲಿ ಪ್ರಮುಖವಾಗಿ ಬಿಳಿ ಸೂಚನಾ ಸಂಕೇತಗಳು ಕಾಣೆಯಾಗಿದ್ದು, ರಾತ್ರಿಹೊತ್ತು ಅಪಘಾತ ಸ್ಥಳವನ್ನು ಚಾಲಕರು ತ್ವರಿತವಾಗಿ ತಿಳಿದುಕೊಳ್ಳಲು ಮಿನುಗುತ್ತಿದ್ದ ಸ್ಥಳಗಳಲ್ಲಿ ನಿರ್ವಹಣೆಯಿಲ್ಲದೆ ಕಾಣೆಯಾಗಿದೆ. ಇನ್ನು ಮಳೆ ಬಂದರೆ ರಸ್ತೆಗಳಲ್ಲಿ ನೀರು ನಿಲ್ಲುವುದು, ಚರಂಡಿಗಳಲ್ಲಿನ ನೀರು ಹೊರಗೆ ಹೊಗಲಾರದ ಪರಿಸ್ಥಿತಿಯು ಇದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗುತ್ತಿಗೆ ಪಡೆದ ಸಂಸ್ಥೆಯ ನಿರ್ಲಕ್ಷ್ಯ ಕಣ್ಣಿಗೆ ಕಾಣುತ್ತಿದೆ. ಕೂಡಲೇ ಇಂತಹ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಾಹನ ಸವಾರರು, ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು