ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹಾಡಹಗಲೇ ಆರು ದಿನದ ಗಂಡು ಮಗು ಅಪಹರಣ!

ಆಸ್ಪತ್ರೆಯಿಂದ ಮಗುವಿನ ಸಹಿತ ಹೊರ ಬಂದ ಅಂದಾಜು 25 ವರ್ಷದ  ಅಪರಿಚಿತ ಮಹಿಳೆಯೊಬ್ಬರು ಆಟೋವೊಂದರ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್ ಹತ್ತಿಕೊಂಡು ಹೋಗಿದ್ದಾಳೆ ಎಂಬ ಮಾಹಿತಿ ಇದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್.

ಚಾಮರಾಜನಗರ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್.

  • Share this:
ಚಾಮರಾಜನಗರ (ಜೂ.17); ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನಾ ಆಸ್ಪತ್ರೆಯಲ್ಲಿ  ಹಾಡಹಗಲೇ ಆರು ದಿನಗಳ ಹಸುಳೆಯನ್ನು ಅಪಹರಿಸಿರುವ ಘಟನೆ ನಡೆದಿದೆ. ಅಪರಿಚಿತ ಮಹಿಳೆಯೊಬ್ಬಳು ಮಗುವನ್ನು ವೈದ್ಯರ ಬಳಿ ತೋರಿಸಿಕೊಡುವುದಾಗಿ ನಾಟಕವಾಡಿ ಪೋಷಕರನ್ನು ಯಾಮಾರಿಸಿ ಮಗುವನ್ನು ಕದ್ದೊಯ್ದಿದ್ದಾಳೆ.

ಕೊಳ್ಳೇಗಾಲ ತಾಲೂಕು ಪಾಳ್ಯ ಗ್ರಾಮದ ಮುತ್ತುರಾಜಮ್ಮ ಎಂಬಾಕೆಯನ್ನು ಟಿ.ನರಸೀಪುರ ತಾಲೂಕು ವ್ಯಾಸರಾಜಪುರದ ಕುಮಾರ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಎರಡನೇ ಮಗುವಿನ ಹೆರಿಗೆಗಾಗಿ ತವರು ಮನೆ ಪಾಳ್ಯ ಗ್ರಾಮಕ್ಕೆ ಬಂದಿದ್ದ ಮುತ್ತುರಾಜಮ್ಮನನ್ನು  ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನಾ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಕಳೆದ ಆರು ದಿನಗಳ ಹಿಂದೆ ಸಿಜೇರಿಯನ್ ಮೂಲಕ ಈಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇಂದು ಮಧ್ಯಾಹ್ನ ಮಗುವಿಗೆ ಬೇಧಿ ಆಗಿದ್ದರಿಂದ ವೈದ್ಯರ ಬಳಿ ತೋರಿಸಲು ಮಗುವಿನ ಅಜ್ಜಿ ರಾಜಮ್ಮ ಹೆರಿಗೆ ವಾರ್ಡ್​ನಿಂದ ಮಗುವನ್ನು ಕರೆದುಕೊಂಡು ಹೊರರೋಗಿಗಳ ವಿಭಾಗಕ್ಕೆ ಬಂದಿದ್ದಾರೆ. ಬೆಳಿಗ್ಗೆಯಿಂದ ಹೆರಿಗೆ ವಾರ್ಡ್​ನಲ್ಲೇ ಅಡ್ಡಾಡುತ್ತಿದ್ದ ಅಪರಿಚಿತ ಮಹಿಳೆಯೊಬ್ಬರು ತನಗೆ ವೈದ್ಯರು ಗೊತ್ತಿರುವುದಾಗಿಯು ಮಗುವನ್ನು ತೋರಿಸಿಕೊಡುವುದಾಗಿಯು ಹೇಳಿ ಅಜ್ಜಿಯ ಜೊತೆ ಬಂದಿದ್ದಾಳೆ. ಮಗುವನ್ನು ತಾನೆ ಎತ್ತಿಕೊಂಡ ಈ ಮಹಿಳೆ, ವೈದ್ಯರು ಇದ್ದಾರೆಯೇ ನೋಡಿಕೊಂಡು ಬರುವಂತೆ ಅಜ್ಜಿಯನ್ನು ಹೊರರೋಗಿಗಳ ವಿಭಾಗದ ಕೊಠಡಿಗೆ ಕಳುಹಿಸಿದ್ದಾಳೆ. ಅದರಂತೆ ಅಜ್ಜಿ ವೈದ್ಯರ ನೋಡಿಬರಲು ಒಬ್ಬರೆ ಹೋಗಿ, ವಾಪಸ್ ಬರುವಷ್ಟರಲ್ಲಿ ಅಪರಿಚಿತ  ಮಹಿಳೆ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ.

ಇದನ್ನು ಓದಿ: ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಫೈಟಿಂಗ್; ಭಾರತೀಯ ಸೈನಿಕರ ಮೇಲೆ ಚೀನೀ ಡೆತ್ ಸ್ಕ್ವಾಡ್ ರಕ್ಕಸತನ

ಆಸ್ಪತ್ರೆಯಿಂದ ಮಗುವಿನ ಸಹಿತ ಹೊರ ಬಂದ ಅಂದಾಜು 25 ವರ್ಷದ  ಅಪರಿಚಿತ ಮಹಿಳೆಯೊಬ್ಬರು ಆಟೋವೊಂದರ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್ ಹತ್ತಿಕೊಂಡು ಹೋಗಿದ್ದಾಳೆ ಎಂಬ ಮಾಹಿತಿ ಇದೆ. ಈ ಸಂಬಂದ  ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಕೃಷ್ಣಪ್ರಸಾದ್ ನ್ಯೂಸ್ 18ಗೆ ತಿಳಿಸಿದ್ದಾರೆ.

ವಿಷಯ ತಿಳಿದ ಪಟ್ಟಣ ಠಾಣೆ ಪೊಲೀಸರು ಆಸ್ಪತ್ರೆಗೆ ಬಂದು ಮಾಹಿತಿ ಕಲೆ  ಹಾಕುತ್ತಿದ್ದಾರೆ. ಸಿ.ಸಿ.ಟಿವಿಯನ್ನು ವಶಕ್ಕೆ ಪಡೆದು ಪರಿಶೀಲಿನೆ ನಡೆಸಿದ್ದಾರೆ. ಅಲ್ಲದೆ ಆಸ್ಪತ್ರೆಯ ಹೊರಭಾಗದಲ್ಲಿರುವ ಖಾಸಗಿ ಅಂಗಡಿ ಮುಂಗಟ್ಟುಗಳ ಸಿಸಿ ಟಿವಿ ಗಳನ್ನು ಸಹ ಪರಿಶೀಲನೆ ನಡೆಸಲು ಕ್ರಮ ಕೈಗೊಂಡಿದ್ದಾರೆ.
First published: