• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮದ್ದೂರಿನ ವಕೀಲ ರವೀಂದ್ರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; 6 ಜನ ಆರೋಪಿಗಳ ಬಂಧನ

ಮದ್ದೂರಿನ ವಕೀಲ ರವೀಂದ್ರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; 6 ಜನ ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊಲೆ ನಡೆದ 3 ದಿನದಲ್ಲಿ  ಮಂಡ್ಯ ಜಿಲ್ಲೆಯ ಕೆಸ್ತೂರು ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಶೀಘ್ರವಾಗಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಕೆಸ್ತೂರು ಪೊಲೀಸರ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿವರು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿ, ನಗದು ಬಹುಮಾನ ಘೋಷಿಸಿದ್ದಾರೆ.

ಮುಂದೆ ಓದಿ ...
  • Share this:

ಮಂಡ್ಯ: ಮಂಡ್ಯದ ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ ಜ.2ರಂದು ವಕೀಲ ರವೀಂದ್ರ ಎಂಬುವವರ ಬರ್ಬರ ಹತ್ಯೆಯಾಗಿತ್ತು. ದುಷ್ಕರ್ಮಿಗಳು ವಕೀಲ ರವೀಂದ್ರರನ್ನು ಕೊಲೆಗೈದು ಶವವನ್ನು ಶಿಂಷಾ ನದಿಯಲ್ಲಿ ಮುಳು ಗಿಸಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರಿನ‌ ಕೆಸ್ತೂರು ಪೊಲೀಸರು ಇದೀಗ ತನಿಖೆ ನಡೆಸಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.


ಜನವರಿ 2ನೇ ತಾರೀಖು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ ವಕೀಲ ರವೀಂದ್ರ ಎಂಬ ವ್ಯಕ್ತಿಯ ಬರ್ಬರ ಹತ್ಯೆಯಾಗಿತ್ತು. ಈ ಪ್ರಕರಣ ಕೂಡ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು. ಕೊಲೆಯಾದ ವಕೀಲನ ಶವವನ್ನು ದುಷ್ಕರ್ಮಿಗಳು ಕೊಲೆಗೈದ ಬಳಿಕ ಶಿಂಷಾ ನದಿಯಲ್ಲಿ ಮುಳುಗಿಸಿ‌ ಮೃತದೇಹದ ಮೇಲೆ ಚಪ್ಪಡಿ ಕಲ್ಲನ್ನು ಹೇರಿ ನಾಪತ್ತೆಯಾಗಿದ್ದರು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಕೆಸ್ತೂರು ಪೊಲೀಸರ ತಂಡ ಪ್ರಕರಣ ದಾಖಸಿಕೊಂಡು 3 ದಿನದಲ್ಲಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.


ಪ್ರಕರಣದಲ್ಲಿ ಬೆಂಗಳೂರಿನ ND ರಂಗಸ್ವಾಮಿ, ಶಾಂತರಾಜು , N.T ರಂಗಸ್ವಾಮಿ‌, ಅಭಿರಾಜು,ನಾಗರಾಜು ಸೇರಿ ಓರ್ವ ಅಪ್ರಾಪ್ತ ಬಾಲಕ ಸೇರಿ 6 ಜನ ಆರೋಪಿಗಳನ್ನು  ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಇದನ್ನು ಓದಿ: ಲಕ್ಷಾಂತರ ರೂ. ಲೂಟಿ ಮಾಡಿ ಅದ್ಧೂರಿಯಾಗಿ ತಂಗಿ ಮದುವೆ ಮಾಡಿ, ಜೈಲು ಪಾಲಾದ ಅಣ್ಣ!


ಇನ್ನು ಪ್ರಕರಣದಲ್ಲಿ ವಕೀಲನ ಕೊಲೆಗೆ ಹಳೇ ದ್ವೇಷವೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಮೃತ ವಕೀಲ ರವೀಂದ್ರ 2017 ರಲ್ಲಿ ಅದೇ ಗ್ರಾಮದ ಮೇಲ್ಜಾತಿಯ ಮಹಿಳೆಯೋರ್ವಳ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಆಕೆ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆರೋಪಿಯಾಗಿದ್ದರು. ಕಳೆದ ಡಿ-31 ರಂದು ನ್ಯಾಯಾಲಯದಿಂದ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಪ್ರಕರಣದಿಂದ ಖುಲಾಸೆಗೊಂಡಿದ್ದರು. ಇದರಿಂದ ಸಿಟ್ಟಿಗೆದಿದ್ದ ಮಹಿಳೆಯರ ಕಡೆಯವರ ಪೈಕಿ ರಂಗಸ್ವಾಮಿ ಎನ್ನುವ ಓರ್ವ ವಕೀಲನ ಹತ್ಯೆಗೆ 15 ದಿನಗಳ ಹಿಂದೆಯೇ ಸಂಚು ರೂಪಿಸಿದ್ದ. ಇದಕ್ಕಾಗಿ ಹಡಕನಹಳ್ಳಿಯ ಮೂವರು ಯುವಕರ ಸಹಾಯ ಪಡೆದು ಜ-02 ರಂದು ಜಮೀನಿನ ಬಳಿ ಇದ್ದ ರವೀಂದ್ರರನ್ನು ಹತ್ಯೆಗೈದು ಶವವನ್ನು ಶಿಂಷಾ ನದಿಯಲ್ಲಿ ಮುಳುಗಿಸಿ ಇಟ್ಟು ಪರಾರಿಯಾಗಿದ್ದರು. ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ 3 ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ‌ಪ್ರಕರಣ ದಾಖಲಿಸಿಕೊಂಡಿದ್ದ ಕೆಸ್ತೂರು ಪೊಲೀಸರು ತನಿಖಾ ತಂಡಗಳ ಸಹಾಯದಿಂದ ಹಡಕನಹಳ್ಳಿಯಲ್ಲಿ ಅಡಗಿದ್ದ 6 ಜನ ಆರೋಪಿಗಳನ್ನು‌ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಒಟ್ಟಾರೆ ಕೊಲೆ ನಡೆದ 3 ದಿನದಲ್ಲಿ  ಮಂಡ್ಯ ಜಿಲ್ಲೆಯ ಕೆಸ್ತೂರು ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಶೀಘ್ರವಾಗಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಕೆಸ್ತೂರು ಪೊಲೀಸರ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿವರು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿ, ನಗದು ಬಹುಮಾನ ಘೋಷಿಸಿದ್ದಾರೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು