ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದೇ ಸ್ಥಾನ ಸಹೋದರಿಯರ ಸವಾಲು!

ಡಿಸೆಂಬರ್ 14 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿತ್ತು. ಸ್ಪರ್ಧಿಸಲೇಬೇಕು ಎಂದು ಪಟ್ಟು ಹಿಡಿದಿರುವ ಸಹೋದರಿಯರಿಬ್ಬರು ನಾಮಪತ್ರ ಹಿಂಪಡೆದಿಲ್ಲ. ಡಿಸೆಂಬರ್ 22 ರಂದು ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಅಕ್ಕ ಗೆಲ್ಲುತ್ತಾರೊ, ತಂಗಿ ಗೆಲ್ಲುತ್ತಾರೋ ಕಾದು ನೋಡಬೇಕು.

ಅಕ್ಕ ಹನುಮಂತೆಮ್ಮ, ತಂಗಿ ಬಸಮ್ಮ

ಅಕ್ಕ ಹನುಮಂತೆಮ್ಮ, ತಂಗಿ ಬಸಮ್ಮ

  • Share this:
ರಾಯಚೂರು: ಚುನಾವಣೆ ಅಂದರೆ ಹಾಗೆ, ರಕ್ತ ಸಂಬಂಧ, ಒಡಹುಟ್ಟಿದವರ ಮಧ್ಯೆದ ಸಂಬಂಧಗಳಿಗಿಂತ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವುದು ಮುಖ್ಯವಾಗಿರುತ್ತೆ. ಇದಕ್ಕೆ ಉದಾಹರಣೆಯೊಂದು ಇಲ್ಲಿದೆ. ಒಡಹುಟ್ಟಿದ ಅಕ್ಕ- ತಂಗಿ ಇಬ್ಬರು ಒಂದೇ ಸ್ಥಾನಕ್ಕೆ ಪೈಪೋಟಿ ನಡೆಸಿ ಇಬ್ಬರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ರಾಯಚೂರು ತಾಲೂಕಿನ ದೇವಸಗೂರು ಗ್ರಾಮ ಪಂಚಾಯತಿ ಚುನಾವಣೆಯ ಅಖಾಡ ಸಿದ್ದವಾಗಿದೆ. ಒಟ್ಟು 56 ಸದಸ್ಯ ಬಲದ ದೇವಸಗೂರು ಪಂಚಾಯತಿಯ ಚುನಾವಣೆಯಲ್ಲಿ ಗಮನ ಸೆಳೆಯುತ್ತಿರುವ 7ನೇ ವಾರ್ಡಿನ ಚುನಾವಣೆ, ಈ ವಾರ್ಡಿನಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಸ್ಥಾನಕ್ಕೆ ಒಟ್ಟು 3 ಜನ ಸ್ಪರ್ಧಿಸಿದ್ದಾರೆ. ಅದರಲ್ಲಿ ಇಬ್ಬರು ಒಡಹುಟ್ಟಿದವರು. ಅಕ್ಕ ಹನುಮಂತೆಮ್ಮ ವಿರುದ್ದ ತಂಗಿ ಬಸಮ್ಮ ಸ್ಪರ್ಧೆಗಿಳಿದಿದ್ದಾರೆ.

ಮೂಲತಃ ದೇವದುರ್ಗಾ ತಾಲೂಕಿನ ಹೇರುಂಡಿಯವರಾದ ಹನುಮಂತೆಮ್ಮ ಹಾಗೂ ಬಸಮ್ಮ ಮದುವೆಯಾದ ನಂತರ ದೇವಸೂಗೂರಿಗೆ ಬಂದಿದ್ದಾರೆ. ಹನುಮಂತೆಮ್ಮ ಗಂಡ ದೇವಸಗೂರು ಪಂಚಾಯತಿಯಲ್ಲಿ ನೀರುಗಂಟಿಯಾಗಿದ್ದಾರೆ. ಹನುಮಂತೆಮ್ಮ ಆರ್ ಟಿಪಿಎಸ್ ನಲ್ಲಿ ದಿನಗೂಲಿ ನೌಕರರಾಗಿದ್ದರು. ಈ ಮಧ್ಯೆ ಕಳೆದ ಬಾರಿ ಹನುಮಂತೆಮ್ಮ 6 ನೇ ವಾರ್ಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ ಮತ್ತೆ 7 ವಾರ್ಡಿಗೆ ನಿಂತಿದ್ದಾರೆ. ಕಳೆದ ಬಾರಿಯೂ ಸ್ಪರ್ಧೆ ಬಯಸಿದ್ದ ಬಸಮ್ಮರಿಗೆ ಅಕ್ಕ ನಿಂತಿದ್ದಾಳೆ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಈ ಬಾರಿ ತನಗೆ ಅವಕಾಶ ನೀಡಬಹುದು ಎಂದು ಕೊಂಡು ಮತ್ತೆ ಸ್ಪರ್ಧೆಯ ಆಸೆ ವ್ಯಕ್ತಪಡಿಸಿದರು, ಆದರೆ ಅಕ್ಕ ಹನುಮಂತೆಮ್ಮ ಸ್ಪರ್ಧೆಯಿಂದ ಹಿಂದೆ ಸರಿಲಿಲ್ಲ. ಬಸಮ್ಮ ಗಂಡ ದಲಿತ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದು ಪತ್ನಿಯನ್ನು ನಿಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದದ್ದರು. ಬಸಮ್ಮ ವಾರದ ಸಂತೆಯಲ್ಲಿ ತರಕಾರಿ ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನಿಂತು ನನ್ನ ವಾರ್ಡಿಗೆ ನನ್ನ ಕೈಲಾದಷ್ಟು ಸಹಾಯ ಮಾಡುವ ಆಸೆ ಇದೆ. ಆದರೆ ಎದುರಾಳಿ ಅಕ್ಕನೇ ಆಗಿದ್ದಾಳೆ. ಈಗ ಚುನಾವಣೆ ನಡೆಯುತ್ತಿದೆ, ಇಬ್ಬರಲ್ಲಿ ಯಾರೇ ಗೆಲ್ಲಲಿ ಸಂತೋಷ ಪಡುತ್ತೇನೆ, ನಾನು ಗೆದ್ದರೆ ಅಕ್ಕ ಸಂತೋಷ ಪಡುತ್ತಾಳೊ ಇಲ್ಲವೊ ಗೊತ್ತಿಲ್ಲ. ನಾನಂತೂ ಸಂತೋಷ ಪಡುತ್ತೀನಿ ಎನ್ನುತ್ತಿದ್ದಾರೆ.

ಇದನ್ನು ಓದಿ: Farmers Protest: ದೆಹಲಿ ರೈತ ಹೋರಾಟಕ್ಕೆ ನನ್ನ ಬೆಂಬಲವಿದೆ; ಚಿಪ್ಕೋ ಚಳುವಳಿ ನಾಯಕ ಸುಂದರ್​ಲಾಲ್​ ಬಹುಗುಣ ಘೋಷಣೆ

ಈ ಮಧ್ಯೆ ಹನುಮಂತೆಮ್ಮ ಸಹ ಕಳೆದ ಬಾರಿ ನಾನು ಆಯ್ಕೆಯಾಗಿ ವಾರ್ಡಿನ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈ ಬಾರಿಯೂ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸ್ಪರ್ಧಿಸಿದ್ದೇನೆ. ಚುನಾವಣೆಯಲ್ಲಿ ಗೆಲುವು ಏನಾಗುತ್ತೊ ಗೊತ್ತಿಲ್ಲ. ನಾನು ಗೆಲ್ಲುತ್ತೀನಿ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ರಾಯಚೂರು ತಾಲೂಕಿನಲ್ಲಿ ಮೊದಲು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಅಖಾಡ ಸಿದ್ದವಾಗಿದೆ. ಡಿಸೆಂಬರ್ 7 ರಿಂದ 11 ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಡಿಸೆಂಬರ್ 14 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿತ್ತು. ಸ್ಪರ್ಧಿಸಲೇಬೇಕು ಎಂದು ಪಟ್ಟು ಹಿಡಿದಿರುವ ಸಹೋದರಿಯರಿಬ್ಬರು ನಾಮಪತ್ರ ಹಿಂಪಡೆದಿಲ್ಲ. ಡಿಸೆಂಬರ್ 22 ರಂದು ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಅಕ್ಕ ಗೆಲ್ಲುತ್ತಾರೊ, ತಂಗಿ ಗೆಲ್ಲುತ್ತಾರೋ ಕಾದು ನೋಡಬೇಕು.
Published by:HR Ramesh
First published: