ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿ ಜೆಡಿಎಸ್ ಪಾದಯಾತ್ರೆ

ಶಿರಾ ಮದಲೂರು ಕೆರೆ ರಾಜಕೀಯ ಕೇಂದ್ರ ಬಿಂದುವಾಗಿದ್ದು, ಕೆರೆಯೊಂದು ರಾಜಕೀಯವಾಗಿ ಬಳಕೆಯಾಗಿತ್ತಿದೆ. ಕಾನೂನಾತ್ಮಕ ವಾಗಿ ಕಾವೇರಿ ಬೇಸಿನ್ ನಿಂದ ಕೃಷ್ಣ ಬೇಸಿನ್ ನೀರು ಹರಿಸುವ ವಿಚಾರ ತೊಡಕಾಗಿದ್ದು ಈ ವಿಚಾರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ರೀತಿ ಬಗೆ ಹರಿಸ್ತಾರೆ ಎಂದು ಕಾದು ನೋಡಬೇಕಿದೆ.

ಜೆಡಿಎಸ್ ಕಾರ್ಯಕರ್ತರ ಪಾದಯಾತ್ರೆ

ಜೆಡಿಎಸ್ ಕಾರ್ಯಕರ್ತರ ಪಾದಯಾತ್ರೆ

  • Share this:
ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆ ಇವತ್ತು ಮತ್ತೊಂದು ಹೈಡ್ರಾಮಕ್ಕೆ ಸಾಕ್ಷಿಯಾಯ್ತು. ಮದಲೂರು ಕೆರೆಯ ಏರಿ ಮೇಲಿಂದಲೇ ಪಾದಯಾತ್ರೆ ಆರಂಭಿಸಿದ ಜೆಡಿಎಸ್ ಕಾರ್ಯಕರ್ತರು ಶಿರಾ ತಾಲೂಕು ಕಚೇರಿವರೆಗೂ ಪಾದಯಾತ್ರೆ ಮಾಡಿದ್ರು. ಮದಲೂರು ಕೆರೆಗೆ ನೀರು ಬಿಡೋದಕ್ಕೆ ಸಾಧ್ಯವೇ ಇಲ್ಲ ಎಂದು ಉಸ್ತುವಾರಿ ಸಚಿವ ಮಾಧಯಸ್ವಾಮಿ ಹೇಳ್ತಾಇದ್ರೂ ಇಲ್ಲ ನಮಗೆ ನೀರು ಬೇಕೆ ಬೇಕು ಅಂತ ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆ ಮಾಡಿದರು.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಕೆರೆ ಮೊದಲಿಂದಲೂ ಶಿರಾ ರಾಜಕೀಯದ ಕೇಂದ್ರ ಬಿಂದು, ಅದರಲ್ಲೂ ಕಳೆದ ಉಪಚುನಾವಣಾ ಸಮಯದಲ್ಲಂಥೂ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಬಹಳ ಮುಂಚೂಣೆಯಲ್ಲಿತ್ತಷ್ಟೇ. ಅಲ್ಲದೇ ಯಡಿಯೂರಪ್ಪ ಸರ್ಕಾರ ಅಲೋಕೇಷನ್ ಇಲ್ಲದೇ ನೀರು ಹರಿಸಿ ಉಪ ಚುನಾವಣಾ ಸಮರದಲ್ಲಿ ಭರ್ಜರಿ ಜಯಭೇರಿ ಭಾರಿಸಿತ್ತು. ಮೊದಲ ಭಾರಿಗೆ ಶಿರಾದಲ್ಲಿ ಬಿಜೆಪಿ ಖಾತೆ ತೆರೆದಿತ್ತು.

ಸದ್ಯ ಚುನಾವಣೆ ಮುಗಿದು 10 ತಿಂಗಳೂ ಕಳೆಯುತ್ತಿದೆ. ಮದಲೂರು ಕೆರೆ ಬರಿದಾಗಿದೆ. ಈಗ ಮತ್ತೆ ಮದಲೂರು ಕೆರೆ ರಾಜಕೀಯ ಪಕ್ಷಗಳ ಕೇಂದ್ರ ಬಿಂದುವಾಗಿದೆ. ಅಷ್ಟೇ ಅಲ್ಲ ಮದಲೂರು ಕೆರೆಗೆ ನೀರು ಹರಿಸಿ ಎಂದು ಮೂರು ಪಕ್ಷಗಳ ನಾಯಕರು ಜಿಲ್ಲಾಧಿಕಾರಿಗಳು, ಜಿಲ್ಲಾ ಸಚಿವರ ಬೆನ್ನು ಬಿದ್ದಿದ್ದಾರೆ. ಸದ್ಯ ಇಂದು ಜೆಡಿಎಸ್ ಪಕ್ಷದ ಶಿರಾ ತಾಲೂಕು ಘಟಕದ ವತಿಯಿಂದ ಹಾಗೂ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸುಮಾರು 700 ಕ್ಕೂ ಹೆಚ್ಚು ಕಾರ್ಯಕರ್ತರು ಪಾದಯಾತ್ರೆ ನಡೆಸಿ ಶಿರಾ ತಹಸೀಲ್ದಾರ್ ಮಮತಾ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದರು. ಯಾವುದೇ ಪಕ್ಷ ರಾಜಕೀಯವಾಗಿ ನೀರು ಹರಿಸಲು ಮುಂದಾದರೂ ನಾವು ಅವರಿಗೆ ಬೆಂಬಲ ಕೊಡ್ತೀವಿ. ನಮ್ಮದು ರೈತರ ಪರವಾದ ಪಕ್ಷ. ಮದಲೂರು ಕೆರೆ ನೀರು ಹರಿಸದಿದ್ರೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡ್ರು, ರೇವಣ್ಣನವರು ಸಹ ಬಂದು ಪ್ರತಿಭಟನೆ ಮಾಡ್ತಾರೆ ಎಂದು ಎಚ್ಚರಿಸಿದ್ರು ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ.

ಇನ್ನೂ ಈ ಬಗ್ಗೆ ಮಾತನಾಡಿದ ಜೆಡಿಎಸ್ ಯುವ ಮುಖಂಡ ವೀರೇಂದ್ರ ಇಂದಿನ ಪ್ರತಿಭಟನೆಯನ್ನು ಮದಲೂರು ಕೆರೆ ತುಂಬಿಸಲೋವರೆಗೆ ನಿಲ್ಲಿಸೋದಿಲ್ಲ, ನಾವು ನಿದ್ರೆ ಕೂಡ ಮಾಡಲ್ಲ. ಈ ಭಾಗದ ರೈತರಿಗೆ ಅನ್ಯಾಯವಾಗಲೂ ಬಿಡಲ್ಲಾ. ರಕ್ತ ಹರಿಸಿಯಾದ್ರು ನಾವು ಮದಲೂರು ಕೆರೆ ನೀರು ತಂದೆ ತರ್ತೀವಿ ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ: ಕೊರೋನಾ ಪಾಸಿಟಿವಿಟಿ ದರ ಶೇ.2 ದಾಟಿದರೆ ಬೆಂಗಳೂರಲ್ಲಿ ಕಠಿಣ ನಿಯಮ ಜಾರಿ!

ಒಟ್ಟಾರೆ ಶಿರಾ ಮದಲೂರು ಕೆರೆ ರಾಜಕೀಯ ಕೇಂದ್ರ ಬಿಂದುವಾಗಿದ್ದು, ಕೆರೆಯೊಂದು ರಾಜಕೀಯವಾಗಿ ಬಳಕೆಯಾಗಿತ್ತಿದೆ. ಕಾನೂನಾತ್ಮಕ ವಾಗಿ ಕಾವೇರಿ ಬೇಸಿನ್ ನಿಂದ ಕೃಷ್ಣ ಬೇಸಿನ್ ನೀರು ಹರಿಸುವ ವಿಚಾರ ತೊಡಕಾಗಿದ್ದು ಈ ವಿಚಾರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ರೀತಿ ಬಗೆ ಹರಿಸ್ತಾರೆ ಎಂದು ಕಾದು ನೋಡಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಹಾಗೂ ಸಾಧ್ಯವಾದಷ್ಟು ಗುಂಪು ಗೂಡುವುದನ್ನು ನಿಯಂತ್ರಿಸುವ ಮೂಲಕ ಕೊರೋನಾ ತಡೆಗಟ್ಟಬೇಕಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕಿದೆ.
Published by:HR Ramesh
First published: