ಬೆಂಗಳೂರು ಗ್ರಾಮಾಂತರದಲ್ಲಿ ನಾಳೆ ತೆರೆಯಲಿವೆ ಚಿತ್ರಮಂದಿರಗಳು..!

ಸಾಕಷ್ಟು ಸಮಸ್ಯೆಗಳ ನಡುವೆ ಬೆಂಗಳೂರು ಗ್ರಾಮಾಂತರದಲ್ಲಿರುವ ಚಿತ್ರಮಂದಿರಗಳು ಬಾಗಿಲು ತರೆಯುತ್ತಿವೆ. ಲಾಕ್​ಡೌನ್ ಆದ ಮೇಲೆ ಥಿಯೇಟರ್​ಗಳಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳು ಕೆಲಸ ಇಲ್ಲದೆ ಬೇರೆ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಚಿತ್ರಮಂದಿರಗಳಲ್ಲಿ ಕೆಲಸಗಾರರ ಸಮಸ್ಯೆ ಎದುರಾಗಿದೆ.

news18-kannada
Updated:October 15, 2020, 4:37 PM IST
ಬೆಂಗಳೂರು ಗ್ರಾಮಾಂತರದಲ್ಲಿ ನಾಳೆ ತೆರೆಯಲಿವೆ ಚಿತ್ರಮಂದಿರಗಳು..!
ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್​ ಚಿತ್ರಮಂದಿರ
  • Share this:
ಕಳೆದ ಏಳು ತಿಂಗಳಿಂದ‌ ಚಿತ್ರ ಮಂದಿರಗಳನ್ನು ತೆರೆಯದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರಮಂದಿರಗಳ ಮಾಲೀಕರು ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಥಿಯೇಟರ್​ಗಳನ್ನು ತೆರೆಯಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಸ್ವಚ್ಚತಾ ಕಾರ್ಯಗಳು  ಮುಂದುವರೆದಿದ್ದು, ಈ ವಿಷಯ ಸಿನಿಪ್ರಿಯರಿಗೂ ಖುಷಿ ನೀಡಿದೆ.  ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವವರೇ ಹೆಚ್ಚು. ಹೀಗಿರುವಾಗ ಮತ್ತೆ ರಿಲೀಸ್​ ಆಗಲಿರುವ ಕನ್ನಡ ಸಿನಿಮಾಗಳನ್ನು ನೋಡಲು ಎಷ್ಟರ ಮಟ್ಟಿಗೆ ಜನ ಬರುತ್ತಾರೆ ಅನ್ನೋದು ಈಗಿರುವ ಪ್ರಶ್ನೆ. ಜಿಲ್ಲೆಯಲ್ಲಿ ಒಟ್ಟು 14 ಚಿತ್ರಮಂದಿರಗಳಿದ್ದು, ಅದರಲ್ಲಿ 5 ಥಿಯೇಟರ್​ಗಳು ದೊಡ್ಡಬಳ್ಳಾಪುರದಲ್ಲಿದೆ.  ಉಳಿದಂತೆ  ದೇವಹಳ್ಳಿಯಲ್ಲಿ 3, ನೆಲಮಂಗಲದಲ್ಲಿ 3 ಹಾಗೂ ಹೊಸಕೋಟೆಯಲ್ಲಿ 3 ಥಿಯೇಟರ್​ಗಳಿವೆ. ಮುಂಜಾಗ್ರತಾ ಕ್ರಮಗಳ ಜೊತೆಗೆ ಕೇಂದ್ರ ಸರಕಾರದ ಮಾರ್ಗ ಸೂಚನೆಯಂತೆ ಚಿತ್ರಮಂದಿರಗಳನ್ನು ಸಿದ್ದಪಡಿಸಲು ಮಾಲೀಕರು ಮುಂದಾಗಿದ್ದಾರೆ.

ಇಂದು ರಾಜ್ಯದ ಹಲವೆಡೆ ಚಿತ್ರಮಂದಿರಗಳು ಬಾಗಿಲು ತೆರೆದಿದ್ದು, ಸಿನಿಮಾ ಪ್ರದರ್ಶನ ಆರಂಭಿಸಿವೆ. ಆದರೆ ಊಹಿಸಿದಷ್ಟು ಜನ ಮಾತ್ರ ಥಿಯೇಟರ್​ ಕಡೆ ಬರುತ್ತಿಲ್ಲ. ಇದರಿಂದಾಗಿ ಕೆಲವು ಮಲ್ಪಿಪ್ಲೆಕ್ಸ್​ಗಳೂ ಸಹ ಆಯೋಜಿಸಿದ್ದ ಸಿನಿಮಾ ಪ್ರದರ್ಶನವನ್ನು ಕ್ಯಾನ್ಸಲ್​ ಮಾಡಿವೆ. ಇದರ ನಡುವೆ ಜಿಲ್ಲೆಗಳಲ್ಲಿರುವ ಚಿತ್ರಮಂದಿರಗಳ ಪರಿಸ್ಥಿತಿ ಹೇಗಿರಲಿದೆ ಅನ್ನೋ ಚಿತ್ರಣ ಇನ್ನೂ ಸಿಕ್ಕಿಲ್ಲ.

After 7 months theaters reopened and not getting good response from movie lovers, Theatre Reopening Guidelines: In Kannada Film Industry Only Half of the theater will open from Friday,
ಸಾಂದರ್ಭಿಕ ಚಿತ್ರ


ಇನ್ನು ಸಾಕಷ್ಟು ಸಮಸ್ಯೆಗಳ ನಡುವೆ ಬೆಂಗಳೂರು ಗ್ರಾಮಾಂತರದಲ್ಲಿರುವ ಚಿತ್ರಮಂದಿರಗಳು ಬಾಗಿಲು ತರೆಯುತ್ತಿವೆ. ಲಾಕ್​ಡೌನ್ ಆದ ಮೇಲೆ ಥಿಯೇಟರ್​ಗಳಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳು ಕೆಲಸ ಇಲ್ಲದೆ ಬೇರೆ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಚಿತ್ರಮಂದಿರಗಳಲ್ಲಿ ಕೆಲಸಗಾರರ ಸಮಸ್ಯೆ ಎದುರಾಗಿದೆ.

Shivarjuna Kannada Movie Re releasing on October 16 in 100 theaters,
ಶಿವಾರ್ಜುನ ಸಿನಿಮಾದ  ಪೋಸ್ಟರ್​


ಹೀಗಿರುವಾಗ, ಸಿನಿಮಾ ನೋಡಲು ಪ್ರೇಕ್ಷಕರಿಲ್ಲದಿದ್ದರೆ ಅವರಿಗೆ ಸಂಬಳ ಕೊಡಲು ಮಾಲೀಕರಿಗೆ ಕಷ್ಟವಾಗಬಹುದು. ಈಗಾಗಲೇ ಥಿಯೇಟರ್​ಗಳನ್ನು ಸ್ಯಾನಿಟೈಸ್ ಮಾಡಿಸಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. 800 ಸೀಟ್​ಗಳ ಪೈಕಿ 400 ಸೀಟ್ ವ್ಯವಸ್ಥೆ ಮಾಡಿದ್ದೇವೆ. ನಾವು ಏನೇ ಪ್ರಯತ್ನ ಮಾಡಿದರೂ ಜನರು ಸಿನಿಮಾ ವೀಕ್ಷಣೆ ಮಾಡಲು ಬರದಿದ್ದರೆ ನಮ್ಮ ಎಲ್ಲ ಪ್ರಯತ್ನಗಳು ವ್ಯರ್ಥ. ಜನರು ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು ಎನ್ನುತ್ತಾರೆ ಚಿತ್ರಮಂದಿರಗಳ ಮಾಲೀಕರು.

ಇದನ್ನೂ ಓದಿ: ಅಧೀರನ ಪಾತ್ರಕ್ಕಾಗಿ ತಯಾರಿ ನಡೆಸುತ್ತಿರುವ ಸಂಜಯ್​ ದತ್: ಇಲ್ಲಿವೆ ಲೆಟೆಸ್ಟ್ ಫೋಟೋ​..!ಇನ್ನು ಸಹ ಕೊರೋನಾ ಭೀತಿ ಕಡಿಮೆಯಾಗಿಲ್ಲ. ಹೀಗಿರುವಾಗ ಥಿಯೇಟರ್​ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಹೇಗೆ ಅನುಸರಿಸುತ್ತಾರೆ ಎಂದು ಕಾದು ನೋಡಿ ಸಿನಿಮಾ ವೀಕ್ಷಣೆ ಮಾಡಲು ಮುಂದಾಗುತ್ತೇವೆ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು.
Published by: Anitha E
First published: October 15, 2020, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading