ಬಂದೇ ನವಾಜ್ ಉರುಸ್ ಮೇಲೆ ಕೊರೋನಾ ಕರಿನೆರಳು ; ದರ್ಗಾದ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನ
ಸಾರ್ವಜನಿಕ ಉದ್ಯಾನವನದಿಂದ ನಡೆಯುತ್ತಿದ್ದ ಮೆರವಣಿಗೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಭಾಗಿಯಾಗುತ್ತಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಸಂದಲ್ ಮೆರವಣಿಗೆ ನಡೆಸದಿರಲು ತೀರ್ಮಾನಿಸಲಾಗಿದೆ.
news18-kannada Updated:July 5, 2020, 4:36 PM IST

ಖ್ವಾಜಾ ಬಂದೇ ನವಾಜ್ ದರ್ಗಾ
- News18 Kannada
- Last Updated: July 5, 2020, 4:36 PM IST
ಕಲಬುರ್ಗಿ(ಜುಲೈ. 05): ಕಲಬುರ್ಗಿಯ ಭಾವೈಕ್ಯತೆಯ ಕೇಂದ್ರ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಉರುಸ್ ಸಂಭ್ರಮದ ಮೇಲೆ ಕೊರೋನಾ ಕಾರ್ಮೋಡ ಕವಿದಿದೆ. ಜುಲೈ 7, 8 ಹಾಗೂ 9 ರಂದು ಮೂರು ದಿನಗಲ ಕಾಲ ಖ್ವಾಜಾ ಬಂದೇನವಾಜ್ ರ ಉರುಸ್ ನೆರವೇರಲಿದೆ. ಆದರೆ ಪ್ರತಿ ಬಾರಿಯಂತೆ ಈ ಬಾರಿ ಅದ್ಧೂರಿಯಾಗಿ ಆಚರಿಸುವಂತಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಉರುಸ್ ಸರಳವಾಗಿ ಆಚರಿಸಲು ದರ್ಗಾದ ಆಡಳಿತ ಮಂಡಳಿ ತೀರ್ಮಾನಿಸಿದೆ.
ಈ ಕುರಿತು ಮಾಹಿತಿ ನೀಡಿರುವ ದರ್ಗಾದ ಪೀಠಾಧಿಪತಿ ಸೈಯದ್ ಖುಸ್ರೂ ಹುಸ್ಸೇನಿ, ಪ್ರತಿ ಬಾರಿಯಂತೆ ಈ ಬಾರಿ ಸಂದಲ್ ಮೆರವಣಿಗೆ ನಡೆಸುವುದಿಲ್ಲ ಎಂದಿದ್ದಾರೆ. ಸಾರ್ವಜನಿಕ ಉದ್ಯಾನವನದಿಂದ ನಡೆಯುತ್ತಿದ್ದ ಮೆರವಣಿಗೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಭಾಗಿಯಾಗುತ್ತಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಸಂದಲ್ ಮೆರವಣಿಗೆ ನಡೆಸದಿರಲು ತೀರ್ಮಾನಿಸಲಾಗಿದೆ. ದರ್ಗಾದ ಆವರಣದಲ್ಲಿಯೇ ಧಾರ್ಮಿಕ ವಿಧಿ-ವಿಧಾನ ಪೂರೈಸಲು ತೀರ್ಮಾನಿಸಲಾಗಿದೆ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಿಂದಲೇ ಉರುಸ್ ಆಚರಿಸಬೇಕು. ಅಲ್ಲಿಂದಲೇ ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಬೇಕು. ಬಂದೇ ನವಾಜ್ ಎಲ್ಲರ ಮನದಿಂಗಿತಗಳನ್ನು ಪೂರೈಸಲಿ. ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಸೈಯದ್ ಖುಸ್ರೂ ಹುಸೇನಿ ಪ್ರಾರ್ಥಿಸಿದ್ದಾರೆ.
ಈ ಬಾರಿ ಖಾಜಾ ಬಜಾರ್ ವಸ್ತು ಪ್ರದರ್ಶನವೂ ರದ್ದುಗೊಳಿಸಲಾಗಿದೆ. ಉರುಸ್ ಮುನ್ನಾ ದಿನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತಿತ್ತು. ಎರಡನೆಯ ದಿನ ಸಾರ್ವಜನಿಕ ಉದ್ಯಾನವನದಿಂದ ಗಂಧದ(ಸಂದಲ್) ಮೆರವಣಿಗೆ ನಡೆಸಲಾಗುತ್ತಿತ್ತು. ಮೂರನೆಯ ದಿನ ಚಿರಾಗ್ ದೀಪ ಹಚ್ಚುವ ಸಂಪ್ರದಾಯ ನೆರವೇರಿಸಲಾಗುತ್ತಿತ್ತು. ಇದೇ ವೇಳೆ ದರ್ಗಾದ ಆವರಣದಲ್ಲಿ ಖವ್ವಾಲಿ ಕಾರ್ಯಕ್ರಮವೂ ನಡೆಯುತ್ತಿತ್ತು. ಆದರೆ ಕೊರೋನಾ ಇದೆಲ್ಲದರ ಮೇಲೂ ಪರಿಣಾಮ ಬೀರಿದೆ. ವಸ್ತು ಪ್ರದರ್ಶನ ಮತ್ತು ಮಾರಾಟ ರದ್ದುಗೊಳಿಸಿರುವುದರಿಂದಾಗಿ ಮಳಿಗೆಗಳ ಹರಾಜು ಪ್ರಕ್ರಿಯೆ ಸಹ ಕೈಬಿಡಲಾಗಿದೆ.
ಉರುಸ್ ಅಂಗವಾಗಿ ಪ್ರತಿ ವರ್ಷ ನಡೆಯುತ್ತಿದ್ದ ಅಖಿಲ ಭಾರತ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳೆ ಒಂದು ತಿಂಗಳ ಕಾಲ ನಡೆಯುತ್ತಿತ್ತು. ಉರುಸ್ ಹಿನ್ನೆಲೆಯಲ್ಲಿ ನಾಳೆ ಸಂಜೆ 4 ಗಂಟೆಯಿಂದ ಜುಲೈ 10 ಸಂಜೆ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ : ಸ್ಮಾರಕಗಳು ಹಾಗೂ ಮ್ಯೂಸಿಯಂಗಳ ಪ್ರವೇಶಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಭಕ್ತರಿಗೆ ಅನುಕೂಲವಾಗಲೆಂದು ಆನ್ ಲೈನ್ ನಲ್ಲಿಯೇ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಧಾರ್ಮಿಕ ವಿಧಿ-ವಿಧಾನ ಪೂರೈಸುವುದನ್ನು ಆನ್ ಲೈನ್ ನಲ್ಲಿಯೇ ನೋಡಬಹುದಾಗಿದೆ. ಇದಕ್ಕೆ ಸಹಕರಿಸುವಂತೆ ದರ್ಗಾದ ಪೀಠಾಧಿಪತಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಕೊರೋನಾದಿಂದಾಗಿ ಉರುಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಗದೇ ಇರುವುದಕ್ಕೆ ಭಕ್ತರಿಗೆ ತೀವ್ರ ನಿರಾಸೆಯಾಗಿದೆ. ಅನಿವಾರ್ಯವಾಗಿ ತಾವಿದ್ದಲ್ಲಿಯೇ ಆನ್ ಲೈನ್ ನಲ್ಲಿ ಉರುಸ್ ನೋಡಿ, ಪ್ರಾರ್ಥಿಸುವಂತಾಗಿದೆ. -
ಈ ಕುರಿತು ಮಾಹಿತಿ ನೀಡಿರುವ ದರ್ಗಾದ ಪೀಠಾಧಿಪತಿ ಸೈಯದ್ ಖುಸ್ರೂ ಹುಸ್ಸೇನಿ, ಪ್ರತಿ ಬಾರಿಯಂತೆ ಈ ಬಾರಿ ಸಂದಲ್ ಮೆರವಣಿಗೆ ನಡೆಸುವುದಿಲ್ಲ ಎಂದಿದ್ದಾರೆ. ಸಾರ್ವಜನಿಕ ಉದ್ಯಾನವನದಿಂದ ನಡೆಯುತ್ತಿದ್ದ ಮೆರವಣಿಗೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಭಾಗಿಯಾಗುತ್ತಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಸಂದಲ್ ಮೆರವಣಿಗೆ ನಡೆಸದಿರಲು ತೀರ್ಮಾನಿಸಲಾಗಿದೆ.