HOME » NEWS » District » SILVER CHARIOT WILL READY FOR MALE MAHADESHWARA TEMPLE RHHSN NCHM

ಮಲೈ ಮಹದೇಶ್ವರನಿಗೆ ತಯಾರಾಗಲಿದೆ ಬೆಳ್ಳಿ ತೇರು: ಇದಕ್ಕೆ ಬೇಕು 450 ಕೆ.ಜಿ.ಶುದ್ಧ ಬೆಳ್ಳಿ!

ಮುಖ್ಯಮಂತ್ರಿಯಾಗಿದ್ದ ವೇಳೆ 2016 ರಲ್ಲಿ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ್ದರು. ಸಭೆಯಲ್ಲಿ ಬೆಳ್ಳಿ ರಥ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪವಾದಾಗ ತಮಗೆ  ಬೆಳ್ಳಿ ರೂಪದಲ್ಲಿ ಬಂದಿರುವ ಉಡುಗೊರೆಗಗಳನ್ನು ಮಹದೇಶ್ವರನ ಬೆಳ್ಳಿ ರಥ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿದ್ದರು.

news18-kannada
Updated:December 3, 2020, 6:13 PM IST
ಮಲೈ ಮಹದೇಶ್ವರನಿಗೆ ತಯಾರಾಗಲಿದೆ ಬೆಳ್ಳಿ ತೇರು: ಇದಕ್ಕೆ ಬೇಕು 450 ಕೆ.ಜಿ.ಶುದ್ಧ ಬೆಳ್ಳಿ!
ಟೀಕ್ ಮರದಲ್ಲಿ  ಸಿದ್ಧಪಡಿಸಲಾಗಿರುವ ರಥ.
  • Share this:
ಚಾಮರಾಜನಗರ ( ಡಿಸೆಂಬರ್ 03) ಮಹದೇಶ್ವರನಿಗೆ ಬೆಳ್ಳಿ ರಥ ನಿರ್ಮಾಣ ಮಾಡಲು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ  ಅನುಮೋದನೆ‌ ನೀಡಿದ್ದು,  ಶೀಘ್ರದಲ್ಲೇ  ನಿರ್ಮಾಣ‌ ಕಾರ್ಯ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈಗಾಗಲೇ  ಟೀಕ್ ಮರದಲ್ಲಿ  ತೇರು  ಸಿದ್ಧಪಡಿಸಲಾಗಿದ್ದು, ಇದಕ್ಕೆ ಬೆಳ್ಳಿ ಕವಚ ಹಾಕಲಾಗುವುದು. ಇದಕ್ಕೆ ಸುಮಾರು 450 ಕೆ.ಜಿ. ಶುದ್ಧ ಬೆಳ್ಳಿಯ  ಅವಶ್ಯಕತೆ ಇದೆ.

17 ಅಡಿ ಎತ್ತರ ಇರಲಿರುವ ಈ ಬೆಳ್ಳಿ ರಥಕ್ಕೆ ಭಕ್ತಾದಿಗಳು ಬೆಳ್ಳಿ ಅಥವಾ ಹಣ ದಾನ ನೀಡಬಹುದಾಗಿದ್ದು, ಶುದ್ಧ ಬೆಳ್ಳಿ ಗಟ್ಟಿಯನ್ನು ದೇವಾಲಯದ ಪಾರುಪತ್ತೇಗಾರರಿಗೆ ನೀಡಿ ರಸೀದಿ ಪಡೆಯಬಹುದು. ಭಕ್ತಾದಿಗಳು ತಮ್ಮಲ್ಲಿ ಅನುಪಯುಕ್ತ ಬೆಳ್ಳಿ ಇದ್ದಲ್ಲಿ ಅದನ್ನು ನೇರವಾಗಿ ದೇವಾಲಯದ ಪಾರುಪತ್ತೇಗಾರರಿಗೆ ನೀಡಿ ತೂಕ ಹಾಕಿಸಿ ರಸೀದಿ ಪಡೆಯಬಹುದು. ಇದಲ್ಲದೆ mmhillstemple.com ವೆಬ್ ಸೈಟ್ ಗೆ ಲಾಗಿನ್ ಆಗಿ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ಆನ್‌ಲೈನ್ ರಸೀದಿ ಪಡೆಯಬಹುದು.

ಈಗಾಗಲೇ ಬೆಂಗಳೂರಿನ ಲಕ್ಷ್ಮಿಪತಿ  ಎಂಬ ಭಕ್ತರು ಡಿಸೆಂಬರ್ 2 ರಂದು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಬೆಳ್ಳಿ ರಥ ನಿರ್ಮಾಣಕ್ಕೆ 25 ಕೆ.ಜಿ. ಶುದ್ದ ಬೆಳ್ಳಿಗಟ್ಟಿಯನ್ನು ದಾನವಾಗಿ ನೀಡಿದ್ದಾರೆ. ರಥಕ್ಕೆ ಕುಸರಿ ಕೆಲಸದೊಂದಿಗೆ ಬೆಳ್ಳಿಯ ಹೊರಕವಚ ನಿರ್ಮಾಣಕ್ಕೆ  22 ರಿಂದ 24 ಲಕ್ಷ ರೂಪಾಯಿಗಳ ಮಜೂರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇಬ್ಬರು ದಾನಿಗಳು ಈ  ಮಜೂರಿ ವೆಚ್ಚವನ್ನು ತಾವೇ ಭರಿಸಲು ಮುಂದಾಗಿದ್ದಾರೆ. ಬೆಂಗಳೂರು ರಾಜಾಜಿನಗರದ ಸುಜಾತ ಸೋಮಶೇಖರ್ ದಂಪತಿ ಹಾಗು ತಮಿಳುನಾಡು ಕೊಯಮತ್ತೂರಿನ ಮೋಹನರಾಮ್ ಎಂಬುವರ ಮಜೂರಿ ವೆಚ್ಚವನ್ನು ಸಮನಾಗಿ ಭರಿಸಲಿದ್ದಾರೆ.

ಇದನ್ನು ಓದಿ: ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣ; ಶಂಕೆಯ ಮೇಲೆ ಫುಡ್ ಡೆಲಿವರಿ ಬಾಯ್ ಬಂಧನ

ನೇರವಾಗಿ‌‌ ಬೆಳ್ಳಿ ಅಥವಾ ನಗದು  ಸಂಗ್ರಹಿಸಲು‌ ಯಾರನ್ನೂ ಮಲೈ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಿಂದ  ನೇಮಕ ಮಾಡಿರುವುದಿಲ್ಲ. ದೇವಾಲಯದ ಪಾರುಪತ್ತೇಗಾರರು ದೇವಾಲಯದೊಳಗೆ ಸ್ವೀಕರಿಸಿ ಸ್ವೀಕೃತಿ ನೀಡುವುದನ್ನು ಹೊರತುಪಡಿಸಿ, ಹೊರ ಊರಿನಲ್ಲಾಗಲೀ ಮಹದೇಶ್ವರ ಬೆಟ್ಟದಲ್ಲಾಗಲೀ ಯಾರಾದರೂ ಬೆಳ್ಳಿ ತೇರಿಗೆ ದಾನ ನೀಡಲು ಹಣ ಅಥವಾ ಬೆಳ್ಳಿ ಕೇಳಿದಲ್ಲಿ ನೀಡಬಾರದುಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ. ಬೆಳ್ಳಿ ತೇರಿಗೆ ಬೆಳ್ಳಿ ಅಥವಾ ಹಣ ನೀಡುವವರು 2020 ರ ಡಿಸೆಂಬರ್ 31ರೊಳಗಾಗಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ವೇಳೆ 2016 ರಲ್ಲಿ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ್ದರು. ಸಭೆಯಲ್ಲಿ ಬೆಳ್ಳಿ ರಥ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪವಾದಾಗ ತಮಗೆ  ಬೆಳ್ಳಿ ರೂಪದಲ್ಲಿ ಬಂದಿರುವ ಉಡುಗೊರೆಗಗಳನ್ನು ಮಹದೇಶ್ವರನ ಬೆಳ್ಳಿ ರಥ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿದ್ದರು. ಇದೀಗ ಬೆಳ್ಳಿ ರಥ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವುದರಿಂದ ಸಿದ್ದರಾಮಯ್ಯ ಅವರು ಬೆಳ್ಳಿ ಪದಾರ್ಥಗಳನ್ನು ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.ವರದಿ; ಎಸ್.ಎಂ.ನಂದೀಶ್ ಚಾಮರಾಜನಗರ
Published by: HR Ramesh
First published: December 3, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories