• Home
  • »
  • News
  • »
  • district
  • »
  • ಚಿಕ್ಕಬಳ್ಳಾಪುರದಲ್ಲಿ ಬೀದಿಗೆ ಬಿದ್ದ 4 ಸಾವಿರಕ್ಕೂ ಹೆಚ್ಚು ಉರಿಕಾರ ಉದ್ಯಮಗಳು

ಚಿಕ್ಕಬಳ್ಳಾಪುರದಲ್ಲಿ ಬೀದಿಗೆ ಬಿದ್ದ 4 ಸಾವಿರಕ್ಕೂ ಹೆಚ್ಚು ಉರಿಕಾರ ಉದ್ಯಮಗಳು

ಉರಿಕಾರ ಉದ್ಯಮ

ಉರಿಕಾರ ಉದ್ಯಮ

ಕೊರೋನ ಹೊಡೆತಕ್ಕೆ ಸಿಲುಕಿ ನರಕಯಾತನೆ ಅನುಭವಿಸುತ್ತಿರುವ ರೇಷ್ಮೆ ಉದ್ಯಮದ ಬಗ್ಗೆ ಸರ್ಕಾರ ಅದೆಷ್ಟು ಕಾಳಜಿ ತೋರಿದರೂ ದೇಶಿ ಉತ್ಪನ್ನಗಳು ಮತ್ತು ಅದನ್ನೇ ನಂಬಿ ಬದುಕು ಕಟ್ಟಿಕಂಡಿದ್ದ ಅದೆಷ್ಟೋ ಒಳ ಉದ್ದಿಮೆಗಳು ನಲುಗಿ ಹೋಗಿ, ಸರ್ಕಾರದ ನಿರ್ಲಕ್ಷ್ಯಕ್ಕೂ ಗುರಿಯಾಗಿರುವುದು ದುರಂತವೇ ಸರಿ. 

ಮುಂದೆ ಓದಿ ...
  • Share this:

ಚಿಕ್ಕಬಳ್ಳಾಪುರ(ಆ. 29): ಬಯಲುಸೀಮೆ ಎಂದರೆ ಥಟ್ಟನೆ ನೆನಪಾಗೋದು ರಾಮನಗರ ಮತ್ತು ಚಿಕ್ಕಬಳ್ಳಾಪುರ. ಬಹುತೇಕ ಸಣ್ಣ ರೈತರು ಹಾಗೂ ಹೈನುಗಾರಿಕೆ, ಗುಡಿ ಕೈಗಾರಿಕೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಜನರು ಕೊರೋನ ಹೊಡತಕ್ಕೆ ನಲುಗಿ ಹೋಗಿ ಜೀವನ ಬೀದಿಗೆ ಬಿದ್ದು ಡೋಲಾಯಮಾನ ಪರಿಸ್ಥಿತಿಗೆ ತಲುಪಿದೆ. ಅದರಲ್ಲಿ ಉರಿಕಾರರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂದ್ರೆ ತಪ್ಪಾಗಲಾರದು. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕು ಒಂದರಲ್ಲೆ ಸುಮಾರು 4 ಸಾವಿರಕ್ಕೂ ಹೆಚ್ಚು ಉರಿಕಾರ ಉದ್ಯಮಗಳು ಇದ್ದು, ಅದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸುಮಾರು 30 ಸಾವಿರ ಉರಿಕಾರರ ಜೀವನ ಬೀದಿಗೆ ಬಂದಿದೆ. ಉರಿಕಾರರ ಜೀವನ ಅತಂತ್ರವಾಗಿದ್ದು, ಐದು ತಿಂಗಳಿಂದ ಕೆಲಸವೂ ಇಲ್ಲದೆ ಸಂಪಾದನೆಯೂ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಕನಿಷ್ಠ ವಾರಕ್ಕೆ 2-3 ಸಾವಿರ ಸಂಪಾದನೆ ಮಾಡಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಉರಿಕಾರರು ಸಾಲದ ಸುಳಿಗೆ ಸಿಲುಕಿದ್ದಾರೆ. ಸರ್ಕಾರದ ಕಣ್ಣಿಗೆ ಕಾಣದೇ ಇರುವ ಅಸಂಘಟಿತ ಉರಿಕಾರರ ಜೀವನ ದುಸ್ತರವಾಗಿದೆ.


ಏನಿದು ಉರಿಕಾರ ಉದ್ಯಮ?


ರೇಷ್ಮೆ ಬೆಳೆ, ಗೂಡು ಬೆಳೆಯುವ ರೈತರಿಗೆ ರೇಷ್ಮೆ ಬೆಳೆಗಾರರು; ಮಗ್ಗದಲ್ಲಿ ಕೆಲಸ ಮಾಡುವ ಜನರಿಗೆ ನೇಕಾರರು; ಹಾಗು ರೇಷ್ಮೆ ಬಿಚ್ಚುವ ಕೆಲಸಗಾರರಿಗೆ ಬಿಚ್ಚಣಿಕೆದಾರರು ಎನ್ನುತ್ತಾರೆ. ಆದರೆ ಇದರಲ್ಲಿ ಮುಖ್ಯ ಪಾತ್ರ ವಹಿಸುವವರು ಉರಿಕಾರರು. ಒಮ್ಮೆ ರೇಷ್ಮೆ ಮಾರುಕಟ್ಟೆಯಿಂದ ಬಿಚ್ಚಾಣಿಕೆ ಕೇಂದ್ರಕ್ಕೆ ಬರುವ ಗೂಡು ದಾರವಾಗಿ ಬದಲಾಗುವುದು ಇದೇ ಉರಿಕಾರ ಉದ್ಯಮಗಳಲ್ಲಿ. ಇದೇ ಉರಿಕಾರರಿಂದ ರೇಷ್ಮೆ ನೂಲು, ಬಣ್ಣ-ಬಣ್ಣದ ದಾರವಾಗಿ ಬದಲಾಗುವುದು. ರೇಷ್ಮೆ ಸೀರೆ ತೊಡಲು ಎಷ್ಟು ಸುಂದರವೋ ರೇಷ್ಮೆಯನ್ನ ನೂಲಾಗಿ, ದಾರವಾಗಿ ಬದಲಾಯಿಸುವ ಕಾಯಕ ಕಣ್ಣಿಗೆ ಕಾಣುವುದಿಲ್ಲ. ಈ ಉರಿಕಾರರಿಗೆ ಇದೇ ರೇಷ್ಮೆ ದಾರ ಉರುಳಾಗಿ ಪರಿಣಮಿಸಿದೆ.


ಇದನ್ನೂ ಓದಿ: ಮೊಮ್ಮಗನಿಗೆ ಮನಬಂದಂತೆ ಥಳಿಸಿದ ಅಜ್ಜಿ; ಬೆಂಗಳೂರಿನಲ್ಲಿ ಹೀನ ಕೃತ್ಯ


ಶಿಡ್ಲಘಟ್ಟದಲ್ಲಿ ಸುಮಾರು 1 ಸಾವಿರ ದೊಡ್ಡ, 1 ಸಾವಿರ ಮಧ್ಯಮ ಮತ್ತು 2 ಸಾವಿರದಷ್ಟು ಸಣ್ಣ-ಸಣ್ಣ ಗುಡಿ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು 30 ಸಾವಿರದಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಕೊರೋನ ಲಾಕ್​ಡೌನ್​ನಿಂದ ಸೀರೆ ವ್ಯಾಪಾರ ಆಗದೆ ಈ ಉರಿಕಾರ ಗುಡಿ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.


ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಾರ್ಮಿಕ ಭವನ ಕಾಮಗಾರಿ ವೀಕ್ಷಣೆ ಮಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

Published by:Vijayasarthy SN
First published: