• Home
  • »
  • News
  • »
  • district
  • »
  • Silk Market - ರಾಮನಗರ ರೇಷ್ಮೆ ಮಾರುಕಟ್ಟೆ ಡಿಡಿ ನಾಪತ್ತೆ ಪ್ರಕರಣ; ಗೂಡು ಮಾರಿದವರ ಕಣ್ಣೀರು

Silk Market - ರಾಮನಗರ ರೇಷ್ಮೆ ಮಾರುಕಟ್ಟೆ ಡಿಡಿ ನಾಪತ್ತೆ ಪ್ರಕರಣ; ಗೂಡು ಮಾರಿದವರ ಕಣ್ಣೀರು

ರಾಮನಗರದ ರೇಷ್ಮೆ ಮಾರುಕಟ್ಟೆ

ರಾಮನಗರದ ರೇಷ್ಮೆ ಮಾರುಕಟ್ಟೆ

ಕಳೆದ ವಾರ ನಾಪತ್ತೆಯಾಗಿದ್ದ ರಾಮನಗರ ಸಿಲ್ಕ್ ಮಾರ್ಕೆಟ್ ಉಪನಿರ್ದೇಶಕ ಮುನ್ಷಿ ಬಸಯ್ಯ ಇನ್ನೂ ಸಿಕ್ಕಿಲ್ಲ. ರೀಲರ್ಸ್​ಗಳು ತಾವು ಖರೀದಿಸಿದ ರೇಷ್ಮೆಗೂಡಿನ ಹಣವನ್ನು ಬಸಯ್ಯನವರ ಅಕೌಂಟ್​ಗೇ ಹಾಕುತ್ತಿದ್ದರು. ಈಗ ರೈತರು ಹಣ ಸಿಗದೇ ಪರದಾಡುತ್ತಿದ್ದಾರೆ.

  • Share this:

ರಾಮನಗರ: ರಾಮನಗರ ರೇಷ್ಮೆ ಮಾರ್ಕೆಟ್ ಡೆಪ್ಯೂಟಿ ಡೈರೆಕ್ಟರ್ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಕಳೆದ ವಾರ ನಾಪತ್ತೆಯಾಗಿದ್ದ ಮುನ್ಷಿ ಬಸಯ್ಯ ಬೆಂಗಳೂರಿನ ಮನೆಗೆ ಬಂದಿದ್ದರು ಎಂದು ಅವರ ಪುತ್ರ ತಿಳಿಸಿದ್ದಾರೆ. ಆದರೆ ಮತ್ತೆ ಕಾಣುತ್ತಿಲ್ಲ ಎಂದೂ ಸಹ ಹೇಳ್ತಿದ್ದಾರೆ. ಇತ್ತ ಮಾರ್ಕೆಟ್ ನಲ್ಲಿ ಹಣ ಪಡೆಯಬೇಕಾದ ರೈತರ ಪಟ್ಟಿ ಬೆಳೆಯುತ್ತಿದೆ. ರಾಮನಗರ ಸಿಲ್ಕ್ ಮಾರ್ಕೆಟ್​ನಲ್ಲಿ ರೈತರು – ರೀಲರ್ಸ್​ಗೆ ಮುನ್ಷಿ ಬಸಯ್ಯ ಕೊಂಡಿಯಾಗಿ ಕೆಲಸ ಮಾಡ್ತಿದ್ದರು. ಪ್ರತಿದಿನ 30-35 ಟನ್ ರೇಷ್ಮೆಗೂಡು ಬರುತ್ತಿತ್ತು. 1-1.5 ಕೋಟಿ ಹಣದ ವಹಿವಾಟು ನಡೆಯುತ್ತಿತ್ತು. ರೀಲರ್ಸ್ ಗಳು ಗೂಡು ಖರೀದಿಗೆ ಹಣವನ್ನ ಮಾರ್ಕೆಟ್​ನ ಉಪನಿರ್ದೇಶಕರಾಗಿದ್ದ ಮುನ್ಷಿ ಬಸಯ್ಯನವರ ಕೈಯಡಿಯಲ್ಲಿದ್ದ ಅಕೌಂಟ್​ಗೆ ಹಾಕುತ್ತಿದ್ದರು. ಇನ್ನು ಗೂಡು ಮಾರಾಟ ಮಾಡಿದ ನಂತರ ರೈತರಿಗೆ ಇದೇ ಮುನ್ಷಿ ಬಸಯ್ಯ ಅವರು ತಮ್ಮ ಅಕೌಂಟ್​ನಲ್ಲಿದ್ದ ಹಣವನ್ನ ವಿತರಣೆ ಮಾಡ್ತಿದ್ದರು. ಒಟ್ಟಾರೆ ಮಾರುಕಟ್ಟೆಯ ಸಂಪೂರ್ಣ ಅಧೀನ ಮುನ್ಷಿ ಬಸಯ್ಯರ ಕೈಯಲ್ಲಿತ್ತು. ಆದರೆ ಈಗ ಮೇಟಿಯೇ ರೈತರಿಗೆ-ರೀಲರ್ಸ್​ಗೆ ದೋಖ ಮಾಡಿರುವ ಆರೋಪ ಕೇಳಿಬಂದಿದೆ.


ಕಳೆದ ವಾರದಿಂದ ನಾಪತ್ತೆಯಾಗಿರುವ ಮುನ್ಷಿ ಬಸಯ್ಯ ಬೆಂಗಳೂರಿನ ಮನೆಗೆ ಬಂದಿದ್ದರು. ಅವರು ಎಲ್ಲಿದ್ದರೂ ಎಂದು ಹೇಳಲಿಲ್ಲ. ಆದರೆ ಈಗ ಮತ್ತೆ ನಾಪತ್ತೆಯಾಗಿದ್ದಾರೆಂದು ಮುನ್ಷಿ ಬಸಯ್ಯ ಪುತ್ರ ಧನ್ವಿ ದತ್ತ ರಾಮನಗರದ ನ್ಯೂಸ್ 18 ವರದಿಗಾರರ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Coronavirus | ಇಂದಿನಿಂದ ಮಹಾರಾಷ್ಟ್ರದಲ್ಲಿ ರಾತ್ರಿ 8ರಿಂದ ಬೆಳಗ್ಗೆ 7ರವರೆಗೆ ನೈಟ್ ಕರ್ಫ್ಯೂ ಜಾರಿ; ನಿಯಮ ಮೀರಿದರೆ ದಂಡ!


ಇದರ ಜೊತೆಗೆ ಮಾರುಕಟ್ಟೆಯ ಪ್ರಭಾರ ಅಧಿಕಾರಿ ಕೆ.ಟಿ.ವೆಂಕಟೇಶ್ ಸಹ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮುನ್ಷಿ ಬಸಯ್ಯ ವಿರುದ್ಧ FIR ದಾಖಲಾಗಿದೆ. ದೂರಿನ ಪ್ರತಿ ಸರ್ಕಾರಕ್ಕೂ ತಲುಪಿದೆ. FIR ನಲ್ಲಿ 569 ಜನ ರೈತರಿಗೆ 2.36 ಕೋಟಿಗೂ ಹೆಚ್ಚು ಹಣ ಸಂದಾಯವಾಗಬೇಕಿತ್ತು. ಅದರಲ್ಲಿ 1.5 ಕೋಟಿಗೂ ಹೆಚ್ಚು ಹಣಕ್ಕೆ ಮುನ್ಷಿ ಬಸಯ್ಯ ಜವಾಬ್ದಾರಿಯಾಗಿದ್ದಾರೆ. ಹಾಗಾಗಿ ಅವರನ್ನ ಪತ್ತೆ ಮಾಡಿ ತನಿಖೆ ನಡೆಸಬೇಕಿದೆ ಎಂದು ದಾಖಲಿಸಲಾಗಿದೆ. ಇನ್ನು ಅದಲ್ಲದೇ ದಿನೇದಿನೇ ರೈತರಿಗೆ ಹಣ ಕೊಡಬೇಕಿರುವ ಪಟ್ಟಿ ಬೆಳೆಯುತ್ತಿದೆ. ಈ ಬಗ್ಗೆ ಕೆ.ಟಿ. ವೆಂಕಟೇಶ್ ಮಾಹಿತಿ ಪ್ರಕಾರವಾಗಿ ಈವರೆಗೆ 445 ಜನ ರೈತರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 139 ಜನರಿಗೆ ಹಣ ನೀಡಿದ್ದೇವೆ, ಉಳಿದ 315 ಜನರಿಗೆ ಹಣ ಕೊಡಬೇಕಿದೆ. ಆದರೆ ದಿನೇದಿನೇ ರೈತರ ಪಟ್ಟಿ ಬೆಳೆಯುತ್ತಿದೆ ಮುಂದೆ ಇದು ಹೆಚ್ಚಾಗಬಹುದು ಎಂದಿದ್ದಾರೆ.


ಇದನ್ನೂ ಓದಿ: CD Case - ಇದೇನಾ ಜೇಬಿನಲ್ಲಿದ್ದ ಬಾಂಬ್, ನವರಂಗಿ ಆಟಗಳನ್ನು ಬಿಟ್ಟು ಆರೋಪಿ ಬಂಧಿಸಿ; ಕಾಂಗ್ರೆಸ್ ವ್ಯಂಗ್ಯ!


ಒಟ್ಟಾರೆಯಾಗಿ, ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಇಲಾಖೆಯ ಅಧಿಕಾರಿಗಳಿಂದ ಆಗಿರುವ ತಪ್ಪಿಗೆ ರೈತರು-ರೀಲರ್ಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮುನ್ಷಿ ಬಸಯ್ಯ ಜೊತೆಗೆ ಇನ್ನು ಕೆಲ ಅಧಿಕಾರಿಗಳ ಕೈವಾಡವೂ ಇದೇ ಎನ್ನಲಾಗುತ್ತಿದ್ದು, ತನಿಖೆಯ ನಂತರ ಸತ್ಯಾಂಶ ತಿಳಿಯಬೇಕಿದೆ. ಜೊತೆಗೆ ಬಸಯ್ಯನವರ ಕುಟುಂಬಸ್ಥರ ಹೇಳಿಕೆ ಸಹ ಅನುಮಾನ ಹುಟ್ಟಿಸುತ್ತಿದೆ.


ವರದಿ: ಎ.ಟಿ.ವೆಂಕಟೇಶ್

Published by:Vijayasarthy SN
First published: