ಬ್ಲೂ ಬೇಬಿ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಜೀವದಾನ ನೀಡಿದ ಸಿದ್ಧಾರ್ಥ ಆಸ್ಪತ್ರೆ

ಹುಟ್ಟಿನಿಂದ ಬ್ಲೂಬೇಬಿ ಸಿಂಡ್ರೋಮ್ (Blue Baby Syndrome)‌ ಕಾಯಿಲೆಗೆ ತುತ್ತಾಗಿದ್ದ ಬಾಲಕಿಗೆ ಸಿದ್ದಾರ್ಥ ಕಾಲೇಜಿನ ವೈದ್ಯರು ಮರು ಜೀವ ನೀಡಿದ್ದಾರೆ. 5 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿದ್ದು, ಬಾಲಕಿ ಸಂಪೂರ್ಣವಾಗಿ ಆಯೋಗ್ಯವಾಗಿದ್ದಾಳೆ.

ಬಾಲಕಿಯೊಂದಿಗೆ ಮಾಜಿ ಡಿಸಿಎಂ ಜಿ.ಪರಮೇಶ್ವರ್​

ಬಾಲಕಿಯೊಂದಿಗೆ ಮಾಜಿ ಡಿಸಿಎಂ ಜಿ.ಪರಮೇಶ್ವರ್​

  • Share this:
ತುಮಕೂರು : ಆ ಬಾಲಕಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ. ಬದುಕೋದೆ ಅನುಮಾನ ಅಂತಿದ್ದ ಬಾಲಕಿಗೆ ಈಗ 6 ವರ್ಷ ತುಂಬಿದೆ. ಬಾಲಕಿಯ ಹೃದಯದಲ್ಲಿ ರಕ್ತವನ್ನ ಶುದ್ದಿ ಮಾಡುವ ಕಾರ್ಯವೇ ನಡೆಯುತ್ತಿರಲಿಲ್ಲ. ಇದ್ರಿಂದ ಹುಟ್ಟಿನಿಂದಲೂ ಕೇವಲ ಶೇ.20 ರಷ್ಟು ಮಾತ್ರ ಸ್ಯಾಚ್ಯುಲೇಷನ್ ನಲ್ಲಿದ್ದ ಬಾಲಕಿಗೆ ಇಲ್ಲಿಯವರೆಗೂ ಸಾಮಾನ್ಯಳಂತೆ ನಡೆಯೋಕೆ ಆಗಿರ್ಲಿಲ್ಲ.  ಆದ್ರೀಗ ಬಾಲಕಿ ಎಲ್ಲರಂತೆ ನಡೆಯಬಲ್ಲಳು, ಓಡ ಬಲ್ಲಳು ಚೆನ್ನಾಗಿ ಉಸಿರಾಡಬಲ್ಲಳು.  ಶೇ.20 ರಷ್ಟಿದ್ದ ಸ್ಯಾಚ್ಯುಲೇಷನ್ ಈಗ 80,90ಕ್ಕೆ ಏರಿದೆ, ರಕ್ತವೂ ಶುದ್ದಿ ಆಗುತ್ತಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಬ್ಲೂ ಬೇಬಿ ಸಿಂಡ್ರೋಮ್ (Blue Baby Syndrome)‌ ಹೊಂದಿದ್ದ ಬಾಲಕಿಗೆ ಯಶಸ್ವಿಯಾಗಿ ಉಚಿತ ಹೃದಯ ಚಿಕಿತ್ಸೆ ನಡೆಸಲಾಗಿದೆ.  ಸಿದ್ದಾರ್ಥ ವೈದ್ಯಕೀಯ ಕಾಲೇಜು ವೈದ್ಯರ ತಂಡ ಈ ಸಾಧನೆ ಮಾಡಿದೆ. ಡಾ. ತಮೀಮ್‌ ಅಹಮದ್‌ ನೇತೃತ್ವದ ತಂಡ ಈ ಸಾಧನೆ ಮಾಡಿದೆ. ಬೆಂಗಳೂರು-ಮುಂಬೈನಂತಹ ಮೆಟ್ರೋ ಸಿಟಿಗಳಲ್ಲಿ ಮಾತ್ರ ನಡೆಯುತ್ತಿದ್ದ ಈ ಚಿಕಿತ್ಸೆ ಇದೇ ಮೊದಲ ಬಾರಿಗೆ ತುಮಕೂರು ನಗರದಲ್ಲಿ ಮಾಡಲಾಗಿದೆ. ತುಮಕೂರು ಮೂಲದ ಆರು ವರ್ಷದ ಬಾಲಕಿಗೆ ಈ ಚಿಕಿತ್ಸೆ ಮಾಡಲಾಗಿದೆ. ಹುಟ್ಟಿನಿಂದ ಬ್ಲೂಬೇಬಿ ಸಿಂಡ್ರೋಮ್‌ ಕಾಯಿಲೆಗೆ ತುತ್ತಾಗಿದ್ದ ಬಾಲಕಿಗೆ ಸಿದ್ದಾರ್ಥ ಕಾಲೇಜಿನ ವೈದ್ಯರು ಮರು ಜೀವ ನೀಡಿದ್ದಾರೆ. 5 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿದ್ದು, ಬಾಲಕಿ ಸಂಪೂರ್ಣವಾಗಿ ಆಯೋಗ್ಯವಾಗಿದ್ದಾಳೆ.

10 ತಜ್ಞ ವೈದ್ಯರ ತಂಡ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಹುಟ್ಟಿನಿಂದಲ್ಲೇ ಬಾಲಕಿಯ ಹೃದಯ ರಕ್ತವನ್ನು ಶುದ್ಧಿಕರಿಸಲು  ಅಶಕ್ತವಾಗಿತ್ತು. ಇದ್ರಿಂದ ಬಾಲಕಿಯ ಕೈ-ಕಾಲು ಬೆರಳು, ಕಣ್ಣಿನ ಭಾಗ, ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು, ಅಲ್ಲದೆ ಬಾಲಕಿ ಕೇವಲ 20 ಸ್ಯಾಚ್ಯೂರೇಷನ್ ಪ್ರಮಾಣ ಹೊಂದಿದ್ದಳು, ಈ ಅಪರೂಪದ ಕಾಯಿಲೆಗೆ ವೈದ್ಯಕೀಯ ಲೋಕದಲ್ಲಿ ಬ್ಲೂ ಬೇಬಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಿಂದ ಬಾಲಕಿ ನಡೆಯಲು ಸಾಧ್ಯವಾಗದೆ ಹಾಸಿಗೆ ಮೇಲೆ ಜೀವನ ದೂಡುವಂತಾಗಿತ್ತು. ಆದ್ರೀಗ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ವೈದ್ಯರ ಪ್ರಯತ್ನದಿಂದ ಬಾಲಕಿಗೆ ಸಹಜ ಬದುಕು ಲಭಿಸಿದೆ.

ಇದನ್ನೂ ಓದಿ: ಹಳೇಬೀಡು ಐತಿಹಾಸಿಕ ದೇವಾಲಯಕ್ಕಿಲ್ಲ ಭದ್ರತೆ; ಶುಲ್ಕ ಪಾವತಿಸಲು ಯೋಚಿಸುತ್ತಿರುವ ಪುರತಾತ್ವ ಇಲಾಖೆ

ವೈದ್ಯರ ಈ ಸಾಧನೆಯನ್ನು ಜಿ.ಪರಮೇಶ್ವರ್ ಶ್ಲಾಘೀಸಿದ್ದಾರೆ.. ಇನ್ನು ಸಿದ್ದಾರ್ಥ ಕಾಲೇಜಿನಲ್ಲಿ ಕಾರ್ಡಿಯಾಕ್ ಸೆಂಟರ್ ಪ್ರಾರಂಭಿಸಲಾಗಿದೆ. ತುಮಕೂರಿನಲ್ಲಿ ಮೊದಲ ಬಾರಿಗೆ ಇಂತಹ ವಿಶೇಷ  ಚಿಕಿತ್ಸೆ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೂ ಉನ್ನತ ವೈದ್ಯಕೀಯ ಸೌಲಭ್ಯವನ್ನು ಕಡಿಮೆ ದರದಲ್ಲಿ ನೀಡುವ ಉದ್ದೇಶವಿದೆ ಎಂಬ ಮಾತನ್ನು ವೈದ್ಯಕೀಯ ಕಾಲೇಜು ಮಂಡಳಿ ತಿಳಿಸಿದೆ.

ಈಗಾಗಲೇ ಕೊರೊನಾ ಮೂರನೇ ಅಲೆಯ ಸೂಚನೆ ಸಿಕ್ಕಿದೆ. ಮೂರನೇ ಅಲೆಯಲ್ಲಿ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡು ಜೀವಕ್ಕೆ ಕುತ್ತು ತರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೆ ತುಮಕೂರು ಸಿದ್ದಾರ್ಥ ವೈದ್ಯಕೀಯ ಕಾಲೇಜು ಹೃದಯ ಶಸ್ತ್ರಚಿಕಿತ್ಸ ವಿಭಾಗ ಪ್ರಾರಂಭಿಸಲಾಗಿದೆ. ಸೂಕ್ತ ಹಾಗೂ ಶೀಘ್ರ ಚಿಕಿತ್ಸೆ ನೀಡುವ ಧೇಯವನ್ನು ಜನರು ಸ್ವಾಗತಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: