ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಆತನ ಮಾತಿಗೆ ಕಿಮ್ಮತ್ತಿಲ್ಲ: Siddaramaiah ವಿವಾದಾತ್ಮಕ ಹೇಳಿಕೆ

ಭಯೋತ್ಪಾದನೆಗೆ (Terrorism) ಬಡ್ತಿ ನೀಡುವ ಪಕ್ಷ ಕಾಂಗ್ರೆಸ್ (Cngress) ಎಂಬ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು. ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಕಟೀಲ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ, ನಳೀನ್​ ಕುಮಾರ್​ ಕಟೀಲ್​

ಸಿದ್ದರಾಮಯ್ಯ, ನಳೀನ್​ ಕುಮಾರ್​ ಕಟೀಲ್​

  • Share this:
ಚಿತ್ರದುರ್ಗ: ಭಯೋತ್ಪಾದನೆಗೆ (Terrorism) ಬಡ್ತಿ ನೀಡುವ ಪಕ್ಷ ಕಾಂಗ್ರೆಸ್ (Cngress) ಎಂಬ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು. ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಕಟೀಲ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಲೇವಡಿ ಮಾಡಿದರು. ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ, ಬಿಜೆಪಿಯನ್ನು ಕಿತ್ತೋಗೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ನಾವು A ಟೀಂ ಅಲ್ಲ B ಟೀಂ ಕೂಡ ಅಲ್ಲ ಎಂಬ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮತ್ತೆ ಎಲ್ಲಾ ಕಡೆ ಯಾಕೆ ಅಭ್ಯರ್ಥಿ ಹಾಕಿಲ್ಲ. ಉಳಿದ ಕಡೆಗಳಲ್ಲಿ ಈಗ ಏನೂ ಮಾಡುತ್ತಾರೆ. ಪರಿಷತ್​ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಬಿಜೆಪಿಯ ಬಿ ಟೀಂ ಎಂದು ಟೀಕಿಸಿದರು.

ಕಟೀಲ್​ ವಿರುದ್ಧ ಏಕವಚನ ಬಳಕೆ

KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಹ ಕಟೀಲ್​​ ಹೇಳಿಕೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಅವನು ಹೇಳಿರುವ ಮಾತಿಗೆ ಉತ್ತರ ಇಲ್ಲ, ಅವನು ಅಸಂಬದ್ಧ ಹೇಳುತ್ತಾನೆ. ಬೆಳಗಾವಿ ಫೈಟ್ ವಿಚಾರಕ್ಕೆ  ನಮ್ಮದು ಕಾಂಗ್ರೆಸ್ ಪಕ್ಷ, ಅವರದ್ದು ಬಿಜೆಪಿ ಪಕ್ಷ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಬಿಜೆಪಿಯಲ್ಲಿ ಗೊಂದಲ ಇದೆ. ಬಿಜೆಪಿಯಲ್ಲಿ ಒಬ್ಬ ಅಭ್ಯರ್ಥಿ ಅಧಿಕೃತ, ಒಬ್ಬ ಅನಧಿಕೃತ ಅಭ್ಯರ್ಥಿ ಇದ್ದಾರೆ ಎಂದರು. ಇನ್ನು ಸೋದರ ಲಖನ್​ ಜಾರಕಿಹೊಳಿ ಸ್ಪರ್ಧೆ ಸಂಬಂಧ ಕುಟುಂಬಕ್ಕಿಂತ ಪಕ್ಷ ಬಹಳ ಮುಖ್ಯ ಎಂದು ಸತೀಶ್​ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್​ಗೂ ಬಂಡಾಯದ ಬಿಸಿ

ಇನ್ನು ಬೆಳಗಾವಿಯಲ್ಲಿ ಪರಿಷತ್ ಟಿಕೆಟ್​ ಸಿಗದಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಿಪಕ್ಷ ನಾಯಕನಾಗಿ ಜತೆಗೆ 45 ವರ್ಷದ ಸುದೀರ್ಘ ಅನುಭವ ಇತ್ತು. ಯಾಕೆ ಟಿಕೆಟ್ ಕೈ ತಪ್ಪಿದೆ ಎಂಬುದು ರಾಜ್ಯ, ಕೇಂದ್ರದ ನಾಯಕರಿಗೆ ಗೊತ್ತು. ನಾಲ್ಕು ಸಲ ಪರಿಷತ್ ಗೆ ಆಯ್ಕೆ ಆಗಿದ್ದೆ, ಈಗ ಟಿಕೆಟ್ ಯಾಕೆ ಕೈ ತಪ್ಪಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಡಿಕೆ ಶಿವಕುಮಾರ್​ ನಮ್ಮ ಮನೆಗೆ ಬಂದಿದ್ದರು, ಸುರ್ಜೇವಾಲ ಸಹ ಪೋನ್ ನಲ್ಲಿ ಮಾತನಾಡಿದೆ. ನಾನು ಯಾರನ್ನು ಸ್ಥಾನಮಾನ ಕೇಳಿಲ್ಲ, ಪಕ್ಷ ಅವಕಾಶ ಕೊಟ್ಟರೇ ನಾನು ಮಾಡುತ್ತೇನೆ ಎಂದರು.

ಇದನ್ನು ಓದಿ: Karnataka Politics: ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್

ಮುಂದಿನ ತೀರ್ಮಾನ ಮಾಡುತ್ತೇನೆ

ಕುಟುಂಬ ರಾಜಕಾರಣ ಎಲ್ಲಾ ಕಡೆ ಇದೆ, ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ನಿರಾಕರಿಸಿದ್ದರಿಂದ ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ. ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮುಂದಿನ ನಡೆಯ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ. ನಾಲ್ಕು ದಶಕದಲ್ಲಿ ಅನೇಕ ಏಳು-ಬೀಳು ಕಂಡಿದ್ದೇ‌ನೆ. ಸಚಿವನಾಗಿದ್ದ ವೇಳೆಯಲ್ಲಿ ಮೂರುವರೆ ವರ್ಷಕ್ಕೆ ಕೈ ಬಿಟ್ಟು, ಸಿಎಂಗೆ ಇರೋ ಹಕ್ಕು ಎಂದು ಹೇಳಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಎಸ್ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಆಗ್ರಹ

ಕೋಲಾರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್​ಡಿ ಕುಮಾರಸ್ವಾಮಿ,  ಬಿಜೆಪಿ ಶಕ್ತಿಯೇ ಇಲ್ಲ, ಆದರೂ ಚುನಾವಣೆಗೆ ನಿಲ್ಲಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಹಾಕಲು ಕಾಂಗ್ರೆಸ್ ನ ಓರ್ವ ಮುಖಂಡನ ಪಾತ್ರವಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಬೆಳೆನಾಶದ ಬಗ್ಗೆ ಸರ್ಕಾರ ನಿಖರ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ ಕುಮಾರಸ್ವಾಮಿ ಅವರು,  ಬೆಳೆಹಾನಿಗೆ ಸರ್ಕಾರ ನೀಡುವ ಪರಿಹಾರ ಸಾಕಾಗಲ್ಲ. ಹಾಗಾಗಿ ಹೆಚ್ಚಿನ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
Published by:Kavya V
First published: