HOME » NEWS » District » SIDDARAMAIAH CONSTITUENCY IS BECOMING THE CENTER OF POLITICAL POWER MAK

ರಾಜಕೀಯ ಶಕ್ತಿ ಕೇಂದ್ರವಾಗುತ್ತಿದೆ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ; ಮಾಜಿ ಸಿಎಂ ಹಣಿಯಲು ಬಿಜೆಪಿ-ಜೆಡಿಎಸ್‌ ತಂತ್ರ

ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಶಾಸಕರಾದ ಬಳಿಕ ರಾಜಕೀಯ ಶಕ್ತಿ ಕೇಂದ್ರವಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ, ಬಿಜೆಪಿ ಜಿಲ್ಲಾಧ್ಯಕ್ಷ, ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ಬಾದಾಮಿ ಕ್ಷೇತ್ರದ ಪಾಲಾಗಿವೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಿನಿಂದಲೇ ಹಣಿಯಲು ಬಿಜೆಪಿ, ಜೆಡಿಎಸ್ ತಂತ್ರಗಾರಿಕೆ ಹೆಣೆದಿವೆ.

news18-kannada
Updated:June 26, 2020, 2:24 PM IST
ರಾಜಕೀಯ ಶಕ್ತಿ ಕೇಂದ್ರವಾಗುತ್ತಿದೆ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ; ಮಾಜಿ ಸಿಎಂ ಹಣಿಯಲು ಬಿಜೆಪಿ-ಜೆಡಿಎಸ್‌ ತಂತ್ರ
ವಿಪಕ್ಷ ನಾಯಕ ಸಿದ್ದರಾಮಯ್ಯ.
  • Share this:
ಬಾಗಲಕೋಟೆ (ಜೂ,26): ವಿಧಾನ ಪರಿಷತ್ ನಾಮಕರಣದಲ್ಲಿ ಜೆಡಿಎಸ್ ಪಕ್ಷ ಉತ್ತರ ಕರ್ನಾಟಕದವರಿಗೆ ಆದ್ಯತೆ ಕೊಡದಕ್ಕೆ ಮುಖಂಡರಲ್ಲಿ ನೋವಿದೆ ಮುಂದಿನ ದಿನಗಳಲ್ಲಿ ಈ ಭಾಗದ ನಾಲ್ಕೈದು ಜಿಲ್ಲೆಯವರು ಜೆಡಿಎಸ್ ನಲ್ಲಿ ಹಕ್ಕಿನಿಂದ ಸ್ಥಾನಮಾನ ಕೇಳುವ ಕಾಲ ಬರಲಿದೆ ಎಂದು ಬಾಗಲಕೋಟೆ ನೂತನ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದ್ದಾರೆ.

ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ  ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಲಾಗುವುದು, ಪಕ್ಷ ತೊರೆದು ಹೋಗಿರುವ ನಾಯಕರನ್ನು ಮತ್ತೆ ವಾಪಸ್ ಬರಬೇಕೆಂದು ಆಹ್ವಾನಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಲಿ ಎಂದು ರಚನಾತ್ಮಕ ಹೋರಾಟ ರೂಪಿಸಲಾಗುವುದು. ಈ ಹಿಂದೆ ಬಾಗಲಕೋಟೆ ಜಿಲ್ಲೆ ತೋಟಗಾರಿಕೆ ವಿವಿಯ ಮೇಳದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂದಿನ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಯುಕೆಪಿ ಯೋಜನೆ ರಾಷ್ಟ್ರೀಯ ಯೋಜನೆಯಾಗಲಿ ಎಂದು ಹೇಳಿದ್ದರು. ಇನ್ನು ಪ್ರಧಾನಮಂತ್ರಿಯಾಗಿದ್ದ ಹೆಚ್‌.ಡಿ. ದೇವೇಗೌಡ ಕೃಷ್ಣಾ ಮೇಲ್ದಂಡೆ ಯೋಜನೆಗೆ 9ಸಾವಿರ ಕೋಟಿ ಅನುದಾನ ಕೊಟ್ಟಿದ್ದರು.

ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಸಮಸ್ಯೆಗೆ ಜೆಡಿಎಸ್ ಪಕ್ಷ ಹೋರಾಟ ರೂಪಿಸಲಿದೆ. ಇನ್ನು ಬಾಗಲಕೋಟೆ ಜಿಲ್ಲೆ ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರು ಸಮಸ್ಯೆ ಎದುರಿಸಿದ್ದಾರೆ. ಇದೀಗ ಕೊರೊನಾ ವೈರಸ್ ಲಾಕ್‌ಡೌನ್‌ ದಿಂದ ಜಿಲ್ಲೆಯ ಜನತೆ ತೊಂದರೆಗೊಳಗಾಗಿದ್ದಾರೆ. ಜಿಲ್ಲಾಡಳಿತ ಕೊರೊನಾ ವೈರಸ್ ಹರಡುವಿಕೆ ತಡೆಯುವಲ್ಲಿ ವಿಫಲವಾಗಿದೆ ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಸಿದ್ದು ಕ್ಷೇತ್ರದವರಿಗೆ ಬಿಜೆಪಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ, ಸಿದ್ದು ಹಣಿಯಲು ತಂತ್ರ!?

ಹೌದು ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಶಾಸಕರಾದ ಬಳಿಕ ರಾಜಕೀಯ ಶಕ್ತಿ ಕೇಂದ್ರವಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ, ಬಿಜೆಪಿ ಜಿಲ್ಲಾಧ್ಯಕ್ಷ, ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ಬಾದಾಮಿ ಕ್ಷೇತ್ರದ ಪಾಲಾಗಿವೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಿನಿಂದಲೇ ಹಣಿಯಲು ಬಿಜೆಪಿ, ಜೆಡಿಎಸ್ ತಂತ್ರಗಾರಿಕೆ ಹೆಣೆದಿವೆ.

ಅದರ ಮೊದಲ ಭಾಗವಾಗಿ, ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಬಾದಾಮಿಯ ಶಾಂತಗೌಡ ಪಾಟೀಲ್ ಹೆಗಲಿಗೆ ವಹಿಸಿದ್ದರೆ,ಇದೀಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ  ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲುಂಡ ಹನುಮಂತ ಮಾವಿನಮರದರಿಗೆ ಬಾಗಲಕೋಟೆ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಿದೆ‌. ಮೂಲತ: ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಆರಂಭಿಸಿದ್ದ ಹನುಮಂತ ಮಾವಿನಮರದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.ಇದನ್ನೂ ಓದಿ : ಬೆಂಗಳೂರು ಶಾಸಕರ ಸಭೆ ಮುಕ್ತಾಯ: ಲಾಕ್​ಡೌನ್​ ಮತ್ತೆ ಮಾಡಲ್ಲ ಎಂದು ಸರ್ಕಾರ ಅಧಿಕೃತ ಸ್ಪಷ್ಟನೆ

ಇದೀಗ ಬಿಜೆಪಿ, ಜೆಡಿಎಸ್ ಪಕ್ಷಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸಿದರೆ ಈಗಿನಿಂದಲೇ ಹಣಿಯಲು ತಂತ್ರಗಾರಿಕೆ ನಡೆಸಿದೆ ಎನ್ನಲಾಗುತ್ತಿದೆ. ಒಟ್ಟಲ್ಲಿ ರಾಜ್ಯ ರಾಜಕಾರಣದಲ್ಲಿ ಬಾದಾಮಿ ಕ್ಷೇತ್ರ ಪ್ರಭಾವಿ ಕ್ಷೇತ್ರವಾಗಿದೆ. ಸಿದ್ದರಾಮಯ್ಯನವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವಾಗಿದ್ದರಿಂದ ಕ್ಷೇತ್ರ ಜನತೆ ಋಣ ತೀರಿಸುವದಕ್ಕಾಗಿ ಬಿಜೆಪಿ ಸರ್ಕಾರದಲ್ಲೂ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ತರುವ ಮೂಲಕ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್‌ ರೂಪಿಸಿರುವ ಹೊಸ ಕಾರ್ಯತಂತ್ರ ಹೇಗೆ ಕಾರ್ಯನಿರ್ವಹಿಸಲಿದೆ? ಎಂದಬುದನ್ನು ಕಾದು ನೋಡಬೇಕಿದೆ.
First published: June 26, 2020, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories