ನ್ಯೂಸ್18 ವರದಿ ಬೆನ್ನಲ್ಲೇ ಎಚ್ಚೆತ್ತ ಸಿದ್ದರಾಮಯ್ಯ; ಸ್ವಕ್ಷೇತ್ರದ ಪ್ರವಾಸಕ್ಕೆ ಕೊನೆಗೂ ದಿನಾಂಕ ಫಿಕ್ಸ್!

ಸಿದ್ದರಾಮಯ್ಯ ಅವರನ್ನು ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಕೈ ಹಿಡಿದಿತ್ತು. ಆದರೆ, ಅವರು ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಇಲ್ಲಿನ ರೈತರ, ಬಡ ಕೂಲಿ ಕಾರ್ಮಿಕರ ಮತ್ತು ನೆರೆ ಸಂತ್ರಸ್ತರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಕೊರೋನಾ ಎಫೆಕ್ಟ್ ಹಿನ್ನೆಲೆ  ಮೂರು ತಿಂಗಳಾದರೂ ಸ್ವಕ್ಷೇತ್ರಕ್ಕೆ ಆಗಮಿಸಿರಲಿಲ್ಲ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

  • Share this:
ಬಾಗಲಕೋಟೆ (ಜೂ.1): ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಜೂನ್ 03, ಹಾಗೂ 04 ರಂದು ಎರಡು ದಿನಗಳ ಕಾಲ ಬಾಗಲಕೋಟೆ ಜಿಲ್ಲೆಯ ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಳ್ಳಲಿದ್ದಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಕಾಂಗ್ರೆಸ್‌ ಕೇಂದ್ರ ಕಚೇರಿ ಸ್ಪಷ್ಟಪಡಿಸಿದೆ. 

ಸಿದ್ದರಾಮಯ್ಯ ಅವರನ್ನು ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಕೈ ಹಿಡಿದಿತ್ತು. ಆದರೆ, ಅವರು ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಜನರ ಸಮಸ್ಯೆಗೆ ಸಿದ್ದರಾಮಯ್ಯ ಖುದ್ದಾಗಿ ಸ್ಪಂದಿಸಿರಲಿಲ್ಲ. ಬದಲಾಗಿ ಇಲ್ಲಿನ ರೈತರ, ಬಡ ಕೂಲಿ ಕಾರ್ಮಿಕರ ಮತ್ತು ನೆರೆ ಸಂತ್ರಸ್ತರಿಗೆ ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಮೂಲಕ ಸಹಾಯ ಹಸ್ತ ಚಾಚಿದ್ದರು.

ಹೀಗಾಗಿ ತಮ್ಮ ಅಹವಾಲನ್ನು ಶಾಸಕರಿಗೆ ಸಲ್ಲಿಸುವ ಸಲುವಾಗಿ ಇಲ್ಲಿ ಜನ  ಸಿದ್ದರಾಮಯ್ಯ ಬರುವಿಕೆಗಾಗಿ ಸಮಸ್ಯೆ ಹೊತ್ತು ಕಾದು ಕುಳುತಿದ್ದಾರೆಂದು ಈ ಕುರಿತು ನ್ಯೂಸ್‌ 18 ವರದಿ ಪ್ರಸಾರ ಮಾಡಿತ್ತು.

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದವು. ಹೀಗಾಗಿ ಕೊನೆಗೂ ಈ ವರದಿಯಿಂದ ಎಚ್ಚೆತ್ತಿರುವ ಸಿದ್ದರಾಮಯ್ಯ ಜೂನ್‌ 3-4 ರಂದು ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.

ಹೀಗಿದೆ ಸಿದ್ದರಾಮಯ್ಯನವರ ಎರಡು ದಿನಗಳ ವೇಳಾಪಟ್ಟಿ:

ಜೂನ್ .3 ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಕೊಪ್ಪಳದ ಗಿಣಗೇರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ, ಅಲ್ಲಿಂದ ರಸ್ತೆ ಮಾರ್ಗವಾಗಿ  ಬಾದಾಮಿಗೆ ಆಗಮಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ 2:30ಕ್ಕೆ ಬಾದಾಮಿಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ -19 ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಸಭೆ ಬಳಿಕ ಕೊರೋನಾ ವಾರಿಯರ್ಸ್ ಗೆ ಗೌರವ ಅರ್ಪಣೆ ಸಲ್ಲಿಸಿ ಮೊದಲ ದಿನದ ಪ್ರವಾಸ ಬಳಿಕ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೂನ್ 4ರಂದು ಬೆಳಿಗ್ಗೆ 9-30ಕ್ಕೆ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ. ಬಳಿಕ ಬಾದಾಮಿಯಲ್ಲಿ ನೂತನ ಮಿನಿ ವಿಧಾನಸೌಧ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮತಕ್ಷೇತ್ರದ ಢಾಣಕ ಶಿರೂರು ಗ್ರಾಮದಲ್ಲಿ 21 ಸೋಂಕಿತ ಕೇಸ್ ಕಂಡು ಬಂದ ಹಿನ್ನೆಲೆ  ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಲಿದ್ದಾರೆ.

ಹೊಸೂರು ಗ್ರಾಮದ ಶಾಂತವ್ವ ಭೋವಿ ಹಾಗೂ ನಂದಿಕೇಶ್ವರ ಗ್ರಾಮದ ರೈತ ಬಸಯ್ಯ ಮುಚಖಂಡಿ ಸಿಡಿಲು ಬಡಿದು ಮೃತಪಟ್ಟಿದ್ದು ಮೃತ ರೈತ ಕುಟುಂಬ ಹಾಗೂ ನಂದಿಕೇಶ್ವರದಲ್ಲಿ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಹಂಗರಗಿ ಕೋವಿಡ್ ಕರ್ತವ್ಯಕ್ಕೆ ತೆರಳುವ ವೇಳೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು ಅವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಗುಳೇದಗುಡ್ಡದಲ್ಲಿ ಸಂಕೇಶ್ವರ ಸಂಗಮ ರಸ್ತೆ ಕಾಮಗಾರಿಗೆ ಚಾಲನೆ ಕಾರ್ಯಕ್ರಮದ ಬಳಿಕ  ಜೂನ್ 4ರಂದು ಸಂಜೆ 6ಕ್ಕೆ ಕೊಪ್ಪಳದ ಗಿಣಗೇರಾದಿಂದ ವಿಮಾನ  ಮೂಲಕ ಬೆಂಗಳೂರಿಗೆ ನಿರ್ಗಮಿಸಿಲಿದ್ದಾರೆ.

ಇದನ್ನೂ ಓದಿ : ವಿವಾದಕ್ಕೀಡಾಗಿರುವ ಯಲಹಂಕ ಮೇಲ್ಸೇತುವೆ ದೇವೇಗೌಡರ ಹೆಸರಿಡಿ; ಕಾಂಗ್ರೆಸ್‌ನಿಂದ ಹೊಸ ಕೂಗು
First published: