HOME » NEWS » District » SIDDARAMAIAH ASKS GOVERNMENT TO CONSIDER THE DEMANDS OF KSRTC WORKERS PTH SNVS

ಸರ್ಕಾರ ನಮ್ಮ ಸಲಹೆ ಆಲಿಸುತ್ತಿಲ್ಲ; ಸಾರಿಗೆ ಸಂಸ್ಥೆ ನೌಕರರ ನ್ಯಾಯುತ ಬೇಡಿಕೆ ಈಡೇರಿಸಲಿ: ಸಿದ್ದರಾಮಯ್ಯ ಒತ್ತಾಯ

ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದರೆ ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಒತ್ತಾಯಿಸಿದ್ದಾರೆ.

news18-kannada
Updated:December 12, 2020, 9:43 AM IST
ಸರ್ಕಾರ ನಮ್ಮ ಸಲಹೆ ಆಲಿಸುತ್ತಿಲ್ಲ; ಸಾರಿಗೆ ಸಂಸ್ಥೆ ನೌಕರರ ನ್ಯಾಯುತ ಬೇಡಿಕೆ ಈಡೇರಿಸಲಿ: ಸಿದ್ದರಾಮಯ್ಯ ಒತ್ತಾಯ
ಸಿದ್ದರಾಮಯ್ಯ.
  • Share this:
ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನೌಕರರು ಬೀದಿಗಿಳಿದು ಪ್ರತಿಭಟನೆ ಮಾಡ್ತಾ ಇದ್ದು ಸರ್ಕಾರ ಪ್ರತಿಭಟನಾಕಾರರನ್ನು ಕರೆದು ಮಾತನಾಡಲಿ ಎಂದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ನಮ್ಮ ಸಲಹೆ ಸೂಚನೆಗಳನ್ನ ಕೇಳಲ್ಲ. ಸರ್ಕಾರ ನಮ್ಮನ್ನ ಅಧಿವೇಶನದಲ್ಲಿಯೂ ಮಾತನಾಡಿಸುತ್ತಿಲ್ಲ. ಸಾರಿಗೆ ಸಂಸ್ಥೆ ನೌಕರರ ಬೇಡಿಕೆಗಳು ನ್ಯಾಯಯುತ ಬೇಡಿಕೆಗಳಾಗಿದ್ರೆ ಸರ್ಕಾರ ಕೂಡಲೇ ಈಡೇರಿಸಬೇಕು ಎಂದಿದ್ದಾರೆ.

ಗ್ರಾಮ‌ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಅಧಿಕಾರ ವಿಕೇಂದ್ರೀಕರಣದಲ್ಲಿ ಕಾಂಗ್ರೆಸ್ ಪಕ್ಷ ಬಲವಾದ ನಂಬಿಕೆ ಹೊಂದಿದೆ. ಸೋನಿಯಾ ಗಾಂಧಿಯವರು ಮಹಿಳೆಯರಿಗಾಗಿ ಶೇಕಡಾ 50 ರಷ್ಟು ಮೀಸಲಾತಿ ನೀಡಿದ್ದಾರೆ. ಹಿಂದುಳಿದ ಜನರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್‌ನ ಕೊಡುಗೆಯಾಗಿದೆ. ಮೀಸಲಾತಿ ನೀಡಿರುವುದನ್ನ ರಾಮಾಜೊಯಿಸ್‌ರು ಪ್ರಶ್ನೆ ಮಾಡಿದ್ದರು. ಮೀಸಲಾತಿ ವಿಚಾರದಲ್ಲಿ ಬಿಜೆಪಿಯವರು ವಿರೋಧಿಯಾಗಿದ್ದರು. ಮೀಸಲಾತಿ ಕೊಡುಗೆ ಕಾಂಗ್ರೆಸ್ ನೀಡಿದೆ. ಬಿಜೆಪಿಯವರು ಅಧಿಕಾರ ವಿಕೇಂದ್ರೀಕರಣದ ವಿರೋಧಿಗಳು ಮತ್ತು ಮೀಸಲಾತಿ ವಿರೋಧಿಗಳು. ಈಗ ಬಿಜೆಪಿಯವರು ಗ್ರಾಮ ಸ್ವರಾಜ್ಯ ಅಭಿಯಾನ ಮಾಡ್ತಾ ಇದ್ದಾರೆ. ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಿಜೆಪಿ ಏನೇ ತಿಪ್ಪರಲಾಗ ಹಾಕಿದ್ರು, ಹಣ ಚೆಲ್ಲಿದ್ರೂ, ಅಧಿಕಾರ ದುರುಪಯೋಗ ಮಾಡಿದ್ರು ಅಧಿಕಾರಕ್ಕೆ ಕಾಂಗ್ರೆಸ್ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಥಾನಗಳ ಹರಾಜು ಕಾನೂನುಬಾಹಿರ ಚಟುವಟಿಕೆಯಾಗಿದೆ. ಹರಾಜು ಹಾಕಲು ಬಿಟ್ಟಿರುವುದು ಸರ್ಕಾರದ ವೈಫಲ್ಯ ಎಂದವರು ಟೀಕಿಸಿದ್ದಾರೆ.

ಇದನ್ನೂ ಓದಿ: ರಾತ್ರಿಯಿಡೀ ಚಳಿಯಲ್ಲೇ ಬಸ್ ನಿಲ್ದಾಣದಲ್ಲಿ ಪರದಾಡಿದ ಹಸುಗೂಸು, ಮಕ್ಕಳು, ವೃದ್ಧರು, ಮಹಿಳೆಯರು

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಮಾವೇಶ ನಿನ್ನೆ ನಡೆಯಿತು. ಕೆಪಿಸಿಸಿಯಿಂದ ಗ್ರಾಮ ಪಂಚಾಯತಿ ಚುನಾವಣೆ ನಿಮಿತ್ತ “ನಮ್ಮ ಗ್ರಾಮ ನಮ್ಮ ಶಕ್ತಿ” ಸಮಾವೇಶ ಆಯೋಜಿಸಲಾಗಿತ್ತು. ಹಳೇ ಹುಬ್ಬಳ್ಳಿಯ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಕುರಿತು ಚರ್ಚಿಸಲಾಯಿತು. ಮಾಜಿ ಸಿಎಮ್ ಸಿದ್ದರಾಮಯ್ಯ ಭಾಗವಹಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ರು. ಶಾಸಕ ಪ್ರಸಾದ್ ಅಬ್ಬಯ್ಯ, ಶಾಸಕಿ ಕುಸುಮಾ ಶಿವಳ್ಳಿ, ಅನಿಲ್ ಪಾಟೀಲ್, ಅಲ್ತಾಫ್ ಹಳ್ಳೂರ್, ಎ.ಎಮ್. ಹಿಂಡಸಗೇರಿ, ಸದಾನಂದ ಡಂಗನವರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವರದಿ: ಪರಶುರಾಮ ತಹಶೀಲ್ದಾರ
Published by: Vijayasarthy SN
First published: December 12, 2020, 9:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories