ತಾಲಿಬಾನಿಗಳಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹುಲಿ, ಬಂಡೆ ಎಂದು ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ; ನಳಿನ್ ಕುಮಾರ್ ಕಟೀಲ್

ಶಿರಾ ಹಾಗೂ ಆರ್ ಆರ್ ನಗರ ಈ ಎರಡು ಕ್ಷೇತ್ರದ ಸೋಲಿಗೆ ಡಿಕೆಶಿ- ಸಿದ್ದರಾಮಯ್ಯ ಕಾರಣ ಅಂತ  ಆರೋಪಿಸಿರುವ ಕಟೀಲ್, ಆರ್ ಆರ್‌ ನಗರವನ್ನು ಸೋಲಿಸಿದ್ದು  ಸಿದ್ದರಾಮಯ್ಯ. ಶಿರಾ ಕ್ಷೇತ್ರವನ್ನು ಸೋಲಿಸಿದ್ದು ಡಿಕೆ ಶಿವಕುಮಾರ್.  ಕಾರ್ಯಕರ್ತರಿಗೆ ಈ ವಿಚಾರ ಗೊತ್ತಾಗಿ ಅಸಮಾಧಾನ ಭುಗಿಲೆದ್ದಿದೆ‌‌ ಎಂದು‌ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್

  • Share this:
ಉಡುಪಿ; ತಾಲಿಬಾನಿಗಳು ಕೂಡ ಮಿಲ್ಟೆಂಟ್, ಕ್ಯಾಪ್ಟನ್ ಅಂತ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಸಿದ್ದರಾಮಯ್ಯ, ಡಿಕೆಶಿ ಕೂಡ ಬಂಡೆ, ಹುಲಿ ಅಂತ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ. ಚುನಾವಣೆಯ ನಂತರ ಬಂಡೆಯು ಇಲ್ಲ ಹುಲಿಯು ಇಲ್ಲ. ಕಾಂಗ್ರೆಸ್ ಪರಿಸ್ಥಿತಿ ದುಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳುವ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ತಾಲಿಬಾನಿಗಳಿಗೆ ಹೋಲಿಸಿದರು.

ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಗಳ ಪ್ರಶಿಕ್ಷಣ ವರ್ಗ ಸಭೆಯಲ್ಲಿ ಮಾತನಾಡಿದ ಕಟೀಲ್, ಉಪ ಚುನಾವಣೆ ಸಂದರ್ಭ ಸಿಎಂ ಯಡಿಯೂರಪ್ಪ ಮತ್ತು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದರು. ಮುಂದೆ ಎರಡು ವಿಧಾನಸಭೆ , ಒಂದು ಲೋಕಸಭಾ ಚುನಾವಣೆ ಬರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಗೆಲ್ಲುತ್ತದೆ.  ಮುಂದಿನ ಚುನಾವಣೆಗಳಿಗೂ ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಪಂಚಾಯತ್ ಚುನಾವಣೆಗಳಲ್ಲೂ ಬಿಜೆಪಿ ಶೇ. 80 ಮತ ಪಡೆಯಲಿದೆ ಎಂದರು.

ಸಿಎಂ ಸ್ಥಾನ ಬದಲಾಗುತ್ತೆ ಎಂದು ಜನರಲ್ಲಿ ಗೊಂದಲ ಸೃಷ್ಟಿ ಮಾಡಿದರು. ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ. ಮುಂದಿನ ಎರಡೂವರೆ ವರ್ಷಗಳ ಕಾಲ ಯಡಿಯೂರಪ್ಪನೇ ನಮ್ಮ ಸರ್ವಸಮ್ಮತ ನಾಯಕ ಎಂದು ಘೊಷಿಸಿದರು. ಹುಡುಗನಿಗೆ ಪ್ರಾಯ ಆಗಿದೆ. ಮದುವೆಗೆ ಹುಡುಗಿ ಹುಟ್ಟಿಯೇ ಇಲ್ಲ. ಮದುವೆ ನಿಶ್ಚಯಕ್ಕೂ ಮೊದಲೇ ಮಗುವಿಗೆ ಹೆಸರಿಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಂದಿನ ನಾಯಕತ್ವಕ್ಕೆ ನಳೀನ್ ಲೇವಡಿ ಮಾಡಿದರು. ಕಾಂಗ್ರೆಸ್​ನಲ್ಲಿ ಈಗಲೇ ಯಾರು ಮುಖ್ಯಮಂತ್ರಿ ಎಂಬ ಚರ್ಚೆ ಆರಂಭವಾಗಿದೆ. ಸಿದ್ರಾಮಣ್ಣ ನಾನೇ ಮುಖ್ಯಮಂತ್ರಿ ಅಂತಾರೆ. ಜಮೀರ್ ಅಹ್ಮದ್  ಸಿದ್ದರಾಮಯ್ಯನೇ ಮುಖ್ಯಮಂತ್ರಿ ಅಂತಾರೆ. ಸೌಮ್ಯಾರೆಡ್ಡಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಂತಾರೆ. ನಾಯಕತ್ವದ ಗೊಂದಲ ಇರೋದು ಕಾಂಗ್ರೆಸ್​ನಲ್ಲಿ ಮಾತ್ರ. ಸಂಗೀತ ಕುರ್ಚಿ ಸ್ಪರ್ಧೆ ಆರಂಭವಾಗಿರುವುದು ಕಾಂಗ್ರೆಸ್ ನಲ್ಲಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 30 ಸ್ಥಾನಕ್ಕೆ ಸೀಮಿತವಾಗುತ್ತದೆ ಎಂದು ಕಟೀಲ್ ಭವಿಷ್ಯ ನುಡಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಮಾಜಿ‌ ಮೇಯರ್ ಸಂಪತ್ ರಾಜ್ ತಲೆಮರೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ಈ ಬಗ್ಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಉತ್ತರಿಸಬೇಕು. ಘಟನೆಯಲ್ಲಿ ಸಂಪತ್ ರಾಜ್ ಕೈವಾಡ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.‌‌ ಡಿಕೆ ಶಿವಕುಮಾರ್ ಗೆ ನೈತಿಕತೆ ಇದ್ದರೆ ಸಂಪತ್ ರಾಜ್ ಶರಣಾಗುವಂತೆ ಹೇಳಲಿ. ಸಂಪತ್ ರಾಜ್ ನನ್ನ ಪೊಲೀಸರ ಕೈಗೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕು. ಅಖಂಡ ಶ್ರೀನಿವಾಸಮೂರ್ತಿಗೆ ಭಾರತೀಯ ಜನತಾ ಪಾರ್ಟಿ ನ್ಯಾಯ ಕೊಡಿಸುತ್ತದೆ ಎಂದು ಹೇಳಿದರು.

ಇದನ್ನು ಓದಿ: ದೀಪಾವಳಿ ಗಿಫ್ಟ್​ ನೀಡಿದ ಕೇಂದ್ರ; ಹೋಸ ಯೋಜನೆಗಳನ್ನು ಘೋಷಿಸಿದ ನಿರ್ಮಲಾ ಸೀತಾರಾಮನ್

ಶಿರಾ ಹಾಗೂ ಆರ್ ಆರ್ ನಗರ ಈ ಎರಡು ಕ್ಷೇತ್ರದ ಸೋಲಿಗೆ ಡಿಕೆಶಿ- ಸಿದ್ದರಾಮಯ್ಯ ಕಾರಣ ಅಂತ  ಆರೋಪಿಸಿರುವ ಕಟೀಲ್, ಆರ್ ಆರ್‌ ನಗರವನ್ನು ಸೋಲಿಸಿದ್ದು  ಸಿದ್ದರಾಮಯ್ಯ. ಶಿರಾ ಕ್ಷೇತ್ರವನ್ನು ಸೋಲಿಸಿದ್ದು ಡಿಕೆ ಶಿವಕುಮಾರ್.  ಕಾರ್ಯಕರ್ತರಿಗೆ ಈ ವಿಚಾರ ಗೊತ್ತಾಗಿ ಅಸಮಾಧಾನ ಭುಗಿಲೆದ್ದಿದೆ‌‌ ಎಂದು‌ ಹೇಳಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳ ತೀರ್ಮಾನದ ನಂತರ ಪಕ್ಷದೊಳಗೆ ಚರ್ಚೆಯಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಯಡಿಯೂರಪ್ಪನವರು ಅನುಭವಿಗಳು. ರಾಜ್ಯದ ಹಿತದೃಷ್ಟಿಯಿಂದ ಸಂಪುಟ ವಿಸ್ತರಣೆ ಮಾಡುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಭಿನ್ನಮತದ ವಿಚಾರದಲ್ಲೂ  ಪಕ್ಷ ಮತ್ತು ಸರಕಾರ ಚೆನ್ನಾಗಿ ನಡೆಯುತ್ತಿದೆ. ಪಕ್ಷದ ಸೀಮಿತತೆ ಮತ್ತು ನಿಯಮವನ್ನು ಮೀರಿ ಯಾರು ವರ್ತಿಸಬಾರದು.‌ ಪಕ್ಷದ ನಿಯಮಗಳ ಅಡಿಯಲ್ಲೇ ಎಲ್ಲರೂ ಮಾತನಾಡಬೇಕು. ಪಕ್ಷದ ಒಳಗೆ ಏನು ತೀರ್ಮಾನ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಂಡಿದ್ದೇವೆ. ಬಸನಗೌಡ ಪಾಟೀಲ್ ಯತ್ನಾಳ್ ಗೆ ಏನು ಮಾಡಬೇಕು ಅದನ್ನು ಮಾಡುತ್ತೇವೆ‌ ಎಂದರು.
Published by:HR Ramesh
First published: