ಸಿದ್ದರಾಯಮಯ್ಯ, ಡಿಕೆ ಶಿವಕುಮಾರ್ ಸಿಎಂ ಆಗೋದು ಹಗಲು ಕಸನು; ಸಚಿವ ಸಿ.ಸಿ.ಪಾಟೀಲ್!

ಪಂಚಮಸಾಲಿ ಸ್ವಾಮಿಗಳ ಪರ್ಯಾಯ ಒಕ್ಕೂಟ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಸಿ.ಪಾಟೀಲ್ ಅವರು ಸ್ವಾಮಿಗಳು, ಜಗದ್ಗುರುಗಳ ಬಗ್ಗೆ ಕಾಮೆಂಟ್ ಮಾಡೋದು ತಪ್ಪಾಗುತ್ತೆ ಧರ್ಮೋಪದೇಶ ಮಾಡುವ ಕಾವಿ ಧಾರಿಗಳು ತಮ್ಮಷ್ಟಕ್ಕೆ ತಾವೇ ಯೋಚಿಸಬೇಕು. ಸಮಾಜ ಜಾಗೃತಿ ಮಾಡಿಸಬೇಕು ಎಂದರು.

ಸಚಿವ ಸಿ.ಸಿ.ಪಾಟೀಲ್

ಸಚಿವ ಸಿ.ಸಿ.ಪಾಟೀಲ್

  • Share this:
ಗದಗ: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಆಗೋದು ಹಗಲು ಕನಸು ಎಂದು ಸಚಿವ ಸಿ ಸಿ ಪಾಟೀಲ ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಒಂದ್ಕಡೆ ಸಿದ್ದರಾಮಯ್ಯ ಮತ್ತೊಂದ್ಕಡೆ ಡಿಕೆಶಿ ನಾನೇ ಸಿಎಂ ಅಂತಿದ್ದಾರೆ. ಈ ರಾಜ್ಯಕ್ಕೆ ಎಷ್ಟು ಜನ ಸಿಎಂ ಅನ್ನೋದು ನನಗೆ ತಿಳಿಯುತ್ತಿಲ್ಲ. ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಮುಂದಿನ ಸಿಎಂ ಅಂತಿದ್ದಾರೆ. ಮುಂದಿನ ಸಿಎಂ ಕ್ಯಾಂಪೇನ್ ಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇನ್ನು ಚುನಾವಣೆಯಲ್ಲಿ ಗೆಲ್ಲಬೇಕು. 113 ಸೀಟ್ ಪಡೆಯಬೇಕು ಶಾಸಕಾಂಗ ಸಭೆಯಲ್ಲಿ ಸಿಎಂ ನಿರ್ಧಾರವಾಗಬೇಕು. ನಮ್ಮಲ್ಲಿ ಶಾಸಕರು ಮುಖ್ಯಮಂತ್ರಿ ಆರಿಸುತ್ತೇವೆ. ಕಾಂಗ್ರೆಸ್ ನಲ್ಲಿ ದೆಹಲಿಯಿಂದ ಚೀಟಿ ಬರುತ್ತೆ ಆ ಚೀಟಿಯಲ್ಲಿ ಯಾರ ಪರವಾಗಿ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇಬ್ಬರ ಹೊರತುಪಡಿಸಿ ಬೇರೆಯವರಿಗೆ ಬಂದರೇ ಏನಾಗುತ್ತೆ ಹೇಳಿಕೆ ನೀಡುವುದಕ್ಕೆ ಏನು ಹಣವಂತೂ ಖರ್ಚು ಆಗುವುದಿಲ್ಲ ಎಂದರು.

ಇನ್ನು ಡಿಕೆಶಿ, ಸಿದ್ದರಾಮಯ್ಯ ಒಂದೊಂದು ನಾಟಕ ಮಾಡಿ ಅದರಲ್ಲಿ ಸಿಎಂ ಆಗಲಿ ಎಂದು ಕನಸು ಕಾಣಬೇಕು. ಆದರೆ ಹಗಲು ಕನಸು ಭಾರೀ ಡೇಂಜರ್ ಸಿಎಂ ಕ್ಯಾಂಪೇನ್ ಹೇಳಿ ಮಾಡಿಸಿರಬಹುದು. ಇನ್ನು 'ಮಿರ್ಚಿ' ಕಥೆ ಹೇಳಿ ಕಾಂಗ್ರೆಸ್ ನಾಯಕರಿಗೆ  ಸಚಿವ ಸಿ ಸಿ ಪಾಟೀಲ್ ಟಾಂಗ್ ನೀಡಿದರು.

ತೋಂಟದಾರ್ಯ ಮಠದ ಸ್ವಾಮೀಜಿ ಈ ಹಿಂದೆ ಕಥೆಯೊಂದನ್ನು ಹೇಳ್ತಿದ್ರು. ಮಠದ ಎದುರಿಗೆ ಒಬ್ಬ ವ್ಯಕ್ತಿ ಕೂತು ಏನೋ ತಿಂದಹಾಗೆ ಮಾಡುತ್ತಿದ್ದನಂತೆ. ಸ್ವಾಮಿಗಳು ಕೇಳಿದ್ರೆ ಆ ವ್ಯಕ್ತಿ ಮಿರ್ಚಿ ತಿಂದಹಾಗೆ ಸುಮ್ನೆ ಮಾಡುತ್ತಿದ್ದೇನೆ ಎಂದಿದ್ದನಂತೆ. ತಿಂದಹಾಗೆ ಮಾಡೋದಾದ್ರೆ ಧಾರವಾಡ ಪೇಢೆ ತಿನ್ನು, ಗೋಗಾಕ್ ಕರದಂಟು ತಿನ್ನು ಎಂದು ಸ್ವಾಮಿಗಳು ಹೇಳಿದ್ರು. ಕನಸು ಕಾಣೋದಾದ್ರೆ ಪ್ರಧಾನ ಮಂತ್ರಿಯಾಗೋದನ್ನ ಕಾಣಿ, ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಆಗೋದನ್ನ ಕಾಣಿ ಎನ್ನುವ ಮೂಲಕ ಕನಸು ವಿಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯಗೆ ಅವರಿಗೆ ಸಚಿವ ಸಿ.ಸಿ.ಪಾಟೀಲ್  ಟಾಂಗ್ ನೀಡಿದರು.

ಇನ್ನು ಪಂಚಮಸಾಲಿ ಸ್ವಾಮಿಗಳ ಪರ್ಯಾಯ ಒಕ್ಕೂಟ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಸಿ.ಪಾಟೀಲ್ ಅವರು ಸ್ವಾಮಿಗಳು, ಜಗದ್ಗುರುಗಳ ಬಗ್ಗೆ ಕಾಮೆಂಟ್ ಮಾಡೋದು ತಪ್ಪಾಗುತ್ತೆ ಧರ್ಮೋಪದೇಶ ಮಾಡುವ ಕಾವಿ ಧಾರಿಗಳು ತಮ್ಮಷ್ಟಕ್ಕೆ ತಾವೇ ಯೋಚಿಸಬೇಕು. ಸಮಾಜ ಜಾಗೃತಿ ಮಾಡಿಸಬೇಕು. ಅದನ್ನ ಬಿಟ್ಟು ಗ್ರೂಪಿಸಮ್ ಮಾಡಬಾರದು. ಗ್ರೂಪ್ ಮಾಡಿಕೊಂಡು ಹೋಗೋದಾದ್ರೆ ರಾಜಕಾರಣಿಗಳು ಹಾಗೂ ಅವರ ಮಧ್ಯ ವ್ಯತ್ಯಾಸ ಏನು. ಅವರ ಬಗ್ಗೆ ಹೆಚ್ಚಿನ ಕಾಮೆಂಟ್ ಮಾಡೋದಿಲ್ಲ ಎಂದರು.

ಇದನ್ನು ಓದಿ: ದೆಹಲಿಗೆ ಬಿ.ವೈ.ವಿಜಯೇಂದ್ರ ದಿಢೀರ್ ಪ್ರಯಾಣ: ಬಿ.ವೈ.ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನಕ್ಕಾಗಿ ಲಾಬಿ?

ಕೊರೋನಾ ವೈರಸ್ ಸಮರ್ಥ ನಿರ್ವಹಣೆ

ಗದಗ ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೋಂಕಿನ 2 ಅಲೆಗಳನ್ನು ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಮರ್ಥವಾಗಿ ಎದುರಿಸಿದೆ. ಮತ್ತೆ ತಾವೆಲ್ಲರೂ ಸೋಂಕಿನ ಸಂಭವನೀಯ 3ನೇ ಅಲೆ ಸಮರ್ಥವಾಗಿ ಎದುರಿಸಲು ಸಿದ್ಧರಾಗುವಂತೆ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೊರೋನಾ ಸೋಂಕಿನ ಸಂಭವನೀಯ 3ನೇ ಅಲೆ ನಿಯಂತ್ರಣ ಸಭೆಯ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್ ರು ತಜ್ಞರ ಅಭಿಪ್ರಾಯದಂತೆ ಸಂಭವನೀಯ ಸೋಂಕಿನ 3ನೇ ಅಲೆಯು ಮಕ್ಕಳಿಗೆ ಹೆಚ್ಚು ಪರಿಣಾಮ ಬೀರಬಹುದು ಎಂದು ತಿಳಿಸಿದ್ದು, ಜಿಲ್ಲೆಯಲ್ಲಿರುವ 270 ತೀರ್ವ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಆಯಾ ಶಿಶು ಅಭಿವೃದ್ಧಿ ಅಧಿಕಾರಿಗಳು ನಿಯಮಿತವಾಗಿ ಮಕ್ಕಳ ಮನೆಗಳಿಗೆ ಬೇಟಿ ನೀಡಿ ಸರ್ಕಾರದಿಂದ ಅಪೌಷ್ಠಿಕತೆ ಹೊಗಲಾಡಿಸಲು ನೀಡುವ ಪೌಷ್ಠೀಕ ಆಹಾರ ಹಾಗು ಸೂಕ್ತ ಔಷದೊಪಚಾರ ತಲುಪಿದ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಹಾಗೂ ಅಪೌಷ್ಠಿಕ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಅಪೌಷ್ಠಿಕತೆ ಹೊಗಲಾಡಿಸಬೇಕು. ಹಾಗೂ ಮಕ್ಕಳು ಆರೋಗ್ಯಯುತವಾಗಿರುವಂತೆ ಪಾಲಕರಿಗೆ ನೋಡಿಕೊಳ್ಳಲು ತಿಳಿಸಬೇಕು ಎಂದರು.

ಜಿಲ್ಲೆಯ 270 ಅಪೌಷ್ಠಿಕ ಮಕ್ಕಳ ತಂದೆ-ತಾಯಿಗಳಿಗೆ ಆದ್ಯತೆ ಮೇರೆಗೆ ಇನ್ನೆರಡು ದಿನಗಳಲ್ಲಿ ಲಸಿಕೆ ಕೊಡಿಸಬೇಕು. ಈ ಕಾರ್ಯವನ್ನು ಆರೋಗ್ಯ ಇಲಾಖೆ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಇಲಾಖಾಧಿಕಾರಿಗಳು ಸಮನ್ವಯ ಸಾಧಿಸಿ ನಿರ್ವಹಿಸಲು ತಿಳಿಸಿದರು.
Published by:HR Ramesh
First published: