HOME » NEWS » District » SIDDARAMAIAH AGAIN DIG CM BS YEDIYURAPPA ABOUT ON MAHADAHI RIVER ISSUE RHHSN PTH

ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಮಹದಾಯಿ ನೀರು ಹರಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಈವರೆಗೂ ನೀರು ಹರಿಸಿಲ್ಲ; ಸಿದ್ದರಾಮಯ್ಯ

ಪಕ್ಷದಲ್ಲಿ ಯಾರೂ ದೊಡ್ಡವರಲ್ಲ. ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಕಟ್ಟಲು ದುಡಿಯುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಮೊದಲ ಗುರಿ. ಹೀಗಾಗಿ ಪಕ್ಷದಲ್ಲಿ ವಿವಿಧ ಬ್ಲಾಕ್‌ಗಳನ್ನು ಮಾಡಿ ಸಂಘಟನೆ ಮಾಡಲಾಗುತ್ತಿದೆ. ಇನ್ನು ಮುಂದೆ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಗಣನೀಯ ಬದಲಾವಣೆ ಆಗಲಿದೆ ಎಂದು ಡಿಕೆಶಿ ತಿಳಿಸಿದರು.

news18-kannada
Updated:January 11, 2021, 9:54 PM IST
ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಮಹದಾಯಿ ನೀರು ಹರಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಈವರೆಗೂ ನೀರು ಹರಿಸಿಲ್ಲ; ಸಿದ್ದರಾಮಯ್ಯ
ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಂಕಲ್ಪ ಸಮಾವೇಶ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡರು.
  • Share this:
ಹುಬ್ಬಳ್ಳಿ; ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಒಂದೇ ತಿಂಗಳಲ್ಲಿ ಮಹದಾಯಿ ನೀರು ಹರಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ ಈವರೆಗೂ ಮಹದಾಯಿ ನೀರು ಹರಿಸಲು ಬಿಎಸ್‌ವೈಗೆ ಸಾಧ್ಯವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ‌ಹುಬ್ಬಳ್ಳಿಯಲ್ಲಿ‌ ನಡೆದ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ‌ ಅವರು, ಮಹದಾಯಿ ಕುರಿತು ಗೋವಾದವರು ಸುಪ್ರೀಂ‌ ಕೋರ್ಟ್​ಗೆ ಮರುಪರಿಶೀಲನಾ ಅರ್ಜಿ  ಹಾಕಿದರು. ಅದನ್ನು ವಾಪಸ್ ತೆಗೆಸುವ ಪ್ರಯತ್ನವನ್ನು ಬಿಜೆಪಿ ಮಾಡಲಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕೆಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೈ ಬಿಟ್ಟಿದೆ‌. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ  ಮುಗಿಲು‌ ಮುಟ್ಟಿದೆ. ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎಂದು ಪ್ರಧಾನಿ ಮೋದಿ ಹೇಳ್ತಾರೆ. ಆದರೆ ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ. ಆರ್‌ಟಿಜಿಎಸ್ ಮೂಲಕ ಯಡಿಯೂರಪ್ಪ ಅವರ ಮಗ 7.40 ಕೋಟಿ ರೂ. ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

‌ಬಿಜೆಪಿಯವರು ಮಾತ್ರ ಹಿಂದೂಗಳಾ, ನಾವೇನು ಹಿಂದೂಗಳಲ್ವಾ? 1964 ರಲ್ಲಿ ಪಂಡಿತ್ ನೆಹರು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರು. ಈಗ ಬಿಜೆಪಿಯವರು ಗೋ ಹತ್ಯೆ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ತಾವೇ ಬೀಫ್ ರಫ್ತಿಗೆ ಅವಕಾಶ ಕೊಟ್ಟಿದ್ದಾರೆ. ಗೋ ಮಾತೆ ಅಂತಾ ಸುಳ್ಳು ಹೇಳುತ್ತಾ ಓಡಾಡ್ತಾರೆ ಎಂದು ಸಿದ್ದರಾಮಯ್ಯ ಅವರು ಕಿಡಿಕಾರಿದರು.

ಇದನ್ನು ಓದಿ: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ-ಯೋಗೇಶ್ವರ್ ವಾಕ್ಸಮರ; ವಸೂಲಿ ದಂಧೆಯದ್ದೇ ಚರ್ಚೆ!

ಈ ವರ್ಷ ಹೋರಾಟದ ವರ್ಷ; ಡಿ.ಕೆ‌. ಶಿವಕುಮಾರ್

ಈ ವರ್ಷವನ್ನು ಹೋರಾಟದ ವರ್ಷ ಎಂದು ತೀರ್ಮಾನಿಸಿದ್ದೇವೆ. ಜನರ ಮಧ್ಯೆ ಇದ್ದು ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಹೇಳಿದ್ದಾರೆ. ‌ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿನ ಅನರ್ಹ ನಾಯಕರನ್ನು ಬದಲಾವಣೆ ಮಾಡುವ ಬಗ್ಗೆ ಚಿಂತಿಸುತ್ತಿದ್ದೇವೆ. ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಇನ್ನು ಮುಂದೆ ಯಾವುದೇ ಶಾಸಕರ ಮನೆಯಲ್ಲಿ ಪಕ್ಷದ ಸಭೆ ಆಗಬಾರದು. ಎಲ್ಲಾ ಕಡೆ ಸ್ವಂತ ಕಚೇರಿ ತೆರೆಯಲಾಗುವುದು. ಶಾಸಕರಾಗಲು ಬಯಸುವವರು ಮೊದಲು ಜನಸೇವೆ ಪ್ರಾರಂಭಿಸಲಿ. ಗುಂಪುಗಾರಿಕೆ ಬಿಟ್ಟು ಪಕ್ಷ ಸಂಘಟನೆಗೆ ಶ್ರಮಿಸಲಿ ಎಂದು ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರ ಬಂಡ ಸರ್ಕಾರ. ಏನೇ ಹೋರಾಟ ಮಾಡಿದರೂ ಸ್ಪಂದಿಸುತ್ತಿಲ್ಲ. ರೈತರ ಹೋರಾಟದಲ್ಲಿ ರಾಜಕೀಯ ತರಬಾರದು ಅಂತಾ ಸುಮ್ಮನಿದ್ದೆವು. ಈಗ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ. ನಮ್ಮ ಮುಖಂಡರು ಸ್ವಲ್ಪ ಡಲ್ ಆಗಿದ್ದು, ಈಗ ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಬ್ಬರ ಕಾರ್ಯವೈಖರಿ ಬಗ್ಗೆ ಪಟ್ಟಿ ತರಿಸಿ ಕೆತ್ತನೆ ಕೆಲಸ ಪ್ರಾರಂಭಿಸಿದ್ದೇನೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ. ಪಕ್ಷದಲ್ಲಿ ಯಾರೂ ದೊಡ್ಡವರಲ್ಲ. ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಕಟ್ಟಲು ದುಡಿಯುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಮೊದಲ ಗುರಿ. ಹೀಗಾಗಿ ಪಕ್ಷದಲ್ಲಿ ವಿವಿಧ ಬ್ಲಾಕ್‌ಗಳನ್ನು ಮಾಡಿ ಸಂಘಟನೆ ಮಾಡಲಾಗುತ್ತಿದೆ. ಇನ್ನು ಮುಂದೆ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಗಣನೀಯ ಬದಲಾವಣೆ ಆಗಲಿದೆ ಎಂದು ಡಿಕೆಶಿ ತಿಳಿಸಿದರು.
Published by: HR Ramesh
First published: January 11, 2021, 9:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories