Sindagi By Election: ಸಿಂದಗಿ ಗೆಲ್ಲೋಕೆ ಮೂರು ಪಕ್ಷಗಳಿಂದ ರಣತಂತ್ರ, ಏನು ಲೆಕ್ಕಾಚಾರ? ಗೆಲ್ಲುವ ಕುದುರೆ ಯಾವುದು?

Candidates for Sindagi By election: ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೂರು ಪಕ್ಷಗಳು ಗೆಲ್ಲೋಕೆ‌ ಬೇಕಾದ ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾರೆ.ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಆಯ್ಕೆಯನ್ನೂ ಮಾಡಿದ್ದಾರೆ. ಆದ್ರೆ ಹೈಕಮಾಂಡ್ ಹೆಸರುಗಳನ್ನ ಫೈನಲ್ ಮಾಡಬೇಕಿದೆ.

ಸಿಎಂ ಬೊಮ್ಮಾಯಿ-ಡಿಕೆಶಿ-ಎಚ್ಡಿಕೆ

ಸಿಎಂ ಬೊಮ್ಮಾಯಿ-ಡಿಕೆಶಿ-ಎಚ್ಡಿಕೆ

  • Share this:
By Election 2021: ಸಿಂದಗಿ‌ ಹಾಗೂ ಹಾನಗಲ್ (Hangal)ವಿಧಾನಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್‌ ಘೋಷಣೆಯಾಗಿದೆ. ಮೂರು ಪಕ್ಷಗಳ ನಾಯಕರು ಎರಡೂ ಕ್ಷೇತ್ರಗಳನ್ನ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಗೆಲ್ಲುವ ಕುದುರೆಗಳ ಹುಡುಕಾಟ ಹಾಗೂ ಚುನಾವಣೆ ರಣತಂತ್ರಗಳೂ ಜೋರಾಗಿವೆ. ಸಿಂದಗಿಯಲ್ಲಿ ಯಾವ ಪಕ್ಷದಿಂದ ಯಾರು ಕಣಕ್ಕಿಳಿಯಲಿದ್ದಾರೆ..ಮೂರು ಪಕ್ಷಗಳ ನಾಯಕರ‌ ಲೆಕ್ಕಾಚಾರವೇನು..? ಗೆಲ್ಲುವುದಕ್ಕೆ ನಡೆಸಿರುವ ಪ್ಲಾನ್ ಏನು..? ಸಿಂದಗಿ(Sindagi) ಕುರಿತು ವಿಶೇಷ ವರದಿ ಇಲ್ಲಿದೆ... ಜೆಡಿಎಸ್ ವಿಧಾನ ಸಭಾ ಸದಸ್ಯರಾಗಿದ್ದ ಎಂ.ಸಿ.ಮನಗೂಳಿಯವರ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚು‌ನಾವಣೆ ಎದುರಾಗಿದೆ..ಅಕ್ಟೋಬರ್ 30 ರಂದು ಚುನಾವಣೆಗೆ ದಿನಾಂಕವೂ‌ ಘೋಷಣೆಯಾಗಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್(Congress), ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಚುನಾವಣೆ ಗೆಲ್ಲೋಕೆ ಭರ್ಜರಿಯಾಗಿಯೇ ಸಿದ್ಧತೆ ನಡೆಸಿದ್ದಾರೆ.

ಜಾತಿವಾರು, ಸಮುದಾಯವಾರು ಯಾರನ್ನ ನಿಲ್ಲಿಸಿದ್ರೆ ಅನುಕೂಲವಾಗಬಹುದೆಂಬ ಲೆಕ್ಕಾಚಾರವನ್ನು‌ ಹಾಕ್ತಿದ್ದಾರೆ. ಗೆಲ್ಲುವ ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಹೌದು, ಹಲವು‌ ಲೆಕ್ಕಾಚಾರ ಹಾಗೂ ಜಾತಿ ಸಮೀಕರಣವನ್ನಿಟ್ಟುಕೊಂಡು ರಾಜಕೀಯ ನಾಯಕರು ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸೋಕೆ ಹೊರಟಿದ್ದಾರೆ. ಯಾವ ಸಮುದಾಯದ ನಾಯಕನನ್ನ ಇಳಿಸಿದ್ರೆ ನಾವು ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರ ಹಾಕ್ತಿದ್ದಾರೆ.

ಆಡಳಿತಾರೂಢ ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಸಿಎಂ ಬೊಮ್ಮಾಯಿಗೂ ಇದು ಮೊದಲ ಬೈ ಎಲೆಕ್ಷನ್. ಸಿಂದಗಿ ಗೆದ್ದು ತಮ್ಮ ಇಮೇಜ್ ಬಿಲ್ಡಪ್ ಮಾಡಿಕೊಳ್ಳಬೇಕಿದೆ. ಹಾಗೆಯೇ ಡಿಕೆಶಿ, ಸಿದ್ದು ಪಾಲಿಗೂ ಇದು ಮಹತ್ವದ ಚುನಾವಣೆ. ಸಿಂದಗಿಯಲ್ಲಿ‌ ಹೆಚ್ಚಿನ ಮತಗಳ ಅಂತರದಿಂದ ಗೆಲ್ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇತ್ತ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ಕುಮಾರಸ್ವಾಮಿ ಕ್ಷೇತ್ರವನ್ನ ನಾವೇ ಉಳಿಸಿಕೊಳ್ಬೇಕೆಂಬ ಪ್ರಯತ್ನ ನಡೆಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಲೆಕ್ಕಾಚಾರ ಇದೇ ಆಗಿದೆ.

ಇದನ್ನೂ ಓದಿ: Sindagi By Election: ಸಿಂದಗಿ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ; ಪಕ್ಷದ ನಾಯಕರ ವಿರುದ್ಧ ಸಂಸದ ಜಿಗಜಿಣಗಿ ಬೇಸರ!

ಯಾವ ಪಕ್ಷದಿಂದ ಯಾರಾಗ್ತಾರೆ ಅಭ್ಯರ್ಥಿ..?

ಕಾಂಗ್ರೆಸ್- ಅಶೋಕ್ ಮನಗೂಳಿ ( ಎಂ.ಸಿ.ಮನಗೂಳಿ ಪುತ್ರ)

ಬಿಜೆಪಿ- ರಮೇಶ್ ಬೂಸನೂರು (ಪರಾಜಿತ ಅಭ್ಯರ್ಥಿ)

ಜೆಡಿಎಸ್- ರವಿಕಾಂತಗೌಡ ಪಾಟೀಲ್( ಮಾಜಿ ಶಾಸಕ)

ಕೆಆರ್ ಎಸ್ ಪಾರ್ಟಿ- ಡಾ.ಸುನೀಲ್‌ಕುಮಾರ್ ಹೆಬ್ಬಿ

ಯಾವುದೇ ಕ್ಷೇತ್ರದಲ್ಲಿ ಯಾವುದೇ ಪಕ್ಷ ಚುನಾವಣೆ ಗೆಲ್ಲಬೇಕಾದ್ರೆ ಆ ಕ್ಷೇತ್ರದಲ್ಲಿನ ಜಾತಿ ಸಮೀಕರಣ ಮುಖ್ಯವಾಗಲಿದೆ . ಸಿಂದಗಿ ಯಲ್ಲಿ ಜಾತಿವಾರು ಮತ ಹೇಗಿದೆ ನೋಡಿ ಜಾತಿವಾರು ಲೆಕ್ಕಾಚಾರವೇನು, ಇದು ಅಭ್ಯರ್ಥಿಗಳಿಗೆ ಯಾವ ರೀತಿ ಅನುಕೂಲವಾಗುತ್ತೆ ಎನ್ನುವ ಆಲೋಚನೆಯನ್ನು ಎಲ್ಲಾ ಪಕ್ಷಗಳೂ ಮಾಡಿವೆ.

ಸಿಂದಗಿಯ ಜಾತಿ ಜನಸಂಖ್ಯೆ ಹೀಗಿದೆ: 

ಕುರುಬ ಸಮುದಾಯ - 33,000

ಮುಸ್ಲಿಂ ಸಮುದಾಯ -31,500

ಗಾಣಿಗ ಲಿಂಗಾಯತ- 25,800

ದಲಿತ ಸಮುದಾಯ-26,000

ಪರಿಶಿಷ್ಟ ಉಪ ಪಂಗಡಗಳು-5,000

ವಾಲ್ಮೀಕಿ,ತಳವಾರ- 16,800

ಪಂಚಮಸಾಲಿ ಲಿಂಗಾಯತ- 17,000

ಬಣಜಿಗ ಲಿಂಗಾಯತ- 9500

ಇತರೆ ಸಮುದಾಯ- 45,000

ಒಟ್ನಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೂರು ಪಕ್ಷಗಳು ಗೆಲ್ಲೋಕೆ‌ ಬೇಕಾದ ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾರೆ.ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಆಯ್ಕೆಯನ್ನೂ ಮಾಡಿದ್ದಾರೆ. ಆದ್ರೆ ಹೈಕಮಾಂಡ್ ಹೆಸರುಗಳನ್ನ ಫೈನಲ್ ಮಾಡಬೇಕಿದೆ. ಸದ್ಯ ಕಾಂಗ್ರೆಸ್ ಮಾತ್ರ  ತನ್ನ ಅಭ್ಯರ್ಥಿಯನ್ನ ಬಹುತೇಕ ಅಂತಿಮಗೊಳ್ಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿ ಇದೆ.
Published by:Soumya KN
First published: