ಹಾಸನ; ಚಿಕ್ಕಮಗಳೂರಿನಲ್ಲಿ ನಾವು ಸಭೆ ಸೇರಿದ್ದೇವೆ ಅಂತಾ ಸೋಮಶೇಖರ್ ಹೇಳಿದರೆ ನಾನು ಸ್ಪಷ್ಟೀಕರಣ ಕೊಡಬೇಕಾ? ಸ್ವತಃ ನಾನೇ ಹೇಳುತ್ತಿದ್ದೇನೆ. ನಾವು ಸಭೆ ಸೇರಿಲ್ಲ. ಮಾಧ್ಯಮದವರು ಅರ್ಥ ಮಾಡಿಕೊಳ್ಳಿ ಎಂದು ಸಚಿವ ಜಗದೀಶ್ ಶೆಟ್ಟರ್ ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಚಿಕ್ಕಮಗಳೂರಿನಲ್ಲಿ ನಾವು ಸಭೆ ಮಾಡಿದ್ದೇವೆ ಎಂದು ಯಾರು ಹೇಳಿದ್ದು. ನೀವು ಬಂದಿದ್ರಾ ಅಲ್ಲಿ. ಸೋಮಶೇಖರ್ ಒಪ್ಪಿದ್ರೆ ನಾನು ಸಭೆ ಮಾಡಿದ ಹಾಗ ಎಂದು ಮರು ಪ್ರಶ್ನೆ ಮಾಡಿದ್ದಾರೆ. ನಾನು ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಪ್ರವಾಸ ಮಾಡಿ ಹಾಸನಕ್ಕೆ ಬಂದಿದ್ದೇನೆ. ಈಗ ಮಾಧ್ಯಮದಲ್ಲಿ ಸೃಷ್ಟಿ ಮಾಡಿದ್ದಕ್ಕೆ ಸ್ಪಷ್ಟೀಕರಣ ಕೊಡುವ ಪರಿಸ್ಥಿತಿ ಬಂದಿದೆ. ಇದು ಬಹಳ ಗಂಭೀರವಾದ ಸಮಸ್ಯೆ. ಇದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾವು ಅಲ್ಲಿ ಹೋದಾಗ ಮಂತ್ರಿಗಳು ಬರ್ತಾರೆ. ಮೀಟಿಂಗ್ ಮಾಡ್ತಾರೆ. ಅವರು ಅಲ್ಲಿ ಅಡ್ಡಾಡಿದಾಗ ಅದನ್ನು ಸಭೆ ಅನ್ನೋದಾದ್ರೆ ಹೇಗೆ. ಅಶೋಕ್ ನಮ್ಮನ್ನು ಭೇಟಿ ಕೂಡ ಆಗಿಲ್ಲ, ಯಾವ ಸಭೆಯೂ ಆಗಿಲ್ಲ. ನನಗೆ ಯಾವ ಬರ್ತ್ ಡೇ ಏನೂ ಗೊತ್ತಿಲ್ಲ. ನನಗೆ ಏನು ಅರ್ಥ ಆಗುತ್ತಿಲ್ಲ. ಎಲ್ಲೂ ಅಡ್ಡಾಡದೇ ಮನೇಲಿ ಇರಬೇಕಾ ಎಂದು ಸಚಿವ ಜಗದೀಶ್ ಶೆಟ್ಟರ್ ಮಾಧ್ಯಮದವರ ವಿರುದ್ಧವೇ ಕಿಡಿಕಾರಿದ್ದಾರೆ.
ಇಂದು ಹಾಸನ ನಗರದ ಹೊರವಲಯದಲ್ಲಿರುವ ಹಿಮತ್ ಸಿಂಕಾ ಕೈಗಾರಿಕೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿ ಉತ್ಪಾದನೆಯಾಗುವ ಅಂತಾರಾಷ್ಟ್ರೀಯ ಬ್ರಾಂಡ್ ಗಳ ಟವೆಲ್, ಬೆಡ್ ಶೀಟ್ ಗಳನ್ನು ಸಚಿವರು ಪರಿಶೀಲಿಸಿದರು. ಅಲ್ಲದೆ ಕೈಗಾರಿಕೆಯಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ಸಹ ಅವರು ಪರಿಶೀಲಿಸಿ ಮಾಹಿತಿ ಪಡೆದರು.
ಇದನ್ನು ಓದಿ: ರಾಜ್ಯದಲ್ಲಿ 18 ಸಾವಿರ ಗಡಿ ದಾಟಿದ ಕೊರೋನಾ ಪ್ರಕರಣ; ಬೆಂಗಳೂರಿನಲ್ಲಿ ಶತಕ ದಾಖಲಿಸಿದ ಸಾವಿನ ಸಂಖ್ಯೆ
ಶಾಸಕರಾದ ಪ್ರೀತಂ ಜೆ ಗೌಡ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ , ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರ್ , ಜಿಲ್ಲಾಧಿಕಾರಿ ಅರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ