HOME » NEWS » District » SHOT BY ELECTRONIC CITY POLICE ON FOOT OF INFAMOUS THIEF MAK

ಕುಖ್ಯಾತ ಕಳ್ಳನ ಕಾಲಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಗುಂಡೇಟು ಬಂಧನ!

ಸಿಕ್ಕ ಸಿಕ್ಕ ಕಡೆ ಕದ್ದು ಕದ್ದು ಕಾಲ್ಕಿಳ್ತಿದ್ದ ಕುಖ್ಯಾತ ಆರೋಪಿ ಕಳ್ಳ ಕೃಷ್ಣನಿಗೆ ಇದೀಗ ಗುಂಡು ಹೊಡೆದು ಬಂಧಿಸಿರುವ ಪೊಲೀಸರು ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಮತ್ತಷ್ಟು ಜನ ಕ್ರಮಿನಲ್​ಗಳನ್ನು ಬಗ್ಗು ಬಡಿಯಲು ಮುಂದಾಗಿದ್ದರೆ ಎನ್ನಲಾಗಿದ್ದು, ಆರೋಪಿಗಳಲ್ಲಿ ಡವ ಡವ ಶುರುವಾಗಿದೆ.

news18-kannada
Updated:September 25, 2020, 7:15 AM IST
ಕುಖ್ಯಾತ ಕಳ್ಳನ ಕಾಲಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಗುಂಡೇಟು ಬಂಧನ!
ಪ್ರಾತಿನಿಧಿಕ ಚಿತ್ರ
  • Share this:
ಆನೇಕಲ್ : ಆತ ಕುಖ್ಯಾತ ಕಳ್ಳ. ರಾಬರಿ ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌. ಹಲವು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗ್ತಿದ್ದ. ಆದ್ರೆ ಆತನಿಗೆ ಗ್ರಹಚಾರ ಕೆಟ್ಟಿತ್ತು. ಸೆರೆ ಹಿಡಿಯಲು ಹೋದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ. ಹೌದು ರಾಬರಿ, ದರೋಡೆ ಮತ್ತು ಕಳ್ಳತನ ಸೇರಿದಂತೆ ಅನೇಕ ಅಪರಾಧ ಕೃತ್ಯಗಳಲ್ಲಿ ಕುಖ್ಯಾತಿ ಪಡೆದಿದ್ದ ಕೃಷ್ಣ ಅಲಿಯಾಸ್ ಕಳ್ಳಕೃಷ್ಣ ಎಂಬಾತನ ಕಾಲಿಗೆ ನಿನ್ನೆ ತಡರಾತ್ರಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ವಿವರ್ಸ್ ಕಾಲೋನಿ ವಾಸಿಯಾಗಿರುವ ಕೃಷ್ಣ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌ ಕ್ರಿಮಿನಲ್. ಹುಳಿಮಾವು, ಬನ್ನೇರುಘಟ್ಟ, ಬೇಗೂರು, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ  ವಿವಿಧ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ.  ಆದre ನಿನ್ನೆ ಕಳ್ಳ‌ಕೃಷ್ಣನ ಗ್ರಹಚಾರ ಕೆಟ್ಟಿದ್ದು, ಬಲಗಾಲಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಅಂದಹಾಗೆ ರಾಬರಿ, ಕಿಡ್ನಾಪ್, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೃಷ್ಣ ನಿನ್ನೆ ತಡರಾತ್ರಿ  ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರ ಗ್ರಾಮದ ಸಮೀಪ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎಲೆಕ್ಟ್ರಾನಿಕ್ ಸಿಟಿ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಮತ್ತು ತಂಡ ಆರೋಪಿ ಕೃಷ್ಣನನ್ನು ವಶಕ್ಕೆ ಪಡೆಯಲು ಮುಂದಾಗುತ್ತಾರೆ. ಈ ವೇಳೆ ಅಲರ್ಟ್ ಆದ ಕೃಷ್ಣ ಪೊಲೀಸ್ ಸಿಬ್ಬಂದಿ ಮೇಲೆಯೇ ಕಲ್ಲುಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಇದನ್ನೂ ಓದಿ : ದೆಹಲಿ ಗಲಭೆ ಪ್ರಕರಣ; ಉಮರ್​ ಖಾಲಿದ್​ಗೆ ಅಕ್ಟೋಬರ್​ 22ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿದ ಕೋರ್ಟ್​

ಈ ವೇಳೆ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಶರಣಾಗುವಂತೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಲಾಗುತ್ತದೆ. ವಾರ್ನಿಂಗ್ ಸಹ ಲೆಕ್ಕಿಸದೆ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಫೈರಿಂಗ್ ಮಾಡಲಾಗುತ್ತದೆ. ಸ್ಥಳದಲ್ಲಿಯೇ ಕುಸಿದು ಬಿದ್ದ ಆರೋಪಿ ಕೃಷ್ಣನನ್ನು ಮತ್ತು ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ನಗರದ ಬೋರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಒಟ್ಟಲ್ಲಿ ಸಿಕ್ಕ ಸಿಕ್ಕ ಕಡೆ ಕದ್ದು ಕದ್ದು ಕಾಲ್ಕಿಳ್ತಿದ್ದ ಕುಖ್ಯಾತ ಆರೋಪಿ ಕಳ್ಳ ಕೃಷ್ಣನಿಗೆ ಇದೀಗ ಗುಂಡು ಹೊಡೆದು ಬಂಧಿಸಿರುವ ಪೊಲೀಸರು ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಮತ್ತಷ್ಟು ಜನ ಕ್ರಮಿನಲ್​ಗಳನ್ನು ಬಗ್ಗು ಬಡಿಯಲು ಮುಂದಾಗಿದ್ದರೆ ಎನ್ನಲಾಗಿದ್ದು, ಆರೋಪಿಗಳಲ್ಲಿ ಡವ ಡವ ಶುರುವಾಗಿದೆ.
Published by: MAshok Kumar
First published: September 25, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories