Marriage: ಕೈವಾರದಲ್ಲಿ ಅಪರೂಪದ ಮದುವೆ: ವರ ಮೂರು ಅಡಿ, ವಧು ಎರಡು ಅಡಿ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಈ ವಿಶೇಷ ಮದುವೆ ನಡೆದಿದೆ. ಭಾನುವಾರ ಈ ಮದುವೆ ನಡೆದಿದ್ದು, ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ವಿಷ್ಣು ಮತ್ತು ಜ್ಯೋತಿ ವೈವಾಹಿಕ ಕಾಲಿಟ್ಟ ಜೋಡಿ.

ಅಪರೂಪದ ಜೋಡಿ

ಅಪರೂಪದ ಜೋಡಿ

  • Share this:
ಮದುವೆ (Marriage) ಸ್ವರ್ಗದಲ್ಲಿ ನಿಶ್ಚಿಯ ಆಗಿರುತ್ತೆ ಅಂತ ಹೇಳ್ತಾರೆ. ಇಂದು ಯುವ ಜನತೆ ತಾವು ವರಿಸುವ ಸಂಗಾತಿ ಸಾಕಷ್ಟು ಹುಡುಕಾಟ ನಡೆಸುತ್ತಾರೆ. ಮದುವೆ ಆಗುವ ಹುಡುಗ ಅಥವಾ ಹುಡುಗನ ಬಗ್ಗೆ ಕನಸಿನ ಗೋಪುರವನ್ನೇ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ತಮ್ಮ ವೃತ್ತಿಗೆ ಅನುಗುಣವಾಗಿರುವ ಸಂಗಾತಿ (Life Partner) ಹುಡುಕುತ್ತಾರೆ, ಶಿಕ್ಷಕ- ಶಿಕ್ಷಕಿ, ವೈದ್ಯ-ವೈದ್ಯೆ ಹೀಗೆ ತಮ್ಮದೇ ವೃತ್ತಿಯಾದ್ರೆ (Profession) ಜೀವನ (life) ಚೆನ್ನಾಗಿರುತ್ತೆ ಎಂದು ಅಂತ ತಿಳಿದುಕೊಳ್ಳುತ್ತಾರೆ.  ಕೆಲವರು ತಮ್ಮ ಡ್ರೀಮ್ ಬಾಯ್ (Dream Boy) ಬಗ್ಗೆ ಹೇಳಿಕೊಳ್ಳುತ್ತಾರೆ. ಒಂದಿಷ್ಟೂ ಜನ ಇಲ್ಲ. ಇನ್ನು ಮದುವೆಯೂ ಯಾವ ರೀತಿ ನಡೆಯಬೇಕು ಎಂಬುದರ ಬಗ್ಗೆಯೂ ಪ್ಲಾನ್ ಮಾಡಿಕೊಂಡಿರುತ್ತಾರೆ. ಇದೀಗ ಕುಬ್ಜ ಜೋಡಿಯೊಂದು (Couple) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಫೋಟೋಗಳು (Marriage Photos) ವೈರಲ್ ಆಗುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಈ ವಿಶೇಷ ಮದುವೆ ನಡೆದಿದೆ. ಭಾನುವಾರ ಈ ಮದುವೆ ನಡೆದಿದ್ದು, ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ವಿಷ್ಣು ಮತ್ತು ಜ್ಯೋತಿ ವೈವಾಹಿಕ ಕಾಲಿಟ್ಟ ಜೋಡಿ.

ಇಬ್ಬರೂ ಪದವೀಧರರು

ಮೂರು ಅಡಿಯ 28 ವರ್ಷದ ವಿಷ್ಣು ಬೆಂಗಳೂರಿನ ನಿವಾಸಿ, ಎರಡು ಅಡಿಯ ಜ್ಯೋತಿ ಕೋಲಾರ ಜಿಲ್ಲೆಯವರು. ಇಬ್ಬರು ಪದವೀಧರರಾಗಿದ್ದು, ಉದ್ಯೋಗದಲ್ಲಿದ್ದಾರೆ. ವಿಷ್ಣು ಮತ್ತು ಜ್ಯೋತಿ ಕುಟುಂಬಸ್ಥರು ತಮ್ಮ ಮಕ್ಜಳಿಗೆ ಮದುವೆ ಮಾಡಲು ಸಾಕಷ್ಟು ಪ್ರಯತ್ನಿಸಿದ್ದರು. ಕುಬ್ಜ ಇರೋ ಕಾರಣ ಮದುವೆಯೇ ಆಗುತ್ತಿರಲಿಲ್ಲ.

ಇದನ್ನೂ ಓದಿ:  Palmistry,: ನಿಮ್ಮ ಅಂಗೈನಲ್ಲಿ ಈ ರೀತಿ ರೇಖೆ ಇದ್ದರೆ ಅವರ ಮದುವೆ ಜೀವನ​ ಸೂಪರ್​ ಆಗಿರತ್ತೆ

ಇಬ್ಬರು ಕುಬ್ಜ ಇರೋ ಮಾಹಿತಿ ಎರಡೂ ಕುಟುಂಬಕ್ಕೆ ಲಭ್ಯವಾಗಿತ್ತು, ಎರಡೂ ಕುಟುಂಬಗಳು ಸಂಪರ್ಕಿಸಿ ಮದುವೆ ನಿಶ್ಚಯ ಮಾಡಿದ್ದರು. ಭಾನುವಾರ ಮದುವೆ ನಡೆದಿದ್ದು, ಕೈವಾರಕ್ಕೆ ಆಗಮಿಸಿದ್ದ ಭಕ್ತರು ವಿಶೇಷ ಜೋಡಿಯ ಮದುವೆಗೆ ಆಗಮಿಸಿದ್ದರು.

ವಧುವಿನ ಲೆಹೆಂಗಾ ಸರಿಪಡಿಸಿದ ವರನ ವಿಡಿಯೋ ವೈರಲ್

ಕೆಲ ದಿನಗಳ ಹಿಂದೆ ವಧುವಿನ ಲೆಹೆಂಹಾ ಸರಿಪಡಿಸಿದ ವರನ ವಿಡಿಯೋ ವೈರಲ್ ಆಗಿತ್ತು. ಉತ್ತರ ಭಾರತದಲ್ಲಿ (North India) ವಧು (Birde) ಮದುವೆ ದಿನ ಡಿಸೈನರ್ ಲೆಹೆಂಗಾ (Designer Lehenga) ಧರಿಸಿ ಮಿಂಚಬೇಕೆಂಬ ಕನಸು ಕಂಡಿರುತ್ತಾರೆ. ಅದಕ್ಕಾಗಿಯೇ ಒಂದಿಷ್ಟು ಹಣ ಸೇವ್ (Money) ಮಾಡಿಕೊಂಡು ತಮ್ಮ ಶಕ್ತಿಗನುಸಾರವಾಗಿ ಬಟ್ಟೆ ಧರಿಸುತ್ತಾರೆ.

ಕೆಲವೊಮ್ಮೆ ಈ ಡಿಸೈನರ್ ತೊಡುಗೆಗಳು ಸುಮಾರು 30 ರಿಂದ 40 ಕೆಜಿ ಸಹ ತೂಕ ಹೊಂದಿರುತ್ತಾರೆ. ದಿಢೀರ್ ಅಂತ ಒಮ್ಮೇ ಈ ತರಹದ ಬಟ್ಟೆ ಧರಿಸಿದಾಗ ನಡೆಯುವ ವೇಳೆ ಅಡಚಣೆ ಉಂಟಾಗುತ್ತದೆ.

ಇದನ್ನೂ ಓದಿ:  Indian Marriage Customs: ಭಾರತೀಯ ಮದುವೆ ಸಂಪ್ರದಾಯಗಳಲ್ಲಿ ಅಪ್ರಸ್ತುತವಾದ-ನಿಷೇಧಿಸಲೇಬೇಕಾದ 10 ಮದುವೆ ಆಚರಣೆಗಳು!

ಸೋಶಿಯಲ್ ಮೀಡಿಯಾದಲ್ಲಿ (Social Media) ವಿಡಿಯೋವೊಂದು ವೈರಲ್ (Viral Video) ಆಗಿದೆ. ಇದರಲ್ಲಿ ವಧು ವೇದಿಕೆಯ ಮೇಲೆ ಬರುವಾಗ ಲೆಹೆಂಗಾ ಕಾಲಡಿ ಸಿಲುಕಿ ತೊಡಕಾಗಿತ್ತು. ಇದನ್ನು ಗಮನಿಸಿದ ವರ, ಲೆಹೆಂಗಾ ಸರಿಪಡಿಸಿ ವಧುವನ್ನು ಮೇಲೆ ಕರೆದುಕೊಂಡು ಬಂದಿದ್ದಾನೆ. ವಧು ಜೊತೆಯಲ್ಲಿದ್ದ ಕೆಲ ಯುವತಿಯರು ಸಹ ಸಹಾಯ ಮಾಡಿದ್ದಾರೆ.

ಮಹಿಳೆಯರ ಮನ ಗೆದ್ದ ವಿಡಿಯೋ

ಮದುವೆ ದಿನವೇ ಹುಡುಗ ತನ್ನಾಕೆಗೆ ಸಹಾಯ ಮಾಡಿದ ವಿಡಿಯೋ ಮಹಿಳೆಯರ (Women) ಮನ ಗೆದ್ದಿದೆ. ಮದುವೆಯಲ್ಲಿ ಅಷ್ಟು ಜನರ ಮುಂದೆ ವರ ತೋರಿದ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.ಇನ್ನು ಕೆಲ ಮಹಿಳೆಯರು ವರ ಅಂದ್ರೆ ಹೀಗೆ ಇರಬೇಕು ಎಂದು ಕಮೆಂಟ್ ಮಾಡುವ ಮೂಲಕ ತಮ್ಮಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ
Published by:Mahmadrafik K
First published: