ಹುಬ್ಬಳ್ಳಿ; ಕೊರೋನಾ ಎರಡನೆಯ ಅಬ್ಬರ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ನೈಟ್ ಕರ್ಫ್ಯೂ ಬೆನ್ನ ಹಿಂದೆಯೇ ವಾಣಿಜ್ಯ ಮಳಿಗೆಗಳಿಗೆ ಶಾಕ್ ನೀಡಿದ್ದಾರೆ. ಬೆಳಿಗ್ಗೆಯಿಂದಲೇ ಪೊಲೀಸರು ಅಂಗಡಿ ಮುಂಗಟ್ಟು ಬಂದ್ ಮಾಡಿಸ್ತಿದಾರೆ. ಮೇ 4 ರವರೆಗೂ ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೆಡಿಕಲ್ ಶಾಪ್, ಕಿರಾಣಿ ಅಂಗಡಿ, ಹಣ್ಣು, ಹಾಲು, ತರಕಾರಿ, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗೆ ಪೂರಕವಾದ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಹುಬ್ಬಳ್ಳಿಯ ಮರಾಠ ಗಲ್ಲಿ, ದರ್ಗದ ಬೈಲು ಮತ್ತಿತರ ಕಡೆ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಬೇರೆ ಅಂಗಡಿ ತೆರೆದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ರಾತ್ರಿ ಕರ್ಫ್ಯೂ ಬೆನ್ನ ಹಿಂದೆಯೇ ಅಂಗಡಿ ಮುಚ್ಚಿಸಿ ಶಾಕ್ ನೀಡಿದ ಪೊಲೀಸರ ಕ್ರಮಕ್ಕೆ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂಗೆ ನಾವು ಸಹಕಾರ ನೀಡುತ್ತೇವೆ. ಆದರೆ ಈಗ ಏಕಾಏಕಿ ಅಂಗಡಿಗಳನ್ನು ಮುಚ್ಚಿ ಎಂದರೆ ಹೇಗೆ ಎಂದು ವರ್ತಕರು ಪ್ರಶ್ನಿಸಿದ್ದಾರೆ. ಬೇರೆ ಬೇರೆ ಊರುಗಳಿಂದ ಜನ ಖರೀದಿಗೆ ಬಂದಿದ್ದಾರೆ. ಬಂದವರೆಲ್ಲರೂ ನಿರಾಸೆಯಿಂದ ವಾಪಸ್ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪೊಲೀಸರು ಈ ರೀತಿ ಏಕಾಏಕಿ ನಿರ್ಧಾರ ತೆಗೆದುಕೊಳ್ಳಬಾರದು. ಇದರಿಂದ ವಾಣಿಜ್ಯ ಚಟುವಟಿಕೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಂಗಡಿ ಮುಚ್ಚಿಸುವುದು ಮರು ಪರಿಶೀಲನೆ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ವರ್ತಕರು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯ ವಿವಿಧೆಡೆ ಬೆಳಿಗ್ಗೆಯಿಂದಲೇ ಪೊಲೀಸರು ಅಂಗಡಿಗಳನ್ನು ಮುಚ್ಚಿಸುತ್ತಿದಾರೆ. ಕೊವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಮುಚ್ಚಿಸ್ತಿರೋ ಪೊಲೀಸರು
ಕೆಲ ಅಂಗಡಿಕಾರರಿಗೆ ದಂಡದ ಬಿಸಿ:
ಕೊರೋನಾ ಎರಡನೆಯ ಅಲೆ ಅಬ್ಬರ ಜೋರಾಗಿದ್ದು, ಕೊರೋನಾ ನಿಯಂತ್ರಣಕ್ಕೆ ಹು ಹುಬ್ಬಳ್ಳಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಸೂಚನೆ ನೀಡಿದರೂ ಅಂಗಡಿ ಮುಚ್ಚದವರಿಗೆ ಹುಬ್ಬಳ್ಳಿಯಲ್ಲಿ ದಂಡದ ಬಿಸಿ ಮುಟ್ಟಿಸಲಾಗಿದೆ. ಸರ್ಕಾರದ ಆದೇಶದ ಹೊರತಾಗಿ ತೆಗೆದಿದ್ದ ವಾಣಿಜ್ಯ ಮಳಿಗೆಗಳಿಗೆ ದಂಡ ಹಾಕಲಾಗಿದೆ. ಪ್ರತಿ ಅಂಗಡಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ, ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿ ನಡೆದಿದೆ.
ಗಂಗಾವತಿ ಸಿಲ್ಕ್ ಹೌಸ್ ಮತ್ತಿತರ ಅಂಗಡಿಗಳಿಗೆ ಪಾಲಿಕೆ ಅಧಿಕಾರಿಗಳು ದಂಡದ ರುಚಿ ತೋರಿಸಿದ್ದಾರೆ. ಹುಬ್ಬಳ್ಳಿಯ ಬಹುತೇಕ ಕಡೆ ವಾಣಿಜ್ಯ ಮಳಿಗೆಗಳನ್ನು ಪಾಲಿಕೆ ಸಿಬ್ಬಂದಿಗಳು ಬಂದ್ ಮಾಡಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನ್ವಯ ಅಂಗಡಿಗಳನ್ನು ಬಂದ್ ಮಾಡಿಸಿರೋದಾಗಿ ಪಾಲಿಕೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಪಾಲಿಕೆ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಕೊರೋನಾದಿಂದಾಗಿ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಮಗ ಸಾವು; ಬಿಜೆಪಿ ಉಪಾಧ್ಯಕ್ಷನಿಂದ ವಿಕೃತಿ!
ಹುಬ್ಬಳ್ಳಿ ವಾಣಿಜ್ಯ ನಗರಿಯಾಗಿದೆ. ಬೆಂಗಳೂರಿಗೆ ಹೋಲಿಸಿದಲ್ಲಿ ಹುಬ್ಬಳ್ಳಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆ. ಆದರೆ ಸೋಂಕು ಹೆಚ್ಚಿರೋ ಬೆಂಗಳೂರಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಸೋಂಕು ಕಡಿಮೆ ಇರೋ ಹುಬ್ಬಳ್ಳಿಯಲ್ಲಿ ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಲಾಗಿದೆ ಎಂದು ಮಹಾನಗರ ಪಾಲಿಕೆ ಕಾರ್ಯವೈಖರಿಗೆ ವರ್ತಕರ ಕಿಡಿಕಾರಿದ್ದಾರೆ. ಆದೇಶ ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ವಿರೋಧದ ನಡುವೆಯೇ ಪಾಲಿಕೆಯಿಂದ ಅಂಗಡಿ ಮುಚ್ಚಿಸೋ ಕಾರ್ಯಾಚರಣೆ ಮುಂದುವರಿದಿದೆ.
ಸ್ಥಬ್ಧಗೊಂಡ ವಾಣಿಜ್ಯ ಚಟುವಟಿಕೆ:
ಕೋವಿಡ್ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿಗೆ ಪೊಲೀಸ್ ಇಲಾಖೆ ಮುಂದಾಗಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಥಬ್ಧಗೊಂಡಿದೆ. ಹುಬ್ಬಳ್ಳಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಬಹುತೇಕ ಅಂಗಡಿ ಮುಂಗಟ್ಟು ಬಂದ್ ಆಗಿವೆ. ದುರ್ಗದ ಬೈಲು, ದಾಜಿಬನ್ ಪೇಟ ಮತ್ತಿತರರ ಕಡೆ ವಾಣಿಜ್ಯ ಮಳಿಗೆಗಳು ಬಂದ್ ಆಗಿವೆ. ನಿತ್ಯ ಜನರಿಂದ ಕೂಡಿರುತ್ತಿದ್ದ ಮಾರುಕಟ್ಟೆ ಇಂದು ಬಿಕೋ ಅನ್ತಿದೆ. ಇಂದು ವಹಿವಾಟಿಲ್ಲದೆ ಮಾರುಕಟ್ಟೆ ಸೈಲೆಂಟ್ ಆಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ.
(ವರದಿ - ಶಿವರಾಮ ಅಸುಂಡಿ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ