HOME » NEWS » District » SHIVANURA VILLAGERS IN YADAGIRI REFUSE TO LEAVE COWS FOR FLOOD NMPG SNVS

ಏನೇ ಆದರೂ ಪುಣ್ಯಕೋಟಿಗಳ ಬಿಟ್ಟು ಹೋಗಲ್ಲ; ಪ್ರವಾಹದಲ್ಲೂ ಜಾನುವಾರುಗಳ ಮೇಲೆ ಶಿವನೂರ ಗ್ರಾಮಸ್ಥರಿಗೆ ಕಾಳಜಿ

ಭೀಮಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ಯಾದಗಿರಿಯ ಶಿವನೂರ ಗ್ರಾಮಸ್ಥರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡರೂ ಕೆಲ ಮಹಿಳೆಯರು ಮಾತ್ರ ತಮ್ಮ ಜಾನುವಾರುಗಳನ್ನ ಬಿಟ್ಟುಬರಲು ಒಪ್ಪದೇ ಕಾಳಜಿ ತೋರುತ್ತಿದ್ದಾರೆ.

news18-kannada
Updated:October 19, 2020, 3:34 PM IST
ಏನೇ ಆದರೂ ಪುಣ್ಯಕೋಟಿಗಳ ಬಿಟ್ಟು ಹೋಗಲ್ಲ; ಪ್ರವಾಹದಲ್ಲೂ ಜಾನುವಾರುಗಳ ಮೇಲೆ ಶಿವನೂರ ಗ್ರಾಮಸ್ಥರಿಗೆ ಕಾಳಜಿ
ಯಾದಗಿರಿಯ ಶಿವನೂರ ಗ್ರಾಮಸ್ಥರಿಂದ ಹಸುಗಳ ಆರೈಕೆ
  • Share this:
ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವನೂರ ಗ್ರಾಮವು ಭೀಮಾನದಿ ತೀರದಲ್ಲಿದ್ದು ಭೀಮಾನದಿಗೆ ಈಗಾಗಲೇ ನೀರಿನ ಹರಿವು ಪ್ರಮಾಣ ಹೆಚ್ಚಳವಾಗುತ್ತಿದೆ. ಮುಂಜಾಗ್ರತೆ ವಹಿಸಿ ಜಿಲ್ಲಾಡಳಿತ ಶಿವನೂರ ಗ್ರಾಮಸ್ಥರನ್ನು ಬೆಂಡಬೆಂಬಳಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದೆ. ಆದರೆ, ಕೆಲ ಗ್ರಾಮಸ್ಥರು ಮೂಕ ಪ್ರಾಣಿಗಳನ್ನು ಉರಿನ ಹೊರಭಾಗದ ಏಳು ಬಂಡೆಯ ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಿ ಅವುಗಳ ಪ್ರಾಣದ ಕಾಳಜಿ ತೊರುತ್ತಿದ್ದಾರೆ. ನಾಲ್ಕೈದು ಮಹಿಳೆಯರು ಖುದ್ದು ಹಗಲು ರಾತ್ರಿ ಎನ್ನದೇ ಜಾನುವಾರುಗಳ ಜೊತೆ ಬಂಡೆಯ ಎತ್ತರ ಪ್ರದೇಶದಲ್ಲಿಯೇ ವಾಸವಾಗಿದ್ದಾರೆ. ಆಕಳು, ಕರು, ಎತ್ತುಗಳಿಗೆ ನೀರು, ಮೇವು ಹಾಕಿ ಆರೈಕೆ ಮಾಡುತ್ತಿದ್ದಾರೆ. ಮಳೆ ಬಂದರೂ ತಾಡಪಾಲ್ ಕಟ್ಟಿ ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರಾಣಿ ಪೀತಿ ತೊರುತ್ತಿದ್ದಾರೆ. ಮಹಿಳೆಯರು ಕೂಡ ಮಳೆ ಬಂದಾಗ ತಾಡಪಾಲ್ ಆಶ್ರಯದೊಂದಿಗೆ ಇರುತ್ತಿದ್ದಾರೆ.

ಮೊಸಳೆ ಹೆಬ್ಬಾವು ಭೀತಿ ನಡುವೆಯು ಪ್ರಾಣಿಗಳ ಕಾಳಜಿ: ಭೀಮಾ ನದಿ ತೀರದಲ್ಲಿ ಈಗಾಗಲೇ ಮೊಸಳೆ ಹಾಗೂ ಹೆಬ್ಬಾವುಗಳ ಉಪಟಳ ಹೆಚ್ಚಾಗಿದೆ. ಮೊನ್ನೆ ಗೊಡಿಹಾಳ ಗ್ರಾಮದ ರಸ್ತೆ ಮೇಲೆ ಮೋಸಳೆ ಕಾಣಿಸಿಕೊಂಡಿದ್ದು, ಅದೆ ರೀತಿ ಅರ್ಜುಣಗಿ ರಸ್ತೆ ಮೇಲೆ ಹೆಬ್ಬಾವು ಕಾಣಿಸಿಕೊಂಡಿತ್ತು.ಈ ಘಟನೆ ನಂತರ ಭೀಮಾನದಿ ತೀರದ ಜನ ಆತಂಕಗೊಂಡಿದ್ದಾರೆ.ಆದರೆ, ಶಿವನೂರ ಗ್ರಾಮದ ನಾಲ್ಕೈದು ಮಹಿಳೆಯರು ಮೋಸಳೆ ಹಾಗೂ ಹೆಬ್ಬಾವಿನ ಜೀವಭಯದ‌ ಜೊತೆನೆ ಹಗಲು ರಾತ್ರಿ ಜಾನುವಾರು ಪ್ರಾಣದ ಕಾಳಜಿ ಮೆರೆಯುತ್ತಿದ್ದಾರೆ.

ಇದನ್ನೂ ಓದಿ: ನೆರೆಯ ಬಗ್ಗೆ ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ: ಡಿಸಿಎಂ ಅಶ್ವತ್ಥನಾರಾಯಣ

ಇತ್ತ, ಕಾಳಜಿ ಕೇಂದ್ರದಲ್ಲಿ ಜಿಲ್ಲಾಡಳಿತ ಕೂಡ ಉತ್ತಮವಾಗಿ ಅಡುಗೆಯ ಅನುಕೂಲ ಮಾಡಿ ನಿರಾಶ್ರಿತರ ಹಸಿವು ನಿಗಿಸುವ ಕಾರ್ಯ ಮಾಡುತ್ತಿದೆ. ಕೇವಲ ಜನ ಮಾತ್ರವಲ್ಲ, ಜಾನುವಾರುಗಳ ಹಸಿವು ಕಾಳಜಿಯನ್ನೂ ಜಿಲ್ಲಾಡಳಿತ ಮೆರೆದಿದೆ. ಜಿಲ್ಲಾಡಳೀತದಿಂದ ಶಿವನೂರ ಗ್ರಾಮದ ಜಾನುವಾರುಗಳಿಗೆ ಮೇವು ಪೂರೈಕೆ ಆಗುತ್ತಿರುವುದಕ್ಕೆ ಗ್ರಾಮಸ್ಥರು ಖುಷಿಯಾಗಿದ್ದಾರೆ.

ನಾವು ಎಲ್ಲಿಯು ಹೋಗಲ್ಲ:

ಗ್ರಾಮಸ್ಥೆ ಸಿದ್ದಮ್ಮ ತನ್ನ ಜಾನುವಾರುಗಳನ್ನ ಬಿಟ್ಟು ಎಲ್ಲೂ ಹೋಗಲ್ಲ ಎನ್ನುತ್ತಾರೆ. ಆರು ದಿನದಿಂದ ನಾವು ಹೇಗೋ ಉಪವಾಸ ವನವಾಸ ಮಾಡಿಕೊಂಡಿದ್ದೇವೆ. ಆದರೂ ನಾವು ಆಕಳು, ಕರುಗಳನ್ನು ಬಿಟ್ಟು ಹೋಗಲ್ಲ. ನಮಗೆ ಏನೆ ಕಷ್ಟವಾದರೂ ಅವುಗಳ ಜೊತೆಯೇ ಇರುತ್ತೇವೆಂದರು.

ಹೈನುಗಾರಿಕೆ ಹಾಗೂ ಕೃಷಿ ಕಾರ್ಯಕ್ಕೆ ಬೆನ್ನೆಲುಬಾದ ರೈತರ ಜೀವಕ್ಕೆ ಆಶ್ರಯವಾದ ಮೂಕ ಪ್ರಾಣಿಗಳ ಕಾಳಜಿಯನ್ನು ಜಾನುವಾರು ಮಾಲಿಕರು ತೋರಿದ್ದು ಮೆಚ್ಚುವಂಥದ್ದು.ವರದಿ: ನಾಗಪ್ಪ ಮಾಲಿಪಾಟೀಲ
Published by: Vijayasarthy SN
First published: October 19, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories