HOME » NEWS » District » SHIVAMOGGA NEWS BJP WINS IN CM BS YEDIYURAPPA HOMETOWN SIKARIPURA TOWN MUNICIPAL PRESIDENT POST MAK

ಶಿವಮೊಗ್ಗ; ಕೊನೆಗೂ ಸಿಎಂ ತವರು ಕ್ಷೇತ್ರವಾದ ಶಿಕಾರಿಪುರ ಪುರಸಭೆಯ ಗದ್ದುಗೆ ಹಿಡಿದ ಬಿಜೆಪಿ

ಚುನಾವಣೆಯಲ್ಲಿ ಲಕ್ಷ್ಮೀ ಮಹಾಲಿಂಗಪ್ಪ ಮತ್ತು ಸಾದಿಕ್ ಅವರಿಗೆ 12 ಮತಗಳು  ಬಿದ್ದಿವೆ. ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಮ್ಮ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ದಸ್ತಗಿರಿ ಅವರಿಗೆ  9 ಮತಗಳು ಲಭಿಸಿದವು.

news18-kannada
Updated:November 9, 2020, 4:22 PM IST
ಶಿವಮೊಗ್ಗ; ಕೊನೆಗೂ ಸಿಎಂ ತವರು ಕ್ಷೇತ್ರವಾದ ಶಿಕಾರಿಪುರ ಪುರಸಭೆಯ ಗದ್ದುಗೆ ಹಿಡಿದ ಬಿಜೆಪಿ
ಶಿಕಾರಿಪುರ ಪುರಸಭೆ.
  • Share this:
ಶಿವಮೊಗ್ಗ (ನವೆಂಬರ್​ 09); ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಬಿಜೆಪಿ ಅಧಿಕಾರದ ಚೂಕ್ಕಾಣಿ ಹಿಡಿದಿದೆ. ಶಿಕಾರಿಪುರ ಪುರಸಭೆಯ ಅಧ್ಯಕ್ಷ ಮತ್ತು ಉಪಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ.  ಮೂರು ಜನ ಕಾಂಗ್ರೆಸ್​ ಸದಸ್ಯರು ಅವರ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಹಿಂದೆ ಬಿಜೆಪಿ ಸೇರಿದ್ದರು. ಇದರಿಂದಾಗಿ ಅಧ್ಯಕ್ಷ ಮತ್ತು ಉಪಧ್ಯಾಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮೀ ಮಹಲಿಂಗಪ್ಪ ಅಧ್ಯಕ್ಷೆಯಾಗಿದೆ ಮತ್ತು  ಸಾದಿಕ್ ಉಪಧ್ಯಾಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೊನೆಗೂ ಯಡಿಯೂರಪ್ಪ ತವರು ಕ್ಷೇತ್ರದಲ್ಲಿ ಬಿಜೆಪಿ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ.

ಚುನಾವಣೆಯಲ್ಲಿ ಲಕ್ಷ್ಮೀ ಮಹಾಲಿಂಗಪ್ಪ ಮತ್ತು ಸಾದಿಕ್ ಅವರಿಗೆ 12 ಮತಗಳು  ಬಿದ್ದಿವೆ. ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಮ್ಮ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ದಸ್ತಗಿರಿ ಅವರಿಗೆ  9 ಮತಗಳು ಲಭಿಸಿದವು.  ಶಿಕಾರಿಪುರ ಪುರಸಭೆಯಲ್ಲಿ 23 ಜನ ಪುರಸಭೆ ಸದಸ್ಯರಿದ್ದು, ಇದರಲ್ಲಿ ಬಿಜೆಪಿ 8, ಕಾಂಗ್ರೆಸ್ 12 ಜನ ಮತ್ತು ಮೂರು ಜನ ಪಕ್ಷೇತರ ಸದಸ್ಯರು ಇದ್ದರು. ಕಾಂಗ್ರೆಸ್​ನ ಮೂರು ಜನ ಸದಸ್ಯರು ಈ ಹಿಂದೆ ರಾಜೀನಾಮೆ ಸಲ್ಲಿಸಿದ್ದರು.

ಈ ಕಾರಣದಿಂದಾಗಿ ಕಾಂಗ್ರೆಸ್  ಸದಸ್ಯರ ಸಂಖ್ಯೆ 12 ರಿಂದ 9 ಕ್ಕೆ ಇಳಿದಿತ್ತು. ಈ ಮೂರು ಜನ ಸದಸ್ಯರು ರಾಜೀನಾನೆ ನೀಡಿದ ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮೂರು ಜನ ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದರು. 8 ಜನ ಬಿಜೆಪಿ ಸದಸ್ಯರು ಮತ್ತು 3 ಜನ ಪಕ್ಷೇತರರು ಸೇರಿ ಒಟ್ಟು 11 ಸದಸ್ಯರ ಬಲ ಬಿಜೆಪಿಗೆ ಸಿಕ್ಕಿದೆ.

ಇದನ್ನೂ ಓದಿ : ಜೋ ಬಿಡೆನ್ ಘೋಷಿಸಲಿರುವ ಕೊರೋನಾ ಟಾಸ್ಕ್​ಪೋರ್ಸ್​ಗೆ ಭಾರತ ಮೂಲದ ಡಾ. ವಿವೇಕ್ ಮೂರ್ತಿಗೆ ನಾಯಕತ್ವ

ಜೊತೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ಇಂದು ಪುರಸಭೆ ಅಧ್ಯಕ್ಷ ಹಾಗೂ ಉಪಧ್ಯಾಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಗವಹಿಸಿ  ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ.
Youtube Video

ಹೀಗಾಗಿ 12 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧಿಕಾರಿ ಗದ್ದುಗೆ ಹಿಡಿಯುವ ಅವಕಾಶವನ್ನು ಕಾಂಗ್ರೇಸ್ ಪಕ್ಷ ಕಳೆದುಕೊಂಡಿತು.ಶಿವಮೊಗ್ಗ.
Published by: MAshok Kumar
First published: November 9, 2020, 4:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories